ಳವಳ್ಳಿ : ಮೋಟಾರ್ ರಿವೈಂಡಿಗ್ ಅಂಗಡಿಯೊAದರ ಬೀಗ ಮುರಿದು ಅಂಗಡಿಯಲ್ಲಿದ್ದ ಬೋರ್ ವೆಲ್ ಮೋಟಾರ್ ಗಳು ಹಾಗೂ ರಿವೈಂಡಿAಗ್ ವೈರ್ ಬಂಡಲ್ ಗಳನ್ನು ಕಳುವು ಮಾಡಿರುವ ದುಷ್ಕೃತ್ಯವೊಂದು ಮಳವಳ್ಳಿ ತಾಲೂಕಿನ ಬೆಳಕವಾಡಿ ಗ್ರಾಮದಲ್ಲಿ ಜರುಗಿದೆ.
ಗ್ರಾಮದ ಮಳವಳ್ಳಿ – ಬೆಳಕವಾಡಿ ಮುಖ್ಯ ರಸ್ತೆಯಲ್ಲಿ ರುವ ನಂದಿ ರಿವೈಂಡಿಗ್ ವರ್ಕ್ಸ್ ಎಂಬ ಅಂಗಡಿಗೆ ಶನಿವಾರ ರಾತ್ರಿ ಲಗ್ಗೆ ಇಟ್ಟಿರುವ ಕಳ್ಳರು ಅಂಗಡಿಯ ಬಾಗಿಲು ಮುರಿದು ಒಳ ನುಗ್ಗಿ ಅಂಗಡಿಯಲ್ಲಿದ್ದ ಬೋರ್ ವೆಲ್‌ಗೆ ಅಳವಡಿಸುವ 15 ನೀರೆತ್ತುವ ಪಂಪ್ ಮೋಟಾರ್‌ಗಳು 4-5 ರಿವೈಂಡಿAಗ್ ವೈರ್ ಬಂಡಲ್ ಗಳನ್ನು ಕಳುವು ಮಾಡಿಕೊಂಡು ಪರಾರಿಯಾಗಿದ್ದು ಕಳುವಿನ ಒಟ್ಟು ಮೌಲ್ಯ 1 ಲಕ್ಷದ 25 ಸಾವಿರ ರೂಗಳೆಂದು ಹೇಳಲಾಗಿದೆ.
ಈ ಅಂಗಡಿಯನ್ನು ಇದೇ ಗ್ರಾಮದ ಯೋಗೇಶ್ ಮತ್ತು ನವೀನ್ ಕುಮಾರ್ ಎಂಬ ನಿರುದ್ಯೋಗಿ ಯುವಕರು ಜಂಟಿಯಾಗಿ ಕಳೆದ 9 ವರ್ಷಗಳಿಂದ ನಡೆಸುತ್ತಿದ್ದರು ಎಂದು ಗೊತ್ತಾಗಿದೆ.
ಸ್ಥಳಕ್ಕೆ ಪಿಎಸ್ ಐ ಅಶೋಕ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಬೆಳಕವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ