May 3, 2024

Bhavana Tv

Its Your Channel

ಮಳವಳ್ಳಿ ತಾಲ್ಲೂಕಿನಿಂದ ಎರಡು ಸಾವಿರಕ್ಕೂ ಹೆಚ್ಚು ಕಾಂಗ್ರೇಸ್‌ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು‌ ಮೇಕೆದಾಟು ಪಾದಯಾತ್ರೆಗೆ ಭಾಗವಹಿಸಲಿದ್ದಾರೆ

ಮಳವಳ್ಳಿ ‌: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ‌ನಡೆಯುತ್ತಿರುವ ಪಾದಯಾತ್ರೆ ಯಲ್ಲಿ 5 ನೇ ದಿನವಾದ ನಾಳೆ ಗುರುವಾರ ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಮುಖಂಡರು ‌ಹಾಗೂ ಕಾರ್ಯಕರ್ತರು ಪಾಲ್ಗೊಳ್ಳುವ ಅವಕಾಶ‌ ನೀಡಲಾಗಿದ್ದು ನಾಳೆ ಮಳವಳ್ಳಿ ತಾಲ್ಲೂಕಿನಿಂದ ಎರಡು ಸಾವಿರಕ್ಕೂ ಹೆಚ್ಚು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಲಿ ದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ ಜೆ ದೇವರಾಜು ತಿಳಿಸಿದ್ದಾರೆ.
ಮಳವಳ್ಳಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ‌ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು ನಾಳೆ ಬೆಳಿಗ್ಗೆ ತಾಲ್ಲೂಕಿನ ವಿವಿಧ ಭಾಗಗಳಿಂದ ಪಟ್ಟಣಕ್ಕೆ ಬಂದು ಸೇರುವ ಕಾರ್ಯಕರ್ತರು 7.30 ಕ್ಕೆ ಮಳವಳ್ಳಿ ಯಿಂದ ರಾಮನಗರಕ್ಕೆ ತಲುಪಿ ಅಲ್ಲಿಂದ ಬಿಡದಿ‌ ವರೆಗೆ ಪಾದಯಾತ್ರೆ ಯಲ್ಲಿ ಪಾಲ್ಗೊಳ್ಳುವರು‌ ಎಂದು ‌ತಿಳಿಸಿದರು.
ಸರ್ಕಾರದ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಈ ಪಾದಯಾತ್ರೆಗೆ ತೆರಳುತ್ತಿದ್ದು ಸಾಮಾಜಿಕ ಅಂತರ ಕಾಪಾಡುವ ಸಲುವಾಗಿ ಸುಮಾರು 40 ಬಸ್ ಗಳನ್ನು ತಾಲೂಕಿನ ಪಾದಯಾತ್ರಿಗಳಿಗೆ ಬಳಸಿಕೊಳ್ಳಲಾಗುತ್ತಿದ್ದು ಮೂರು ಆಸನಗಳ ಸೀಟ್ ನಲ್ಲಿ ಇಬ್ಬರು, ಎರಡು ಆಸನಗಳ ಸೀಟ್ ನಲ್ಲಿ ಒಬ್ಬರು ಮಾತ್ರ ಕುಳಿತು ‌ಪ್ರಯಾಣಿಸಲಿದ್ದಾರೆ ಎಂದು ವಿವರಿಸಿದರು.
ಈ‌ ಪಾದಯಾತ್ರೆಗೆ ತೆರಳುವ ಪ್ರತಿಯೊಬ್ಬ ಮುಖಂಡರು ‌ಕಾರ್ಯಕರ್ತರು ಬಿಳಿಪಂಚೆ ಯುಟ್ಟು ಪಾದಯಾತ್ರೆಯಲ್ಲಿ ಭಾಗವಹಿಸುತ್ತಿರುವುದು ವಿಶೇಷ ಎಂದ ದೇವರಾಜು ಅವರು ಕಳೆದ 9ರಂದು ಪಾದಯಾತ್ರೆಗೆ ಬೈಕ್ ಜಾಥ ನಡೆಸಿದ ಕಾಂಗ್ರೆಸ್ ಮುಖಂಡರ ಮೇಲೆ ‌ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿರುವುದನ್ನು ಖಂಡಿಸಿ ಇಂತಹ‌ ಬೆದರಿಕೆಗೆ ಹೆದರುವುದಿಲ್ಲ ಎಂದು ಹೇಳಿದರು.
ಗೋಷ್ಠಿಯಲ್ಲಿ ಮಾಜಿ ತಾ ಪಂ ಅಧ್ಯಕ್ಷರಾದ ಆರ್ ಎನ್ ವಿಶ್ವಾಸ್, ವಿ‌ ನಾಗೇಶ್, ಪುರಸಭಾ ಸದಸ್ಯರಾದ ರಾಜಶೇಖರ್, ಮುಖಂಡರಾದ ಕಿರಣ್ ಶಂಕರ್, ಪ್ರಕಾಶ್, ಶಿವರಾಜ್ ನಾಯಕ್, ಕೃಷ್ಣ, ಮತ್ತಿತರರು ಪಾಲ್ಗೊಂಡಿದ್ದರು.

ವರದಿ; ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: