April 29, 2024

Bhavana Tv

Its Your Channel

ಶ್ರೀ ಭಕ್ತ ಕನಕದಾಸ ಕ್ರೀಡಾಂಗಣಕ್ಕೆ ಏಕಾಏಕಿ ಮಳವಳ್ಳಿ ತಾಲ್ಲೂಕು ಕ್ರೀಡಾಂಗಣವೆOದು ನಾಮ ಫಲಕ ಹಾಕಿರುವ ಕ್ರೀಡಾ ಇಲಾಖೆಯ ಮೇಲೆ ಪ್ರಬಲ ಹಿಂದುಳಿದ ಕುರುಬ ಸಮಾಜದ ಆಕ್ರೋಶ

ಮಳವಳ್ಳಿ : ಮಳವಳ್ಳಿ ಪಟ್ಟಣದಲ್ಲಿರುವ ಶ್ರೀ ಭಕ್ತ ಕನಕದಾಸ ಕ್ರೀಡಾಂಗಣಕ್ಕೆ ಏಕಾಏಕಿ ಮಳವಳ್ಳಿ ತಾಲ್ಲೂಕು ಕ್ರೀಡಾಂಗಣ ಎಂದು ನಾಮ ಫಲಕ ಹಾಕಿರುವ ಕ್ರೀಡಾ ಇಲಾಖೆಯ ನಡೆ ವಿವಾದ ಬುಗಿಲೇಳುವಂತೆ ಮಾಡಿರುವುದರ ಜೊತೆಗೆ ಪ್ರಬಲ ಹಿಂದುಳಿದ ಕುರುಬ ಸಮಾಜದ ಆಕ್ರೋಶಕ್ಕೂ ಕಾರಣವಾಗಿದೆ.
ಕಳೆದ ನಾಲ್ಕು ವರ್ಷಗಳ ಹಿಂದೆಯೇ ಮಾಜಿ ಶಾಸಕ ಪಿ ಎಂ ನರೇಂದ್ರಸ್ವಾಮಿ ಅವರ ಅಧಿಕಾರಾವಧಿಯಲ್ಲಿ ನಿರ್ಮಾಣವಾಗಿದ್ದ ಈ ಕ್ರೀಡಾಂಗಣಕ್ಕೆ ಅಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಕನಕದಾಸ ಕ್ರೀಡಾಂಗಣ ಎಂದು ನಾಮಕರಣ ಮಾಡಿ ಕ್ರೀಡಾಂಗಣವನ್ನು ಉದ್ಘಾಟಿಸಿದ್ದರು.
ಕ್ರೀಡಾಗಂಣದ ಒಳಗೆ ಶ್ರೀ ಭಕ್ತ ಕನಕದಾಸ ಕ್ರೀಡಾಂಗಣ ಎಂದು ಸರ್ಕಾರದ ಬೋರ್ಡ್ ಹಾಕಲಾಗಿದೆ. ಅಲ್ಲದೆ ಈ ವರೆಗೆ ಸರ್ಕಾರ, ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ನಡೆಸಿರುವ ಸಮಾರಂಭಗಳ ಆಹ್ವಾನ ಪತ್ರಿಕೆ ಯಲ್ಲಿ ಸಹ ಕನಕದಾಸ ಕ್ರೀಡಾಂಗಣ ಎಂದೇ ಮುದ್ರಿಸಲಾಗಿದೆ.
ಹೀಗಿರುವಾಗ ಮೊನ್ನೆಯಷ್ಟೇ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕ್ರೀಡಾಂಗಣದ ಪ್ರವೇಶ ದ್ವಾರದಲ್ಲಿ ಕನಕದಾಸ ಕ್ರೀಡಾಂಗಣ ಹೆಸರಿನ ಬದಲಾಗಿ ಮಳವಳ್ಳಿ ತಾಲ್ಲೂಕು ಕ್ರೀಡಾಂಗಣ ಎಂದು ಬೋರ್ಡ್ ಹಾಕಿರುವುದು ಸಾರ್ವಜನಿಕರ ಕನಕದಾಸರ ಅಭಿಮಾನಿಗಳು ಮುಖ್ಯವಾಗಿ ಬಹುಸಂಖ್ಯಾತ ಕುರುಬ ಸಮಾಜದ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲಾ ಹಾಗೂ ತಾಲ್ಲೂಕು ಆಡಳಿತದ ಗಮನಕ್ಕೆ ಬಾರದಂತೆ ಕ್ರೀಡಾ ಇಲಾಖೆಯೇ ಏಕಪಕ್ಷೀಯ ವಾಗಿ ಈ ಕ್ರಮ ಕೈಗೊಂಡಿತೆ, ಇಲ್ಲ ಜಿಲ್ಲಾ ಮತ್ತು ತಾಲೂಕು ಆಡಳಿತದ ಅನುಮೋದನೆ ಯಂತೆ ಈ ಫಲಕ ಹಾಕಲಾಯಿತೆ, ಅಥವಾ ಸರ್ಕಾರದ ನೇರ ಆದೇಶದಂತೆ ಕ್ರೀಡಾ ಇಲಾಖೆ ಕ್ರೀಡಾಂಗಣದ ಹೆಸರು ಬದಲಿಸಿತೆ ಎಂಬ ಪ್ರಶ್ನೆಗಳು ಉದ್ಬವವಾಗಿದ್ದು ಈ ಕುರಿತು ಜಿಲ್ಲಾ ಮತ್ತು ತಾಲೂಕು ಆಡಳಿತ ಜೊತೆಗೆ ಕ್ಷೇತ್ರದ ಶಾಸಕರು ಸ್ಪಷ್ಟನೆ ನೀಡಬೇಕಿದೆ.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: