December 20, 2024

Bhavana Tv

Its Your Channel

ಎಂ ಇ ಎಸ್ ಪುಂಡರ ಪುಂಡಾಟಿಕೆಯನ್ನು ಖಂಡಿಸಿ ಆಟೋ ಚಾಲಕರು ಮತ್ತು ಮಾಲೀಕರಿಂದ ಬೃಹತ್ ಪ್ರತಿಭಟನೆ

ಮಳವಳ್ಳಿ : ಬೆಳಗಾವಿಯಲ್ಲಿ ಎಂ ಇ ಎಸ್ ಪುಂಡರ ಪುಂಡಾಟಿಕೆಯನ್ನು ಖಂಡಿಸಿ ಮಳವಳ್ಳಿ ಪಟ್ಟಣದಲ್ಲಿ ಇಂದು ಎಲ್ಲಾ ಸಂಘಗಳ ಆಟೋ ಚಾಲಕರು ಮತ್ತು ಮಾಲೀಕರು ಬೃಹತ್ ಪ್ರತಿಭಟನೆ ನಡೆಸಿದರು.
ಪಟ್ಟಣದ ಶಾಂತಿ ಕಾಲೇಜು ಮುಂಭಾಗದಿAದ ನೂರಾರು ಆಟೋಗಳ ಸಮೇತ ಪ್ರತಿಭಟನಾ ಮೆರವಣಿಗೆ ಹೊರಟ ಆಟೋ ಚಾಲಕರು ಮತ್ತು ಮಾಲೀಕರು ದಾರಿಯುದ್ದಕ್ಕೂ ಎಂ ಇ ಎಸ್ ಪುಂಡರು ಹಾಗೂ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಇಲ್ಲಿನ ಪೇಟೆ ವೃತ್ತ ತಲುಪಿದ ಮೆರವಣಿಗೆ ಕಾರರು ವೃತ್ತದ ಸುತ್ತ ಮಾನವ ಸರಪಳಿ.ನಿರ್ಮಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಯುವ ಮುಖಂಡ ತಳಗವಾದಿ ಪ್ರಕಾಶ್, ಅಖಿಲ ಕರ್ನಾಟಕ ವಾಲ್ಮೀಕಿ ಬಾದಷಾ ಕಿಚ್ಚ ಸುದೀಪ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಶಿವರಾಜ್ ನಾಯಕ್, ತಾಲ್ಲೂಕು ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಮಂಜುನಾಥ್ ಮಾಜಿ ಪುರಸಭಾಧ್ಯಕ್ಷ ಗಂಗರಾಜು ಅರಸ್ ಅವರು ಗಳು ಕನ್ನಡ ನೆಲದಲ್ಲಿದ್ದು ಕೊಂಡೇ ಕನ್ನಡ ಬಾವುಟವನ್ನು ಸುಡುವುದರ ಜೊತೆಗೆ ಸಂಗೊಳ್ಳಿ ರಾಯಣ್ಣ ಪ್ರತಿಯನ್ನು ಜಖಂ ಗೊಳಿಸಿ ಹಲವಾರು ಸರ್ಕಾರಿ ವಾಹನ ಗಳಿಗೆ ಕಲ್ಲು ತೂರಿ ಬೆಂಕಿ ಹಚ್ಚಿರುವುದು ಎಂ ಇ ಎಸ್ ನ ಪುಂಡಾಟಿಕೆಯ ಪರಮಾಧಿ ಯಾಗಿದೆ ಎಂದು ಖಂಡಿಸಿದರು.
ಬಹಳ ವರ್ಷಗಳಿಂದ ಎಂ ಇ ಎಸ್ ಇಂತಹ ಪುಂಡಾಟಿಕೆ ಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದರು ಅವರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರಗಳ ಧೋರಣೆಯನ್ನು ಖಂಡಿಸಿದರು.
ಕೂಡಲೇ ಎಂ ಇ ಎಸ್ ಸಂಘಟನೆಯನ್ನು ನಿಷೇಧಿಸುವುದರ ಜೊತೆಗೆ ಅವರ ವಿರುದ್ಧ ಉಗ್ರ ಕ್ರಮ ಕೈಗೊಳ್ಳಬೇಕು ಇಲ್ಲ ವಾದಲ್ಲಿ ಎಲ್ಲಾ ದಿಕ್ಕುಗಳಿಂದಲೂ ಬೆಳಗಾವಿಗೆ ಮುತ್ತುಗೆ ಹಾಕಿ ಎಂ ಇ ಎಸ್ ನ ಮರಾಠಿಗರನ್ನು ಹುಟ್ಟಡಗಿಸಬೇಕಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷ ಉಮೇಶ್, ಮಾದೇಶ್ , ಶಿವಲಿಂಗೇಗೌಡ, ಮತ್ತಿತರರು ಪಾಲ್ಗೊಂಡಿದ್ದರು.
ನAತರ ತಾಲ್ಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: