May 17, 2024

Bhavana Tv

Its Your Channel

ವಿಧಾನ ಪರಿಷತ್ ಚುನಾವಣೆಯಲ್ಲಿ ಎಲ್ಲಾ ಜೆಡಿಎಸ್ ಪಕ್ಷದ ಶಾಸಕರು ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಜೆಡಿಎಸ್ ಪಕ್ಷಕ್ಕೆ ಪೂರ್ಣ ವಿರಾಮ ಹಾಕಲಿದ್ದಾರೆ – ಬಿ ಸೋಮಶೇಖರ್

ಮಳವಳ್ಳಿ : ಮಂಡ್ಯ ಜಿಲ್ಲೆ ಜೆಡಿಎಸ್ ಪಕ್ಷದ ಪ್ರಬಲ ಕೋಟೆ ಎನ್ನುವ ಕಾಲ ಮುಗಿದಿದ್ದು ಈ ಪ್ರಬಲ ಕೋಟೆಯ ಮೊದಲ ಇಟ್ಟಿಗೆ ಕೆ ಆರ್ ಪೇಟೆಯಲ್ಲಿ ಕಳಚಿ ಬಿದ್ದಿದ್ದು ನಾಳಿನ ವಿಧಾನ ಪರಿಷತ್ ಚುನಾವಣೆಯಲ್ಲಿ ಎಲ್ಲಾ ಜೆಡಿಎಸ್ ಪಕ್ಷದ ಶಾಸಕರು ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಜೆಡಿಎಸ್ ಪಕ್ಷಕ್ಕೆ ಪೂರ್ಣ ವಿರಾಮ ಹಾಕಲಿದ್ದಾರೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ಸೋಮಶೇಖರ್ ಹೇಳಿದ್ದಾರೆ.

ಮಳವಳ್ಳಿಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ರಾಜ್ಯದಲ್ಲಿ ನಮ್ಮ ಜೆಡಿಎಸ್ ಪಕ್ಷ ಪ್ರಬಲವಾಗಿದೆ ಎಂದು ಹೇಳಿಕೊಳ್ಳುತ್ತಿದ್ದ ಜೆಡಿಎಸ್ ನಾಯಕರಿಗೆ ಕಳೆದ ಲೋಕಸಭಾ ಉಪ ಚುನಾವಣೆ ಹಾಗೂ ವಿಧಾನ ಸಭಾ ಉಪಚುನಾವಣೆಯಲ್ಲಿ ಆ ಪಕ್ಷ ತನ್ನ ಸಾಮಥ್ಯ ಕಳೆದು ಕೊಂಡಿರುವುದು ಸಾಬೀತಾಗಿದೆ, ಇದಕ್ಕೆಲ್ಲ ಜೆಡಿಎಸ್ ನಾಯಕರ ರಾಜಕೀಯ ದೊಂಬರಾಟವೇ ಕಾರಣವಾಗಿದ್ದು ಇದೆಲ್ಲವನ್ನೂ ಅರ್ಥ ಮಾಡಿಕೊಂಡಿರುವ ಜಿಲ್ಲೆಯ ಜೆಡಿಎಸ್ ಮತದಾರರ ಜೊತೆಗೆ ಕೆಲ ಕಾಂಗ್ರೆಸ್ ಮತದಾರರು ಕೂಡ ಗುಪ್ತವಾಗಿ ಬಿಜೆಪಿ ಅಭ್ಯರ್ಥಿ ಬಿ ಸಿ ಮಂಜು ಅವರನ್ನು ಬೆಂಬಲಿಸುವ ತೀರ್ಮಾನ ಕೈಗೊಂಡಿದ್ದು ಈ ಹಿನ್ನೆಲೆಯಲ್ಲಿ ಬಿ ಸಿ ಮಂಜು ಅವರ ಗೆಲುವು ನಿಶ್ಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಎರಡು ಭಾರಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ತಮ್ಮ ಅವಧಿಯಲ್ಲಿ ಚಾಲನೆಗೊಂಡಿದ್ದ ಇಗ್ಲೂರು ಬಲದಂಡೆ ಯೋಜನೆಯನ್ನು ಪೂರ್ಣಗೊಳಿಸಲೇ ಇಲ್ಲ, ಬದಲಾಗಿ ಮಳವಳ್ಳಿ ಯಿಂದ ಚನ್ನಪಟ್ಟಣ ರಾಮನಗರ ಕನಕಪುರ ಕ್ಕೆ ನೀರು ತೆಗೆದುಕೊಂಡು ಹೋದರು ಇದನ್ನು ತಡೆಯುವ ಕೆಲಸವನ್ನು ಇಬ್ಬರು ಶಾಸಕರು ಮಾಡಲೇ ಇಲ್ಲ ಬದಲಾಗಿ ಹಾಲಿ ಮಾಜಿ ಶಾಸಕರು ಕಮಿಷನ್ ಕಿತ್ತಾಟದಲ್ಲೇ ಮುಳುಗಿ ಹೋಗಿದ್ದು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಈ ಇಬ್ಬರಿಗೂ ತಕ್ಕ ಪಾಠ ಕಲಿಸಿ ಬಿಜೆಪಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಕೃಷ್ಣ, ಜಿಲ್ಲಾ ಮುಖಂಡರಾದ ಹೆಚ್ ಬಸವರಾಜು, ಪುರಸಭಾ ಸದಸ್ಯರಾದ ರವಿ, ಅಶೋಕ್ ಮತ್ತಿತರರು ಹಾಜರಿದ್ದರು.
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: