December 22, 2024

Bhavana Tv

Its Your Channel

ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾOಗ ದಾನ: ಐವರಿಗೆ ಜೀವದಾನ

ಮಳವಳ್ಳಿ : ಅನಾರೋಗ್ಯ ದಿಂದ ತಲೆಯಲ್ಲಿ ಗೆಡ್ಡೆ ಬೆಳೆದು ಮಿದುಳು ನಿಷ್ಕ್ರಿಯಗೊಂಡಿದ್ದ ಮಳವಳ್ಳಿ ತಾಲ್ಲೂಕಿನ ಕೋರೇಗಾಲ ಗ್ರಾಮದ ಮಹಿಳೆಯ ಕುಟುಂಬದವರು, ಅಂಗಾAಗ ದಾನದ ಮೂಲಕ ಐವರಿಗೆ ಹೊಸ ಜೀವನ ನೀಡಿ ಸಾರ್ಥಕತೆ ಮೆರೆದಿದ್ದಾರೆ.
ಗ್ರಾಮದ ಪುಟ್ಟರಾಮೇಗೌಡ ಅವರ ಪತ್ನಿ ೪೫ ವರ್ಷದ ನಾಗಮ್ಮ ಎಂಬ ಮಹಿಳೆಯು ಕೆಲ ದಿನಗಳಿಂದ ಅನಾರೋಗ್ಯ ದಿಂದ ಬಳಲುತ್ತಿದ್ದರು. ಹೀಗಾಗಿ ಕುಟುಂಬದ ಸದಸ್ಯರು ಮೈಸೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿನ ವೈದ್ಯರು ಮಹಿಳೆಯ ತಲೆಯಲ್ಲಿ ಗೆಡ್ಡೆ ಬೆಳೆದಿದ್ದು ಮೆದುಳು ನಿಷ್ಕ್ರಿಯಗೊಂಡಿದೆ. ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ತಿಳಿಸಿದರು. ಮತ್ತೆ ಮಳವಳ್ಳಿಯ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅಂಗಾAಗ ದಾನ ಮಾಡುತ್ತೀರಾ ಎಂದು ವೈದ್ಯರು ಪ್ರಶ್ನಿಸಿದರು.
ನಾಗಮ್ಮ ಅವರ ಮಗ ಚರಣ್ ನಮ್ಮ ಅಮ್ಮ ಹೇಗಿದ್ದರೂ ಬದುಕುವುದಿಲ್ಲ. ಅಂಗಾAಗ ದಾನ ಮಾಡಿರುವುದರಿಂದ ನಾಲ್ಕೈದು ಮಂದಿಗೆ ಬಾಳು ಸಿಗಲಿದೆ ಎಂದು ತಂದೆಯ ಒಪ್ಪಿಗೆ ಪಡೆದು ಮೈಸೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಅಂಗಾAಗ ದಾನ ಮಾಡಿದ್ದಾರೆ.
ಶನಿವಾರ ಸಂಜೆ ನಡೆದ ಶಸ್ತ್ರಕ್ರಿಯೆ ಮೂಲಕ ಯಕೃತ್, ಎರಡು ಮೂತ್ರಪಿಂಡಗಳನ್ನು ಅಪೋಲೋ ಬಿಜಿಎಸ್ ಆಸ್ಪತ್ರೆಯ ಇಬ್ಬರು ರೋಗಿಗಳಿಗೆ, ಲಿವರ್ ಹಾಗೂ ಹೃದಯದ ಕವಚವನ್ನು ಗ್ರೀನ್ ಕಾರಿಡರ್ ನಿಯಮದಲ್ಲಿ ಜೀರೋ ಟ್ರಾಫಿಕ್ ನಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು. ಎರಡು ಕಣ್ಣುಗಳನ್ನು ಮೈಸೂರಿನ ಐ ಬ್ಯಾಂಕ್ ಗೆ ನೀಡಲಾಗಿದೆ.
ನಾಗಮ್ಮ ಅವರ ಮೃತದೇಹವನ್ನು ಕುಟುಂಬದ ಸದಸ್ಯರಿಗೆ ಆಸ್ಪತ್ರೆಯಿಂದ ಹಸ್ತಾಂತರ ಮಾಡುವ ವೇಳೆ ಆಸ್ಪತ್ರೆಯ ವೈದ್ಯರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಿಬ್ಬಂದಿಗಳು ಸಾಲಾಗಿ ನಿಂತು ಗೌರವ ಸಲ್ಲಿಸಿದರು

ವರದಿ:ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: