ಮಳವಳ್ಳಿ : ವಿಷಪೂರಿತ ಹಾವು ಕಚ್ಚಿ ರೈತನೋರ್ವ ಸಾವನ್ನಪ್ಪಿರುವ ದುರ್ಘಟನೆ ಮಳವಳ್ಳಿ ತಾಲ್ಲೂಕಿನ ದಡದಪುರ ಗ್ರಾಮದಲ್ಲಿ ಜರುಗಿದೆ.
ಈ ಗ್ರಾಮದ ಕರಿಗೂಳಿ ನಾಗರಾಜು ಎಂಬುವರೇ ಮೃತಪಟ್ಟ ದುರ್ದೈವಿಯಾಗಿದ್ದು ಸುಮಾರು ೫೦ ವರ್ಷ ವಯಸ್ಸಿನ ಇವರು ಗುರುವಾರ ಮಧ್ಯಾಹ್ನ ೨ ಗಂಟೆ ಸಮಯದಲ್ಲಿ ತಮ್ಮ ಗದ್ದೆಯಲ್ಲಿ ಭತ್ತದ ಒಕ್ಕಣೆ ಮಾಡುತ್ತಿದ್ದಾಗ ಈ ಅವಘಡ ಜರುಗಿದೆ.
ಒಕ್ಕಣೆ ಮುಗಿಸಿ ಭತ್ತದ ಚೀಲಗಳನ್ನು ಗಾಡಿಗೆ ತುಂಬುತ್ತಿದ್ದಾಗ ಚೀಲಗಳ ಮರೆಯಲ್ಲಿ ಅಡಗಿದ್ದ ನಾಗರ ಹಾವು ಕಚ್ಚಿತ್ತೆನ್ನಲಾಗಿದೆ.
ಅಸ್ವಸ್ಥಗೊಂಡ ಇವರನ್ನು ತಕ್ಷಣ ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆಂದು ವರದಿಯಾಗಿದೆ.
ಮೃತ ನಾಗರಾಜು ಅವರು ಪತ್ನಿ ಇಬ್ಬರು ಪುತ್ರಿಯರು ಓರ್ವ ಪುತ್ರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ