May 17, 2024

Bhavana Tv

Its Your Channel

ಮಳವಳ್ಳಿ ಪಟ್ಟಣದ ಪುರಸಭೆಯಲ್ಲಿ ಮತ ಚಲಾಯಿಸಿದ ಶಾಸಕ ಡಾ.ಕೆ.ಅನ್ನದಾನಿ

ಮಳವಳ್ಳಿ : ವಿಧಾನಪರಿಷತ್ ಚುನಾವಣೆಯಲ್ಲಿ ಶಾಸಕ ಡಾ.ಕೆ.ಅನ್ನದಾನಿ ಮಳವಳ್ಳಿ ಪಟ್ಟಣದ ಪುರಸಭೆಯಲ್ಲಿ ಮತದಾನ ಮಾಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ವಿಧಾನಪರಿಷತ್ ಚುನಾವಣೆಯಲ್ಲಿ ನನ್ನ ಹಕ್ಕನ್ನು ಚಲಾಯಿಸಿದ್ದೇನೆ. ಈ ಸಂದಭ೯ದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳುತ್ತೇನೆ. ಕೆಲವರಿಗಷ್ಟೆ ಸೀಮಿತವಾಗಿದ್ದ ಮತದಾನ ಸಾಮಾನ್ಯ ಜನರಿಗೂ ಮತದಾನದ ಹಕ್ಕನ್ನು ಅಂಬೇಡ್ಕರ್ ಕಲ್ಪಿಸಿಕೊಟ್ಟಿದ್ದಾರೆಂದು ತಿಳಿಸಿದರು.
ಪುರಸಭೆ ಜೆಡಿಎಸ್ ಸದಸ್ಯರು ಶಾಸಕರ ಜೊತೆಯಲ್ಲಿ ಆಗಮಿಸಿ ಸರದಿಯಲ್ಲಿ ನಿಂತು ಮತದಾನ ಮಾಡಿದರು.
ಇದೇ ಸಂದಭ೯ದಲ್ಲಿ ಪುರಸಭೆ ಉಪಾಧ್ಯಕ್ಷ ನಂದಕುಮಾರ್ ಸದಸ್ಯರಾದ ನೂರುಲ್ಲಾ ಜಯಸಿಂಹ . ಪ್ರಮೀಳ ಅಂಕರಾಜು.ಕುಮಾರ್ ಸವಿತ .ವೇದಾವತಿ ಸೇರಿದಂತೆ ಇತರರು ಇದ್ದರು.
ವಿಧಾನ ಪರಿಷತ್ ಗೆ ಮಂಡ್ಯ ಜಿಲ್ಲೆಯಿಂದ ಇಂದು ನಡೆದ ಮತದಾನ ಮಳವಳ್ಳಿ ತಾಲ್ಲೂಕಿನಲ್ಲಿ ಶಾಂತಿಯುತ ವಾಗಿ ನಡೆದಿದೆ.
ಒಟ್ಟು ೬೫೮ ಗ್ರಾ ಪಂ ಹಾಗೂ ಪುರಸಭಾ ಸದಸ್ಯರ ಪೈಕಿ ಬಂಡೂರು ಗ್ರಾ ಪಂ ಅಧ್ಯಕ್ಷೆ ಮುತ್ತಮ್ಮ ಅವರ ಸಾವಿನಿಂದಾಗಿ ಈ ಸಂಖ್ಯೆ ೬೫೭ ಕ್ಕೆ ಇಳಿದಿದ್ದು ಶಾಸಕರ ಮತ ಸೇರಿ ಒಟ್ಟು ೬೫೮ ಮಂದಿ ಮತದಾನದ ಹಕ್ಕು ಹೊಂದಿದ್ದು ಪ್ರತೀ ಪಂಚಾಯ್ತಿಗೆ ಒಂದು ಮತಗಟ್ಟೆ ಜೊತೆಗೆ ಪುರಸಭಾ ಸದಸ್ಯರಿಗೆ ಪುರಸಭೆ ಆವರಣದಲ್ಲಿ ಒಂದು ಮತಗಟ್ಟೆ ಸೇರಿದಂತೆ ಒಟ್ಟು ೪೦ ಮತಗಟ್ಟೆ ಗಳನ್ನು ತೆರೆಯಲಾಗಿತ್ತು.
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: