May 2, 2024

Bhavana Tv

Its Your Channel

ಶಿವನಸಮುದ್ರದ ಸರ್ಕಾರಿ ಪ್ರಾಥಮಿಕ ಶಾಲೆಯ 12 ಮಕ್ಕಳಿಗೆ ಕರೋನಾ ಸೋಂಕು ದೃಢ

ಮಳವಳ್ಳಿ : ಮಳವಳ್ಳಿ ತಾಲ್ಲೂಕಿನಾದ್ಯಂತ ಕರೋನಾ ಮೂರನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಬೆನ್ನಲ್ಲೇ ಮೂರನೇ ಅಲೆಗೆ ಮೊದಲ ವ್ಯಕ್ತಿಯೋರ್ವ ಬಲಿಯಾಗಿದ್ದಾರೆ.
ತಾಲೂಕಿನ ಕಂಚಗಳ್ಳಿ ಗ್ರಾಮದ 79 ವರ್ಷ ವಯಸ್ಸಿನ ಈ ವೃದ್ದರು ಕರೋನ ಸೋಂಕಿಗೆ ಒಳಗಾಗಿ ತೀವ್ರ ಅಸ್ವಸ್ಥರಾಗಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಜೆ ಎಸ್ ಎಸ್ ಆಸ್ಪತ್ರೆಗೆ ದಾಖಲಿಸಲಾಗಿ ತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು ಇದರೊಂದಿಗೆ ಕರೋನ 3ನೇ ಅಲೆ ಮಹಾಮಾರಿಗೆ ಬಲಿಯಾದ ಮೊದಲ ವ್ಯಕ್ತಿಯಾಗಿದ್ದಾರೆ .
ಮೃತ ವ್ಯಕ್ತಿಯ ಅಂತ್ಯಸAಸ್ಕಾರವನ್ನು ಹಿಂದೂಪರ ಸಂಘಟನೆಗಳ ಪದಾಧಿಕಾರಿಗಳು ಹಿಂದೂ ಧಾರ್ಮಿಕ ವಿಧಿವಿಧಾನದಂತೆ ಮೃತ ವ್ಯಕ್ತಿಗೆ ಪೂಜೆ ಸಲ್ಲಿಸಿ ನೆನ್ನೆ ಬುಧವಾರ ಅಂತ್ಯಕ್ರೀಯೆ ನೆರವೇರಿಸಿದರು
ಹಿಂದೂಪರ ಸಂಘಟನೆಗಳಾದ ವಿಶ್ವ ಹಿಂದು ಪರಿಷತ್, ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಬಜರಂಗದಳದ ಕಾರ್ಯಕರ್ತರಾದ ಶ್ರೀಕಂಠಸ್ವಾಮಿ, ಪ್ರಜ್ವಲ್, ಚೇತನ್, ರವಿ ಗೋಪಿ, ರವರುಗಳು ಸ್ವಯಂ ಪ್ರೇರಿತರಾಗಿ ತೆರಳಿ ಮೈಸೂರಿನ ಜೆಎಸ್ ಎಸ್ ಆಸ್ಪತ್ರೆಯಿಂದ ಬಂದ ಕರೋನಾ ವ್ಯಕ್ತಿಯ ಶವವನ್ನು ವಿಧಿವತ್ತಾಗಿ ಪೂಜೆ ಸಲ್ಲಿಸಿ ಶವಸಂಸ್ಕಾರ ನಡೆಸಿದರು .
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರುಗಳು ಕುಟುಂಬಸ್ಥರು ಸಂಕಷ್ಟದಲ್ಲಿ ಕುಟುಂಬದ ನೆರವಿಗೆ ಬಂದು ಶವಸಂಸ್ಕಾರ ನಡೆಸಿದ ಹಿಂದೂಪರ ಸಂಘಟನೆಗಳ ಸೇವೆಗೆ ಪ್ರಶಂಸೆ ವ್ಯಕ್ತಪಡಿಸಿದರು
ಮಳವಳ್ಳಿ ಯಲ್ಲಿ ಕರೋನ ಆರ್ಭಟ ಮುಂದುವರೆದಿದ್ದು ಅದರಲ್ಲೂ ಶಾಲಾ ಮಕ್ಕಳತ್ತ ಈ ಕ್ರೂರಿ ಕರೋನ ತನ್ನ ಕದಂಬ ಬಾಹು ಚಾಚಿದೆ. ತಾಲೂಕಿನ ಶಿವನಸಮುದ್ರದ ಸರ್ಕಾರಿ ಪ್ರಾಥಮಿಕ ಶಾಲೆಯ 12 ಮಂದಿ ಮಕ್ಕಳು ಹಾಗೂ ಒಬ್ಬ ಅಡುಗೆ ಸಹಾಯಕಿಗೆ ಕರೋನ ಒಕ್ಕರಿಸಿದೆ.
ಈ ಶಾಲೆಯ ಬಾಲಿಕಿಯೊಬ್ಬಳು ತನ್ನ ತಾಯಿಯ ಜೊತೆ ಓ ಶಕ್ತಿ ಯಾತ್ರೆಗೆ ಹೋಗಿ ಬಂದಿದ್ದು ಆ ಮಗುವಿಗೆ ಕೋವಿಡ್ ಪರೀಕ್ಷೆ ನಡೆಸಿದಾಗ ಸೋಂಕು ತಗುಲಿರುವುದು ದೃಡ ಪಟ್ಟಿದ್ದು ಇದರಿಂದಾಗಿ ಶಾಲೆಯ ಇತರೆ ಮಕ್ಕಳು ಹಾಗೂ ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿಗೆ ಸಹ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು.
ಇದರಲ್ಲಿ ಓ ಶಕ್ತಿಗೆ ತೆರಳಿದ್ದ ಬಾಲಕಿ ಅಲ್ಲದೆ ಇತರೆ 12 ಮಕ್ಕಳು ಜೊತೆಗೆ ಒಬ್ಬ ಆಡುಗೆ ಸಹಾಯಕಿಗೆ ಸೋಂಕು ದೃಡಪಟ್ಟಿದ್ದು ಇದರೊಂದಿಗೆ ಈ ಶಾಲೆಯ 14 ಮಂದಿ ಕರೋನ ಸೋಂಕು ತಗುಲಿದಂತಾಗಿದೆ.
ಇದಲ್ಲದೆ ಇದೇ ಶಿವನಸಮುದ್ರ ದಲ್ಲಿ ಇರುವ ಮತ್ತೊಂದು ಶಾಲೆಯಾದ ಕೆಇಬಿ ಶಾಲೆಯ ಇಬ್ಬರು ಮಕ್ಕಳಿಗೆ ಸೋಂಕು ತಗುಲಿದೆ ಎಂದು ವರದಿಯಾಗಿದೆ.

ವರದಿ: ಮಲ್ಲಿಕಾರ್ಜುನ ಸ್ವಾಮಿಳವಳ್ಳಿ

error: