May 16, 2024

Bhavana Tv

Its Your Channel

ಅಯ್ಯಪ್ಪಸ್ವಾಮಿ ಭಕ್ತರಿಂದ ಉಮಾಮಹೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಮಳವಳ್ಳಿ: ತಾಲ್ಲೂಕಿನ ತಳಗವಾದಿ ಗ್ರಾಮದ ೪೫ಕ್ಕೂ ಹೆಚ್ಚು ಅಯ್ಯಪ್ಪಸ್ವಾಮಿ ಭಕ್ತರು ಶಬರಿಮಲೆ ಯಾತ್ರೆಯನ್ನು ಕೈಗೊಂಡ ಹಿನ್ನಲೆಯಲ್ಲಿ ಉಮಾಮಹೇಶ್ವರಿ ದೇವಸ್ಥಾನದ ಆವರಣದಲ್ಲಿ ವಿಶೇಷ ಪೂಜೆ ನಡೆಸಲಾಯಿತು.
ಗ್ರಾಮದ ಮಧ್ಯೆಭಾಗದಲ್ಲಿ ಇರುವ ಉಮಾಮಹೇಶ್ವರಿ ಹಾಗೂ ಹನುಮಂತರಾಯಸ್ವಾಮಿ ದೇವಸ್ಥಾನ ಆವರಣದಲ್ಲಿ ಕಳೆದ ೧೫ ದಿನಗಳಲ್ಲಿ ಅಯ್ಯಪ್ಪಸ್ವಾಮಿ ಭಕ್ತರು ಮಾಲೆ ಧರಿಸಿ ಸ್ವಾಮಿಯ ಆರಾಧನೆಯನ್ನು ತೊಡಿಸಿಕೊಂಡಿದ್ದರು. ಶಬರಿಮಲೆಯ ಅಯ್ಯಪ್ಪಸ್ವಾಮಿ ದರ್ಶನಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ವಿಶೇಷ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಗ್ರಾ.ಪಂ.ಮಾಜಿ ಸದಸ್ಯ ಕಾಳೇಗೌಡ ಮಾತನಾಡಿ, ೧೯೮೩ರಿಂದ ಗ್ರಾಮದ ಹಲವು ಅಯ್ಯಪ್ಪಸ್ವಾಮಿ ಯಾತ್ರೆಯನ್ನು ಕೈಗೊಳ್ಳುತ್ತಿದ್ದು, ಉಮಾಮಹಶ್ವರಿ ದೇವಿಯ ಸನ್ನಿದಿಯಿಂದ ಭಕ್ತರು ತೆರಳುವ ವಾಡಿಕೆಯಾಗಿದೆ. ದೇವಿಯ ದಯೆಯಿಂದ ಇಲ್ಲಿಯವರೆಗೆ ಯಾವುದೇ ತೊಂದರೆಯಾಗಿಲ್ಲ. ಈ ಬಾರಿ ೪೫ಕ್ಕೂ ಹೆಚ್ಚು ಭಕ್ತರು ಮಾಲೆ ಧರಿಸಿ ಯಾತ್ರೆ ಕೈಗೊಂಡಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಕೋವಿಡ್ ನಿಂದ ಜನರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದು, ಸ್ವಾಮಿಯ ಕೃಪೆಯಿಂದ ಕೋವಿಡ್ ಎಂಬ ಮಹಾಮಾರಿ ತೊಲಗಲಿ ಎಂದು ಆಶಿಸಿದರು.
ಮರಿಸ್ವಾಮಿ, ದೇಶಯ್ಯ, ಟಿ.ಸಿ.ಚನ್ನಯ್ಯ, ಜಯರಾಮು, ದಿಲೀಪ್ ಕುಮಾರ್, ಅಜಯ್ ಸೇರಿದಂತೆ ಹಲವರು ಇದ್ದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: