ಮಳವಳ್ಳಿ : ಸಹಕಾರ ಸಂಘದ ಅಭಿವೃದ್ಧಿಯೇ ನಮ್ಮ ಮೂಲ ಮಂತ್ರವಾಗಿದ್ದು ಆ ಮೂಲಕ ರೈತರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವ ಗುರಿ ಹೊಂದಲಾಗಿದೆ ಎಂದು ಮಳವಳ್ಳಿ ತಾಲೂಕು ಚೊಟ್ಟನಹಳ್ಳಿ ಪ್ರಾಥಮಿಕ ಸೇವಾ ಸಹಕಾರ ಸಂಘದ ಅಧ್ಯಕ್ಷ ಎಂ ಬಸವರಾಜು ಹೇಳಿದ್ದಾರೆ.
ಸಂಘದ ಆವರಣದಲ್ಲಿ ಏರ್ಪಾಡಾಗಿದ್ದ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು ಈ ನಿಟ್ಟಿನಲ್ಲಿ ಸಂಘದ ಖಾಲಿ ಉಳಿದಿದ್ದ ಅಷ್ಟೂ ಜಾಗದಲ್ಲಿ ಕಟ್ಟಡವನ್ನು ನಿರ್ಮಿಸಿ ಈ ಕಟ್ಟಡದಲ್ಲಿ ರೈತರಿಗೆ ಅಗತ್ಯ ವಾದ ರಸ ಗೊಬ್ಬರ ಮಾರಾಟ ಮಳಿಗೆ, ಪಶು ಆಹಾರ ಮಳಿಗೆಗಳನ್ನು ತೆರೆದಿರುವುದರ ಜೊತೆಗೆ ತಮ್ಮ ಆಡಳಿತಾವಧಿಯಲ್ಲಿ ರೈತರಿಗೆ ಬೆಳೆ ಸಾಲ, ರೇಷ್ಮೆ ಹುಳು ಸಾಕಾಣಿಕೆ ಮನೆ ಸಾಲ, ಸ್ವಸಹಾಯ ಸಂಘಗಳ ಸಾಲ ಸೇರಿದಂತೆ ಒಟ್ಟು ಆರು ಕೋಟಿಗೂ ಹೆಚ್ಚಿನ ಸಾಲ ನೀಡಲಾಗಿದೆ ಎಂದು ವಿವರಿಸಿದರು.
ಎಲ್ಲಿ ಹೊಸ ಹೊಸ ಯೋಜನೆ ಗಳ ಅಭಿವೃದ್ಧಿ ಕಾರ್ಯಗಳು ಚಾಲ್ತಿಯಲ್ಲಿರುತ್ತದೆಯೋ ಅಲ್ಲಿ ಹೊಸ ಹೊಸ ಪ್ರಶ್ನೆಗಳು ಚೆರ್ಚೆಗಳು ಮೂಡುವುದು ಸಹಜ ಎಂದ ಬಸವರಾಜು ಸಭೆಯಲ್ಲಿ ಮೂಡಿಬಂದ ಸಲಹೆ ಸೂಚನೆಗಳನ್ನು ಆಧರಿಸಿ ಮುಂದೆ ಸಂಘದ ಅಭಿವೃದ್ಧಿ ವೇಗವನ್ನು ಹೆಚ್ಚಿಸುವುದಾಗಿ ತಿಳಿಸಿದರು.
ಇದಕ್ಕೂ ಮೊದಲು ನಡೆದ ಚರ್ಚೆಯಲ್ಲಿ ಸಂಘದ ನಿರ್ದೇಶರಾಗಿದ್ದ ದಲಿತ ಸಮುದಾಯದ ಚೌಡಯ್ಯ ಅವರು ತೀರಿಕೊಂಡು ನಾಲ್ಕು ವರ್ಷಗಳೇ ಕಳೆದರೂ ಇನ್ನೂ ಆ ಸ್ಥಾನಕ್ಕೆ ಬೇರೊಬ್ಬರನ್ನು ಆಯ್ಕೆ ಮಾಡದೆ ಆ ವರ್ಗದವರನ್ನು ವಂಚಿಸಲಾಗಿದೆ ಎಂದು ಮುಖಂಡರಾದ ಚಂದಹಳ್ಳಿ ಶ್ರೀಧರ್, ಸಿ ಎಸ್ ರಮೇಶ್ ಸೇರಿದಂತೆ ಇತರರು ತೀವ್ರ ಅಸಮಧಾನ ವ್ಯಕ್ತಪಡಿಸಿದರು. ಸಾಲ ಮಾಡಿ ಕಟ್ಟಡ ನಿರ್ಮಾಣ ಮಾಡಿರುವ ಕುರಿತು ಮಾಜಿ ಜಿ ಪಂ ಸದಸ್ಯರಾದ ಸತೀಶ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಅಧ್ಯಕ್ಷ ಬಸವರಾಜು ಅವರು ಚೌಡಯ್ಯ ಅವರ ಕುಟುಂಬದಲ್ಲಿ ಸಾಲ ಪಡೆದ ಷೇರು ದಾರರು ಯಾರೂ ಇಲ್ಲದ ಕಾರಣ ಬೇರೆಯವರನ್ನು ಆಯ್ಕೆ ಮಾಡಿದರೆ ಚುನಾವಣೆ ನಡೆಸ ಬೇಕಾಗುತ್ತದೆ ಇದು ಸಂಘಕ್ಕೆ ಹೊರೆ ಆಗುತ್ತದೆ ಎಂಬ ಕಾರಣದಿಂದ ಆ ಸ್ಥಾನಕ್ಕೆ ಯಾವುದೇ ಆಯ್ಕೆ ನಡೆಯಲಿಲ್ಲ ಎಂದರು. ಜೊತೆಗೆ ಸಹಕಾರ ಸಂಘಕ್ಕೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಾಲ ಮಂಜೂರಾಗಿದ್ದರಿAದ ಅದನ್ನು ಬಳಸಿ ಕೊಳ್ಳಲಾಗಿದೆ ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ಚಿಕ್ಕುನ್ನೇಗೌಡ, ನಿರ್ಧೇಶಕರಾದ ಸುರೇಶ್, ಸಿದ್ದರಾಜು, ರಾಚೇಗೌಡ, ನಾಗರಾಜು, ಲೋಕೇಶ್ ಗೌಡ, ಸಿಇಒ ಶಿವಮಾದೇಗೌಡ, ಮತ್ತಿತರರು ಪಾಲ್ಗೊಂಡಿದ್ದರು.
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ