December 22, 2024

Bhavana Tv

Its Your Channel

ಕುರುಬ ಸಮಾಜದ ಮುಖಂಡರಿOದ ಪತ್ರಿಕಾ ಗೋಷ್ಠಿ.

ಮಳವಳ್ಳಿ : ಮಳವಳ್ಳಿ ಪಟ್ಟಣದಲ್ಲಿರುವ ಕನಕದಾಸ ಕ್ರೀಡಾಂಗಣದ ಹೆಸರನ್ನು ಬದಲಾಯಿಸಿ ಮಳವಳ್ಳಿ ತಾಲ್ಲೂಕು ಕ್ರೀಡಾಂಗಣ ಎಂದು ಹೊಸದಾಗಿ ನಾಮಫಲಕ ಹಾಕಿರುವ ಕ್ರೀಡಾ ಇಲಾಖೆಯ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ತಾಲೂಕಿನ ಕುರುಬ ಸಮಾಜದ ಮುಖಂಡರು ಕೂಡಲೇ ನೂತನ ನಾಮಫಲಕವನ್ನು ತೆಗೆದು ಹಾಕದಿದ್ದ ಪಕ್ಷದಲ್ಲಿ ಸಮಾಜದ ವತಿಯಿಂದ ಉಗ್ರ ಹೋರಾಟ ನಡೆಸಬೇಕಾಗುವುದು ಎಂದು ಎಚ್ಚರಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿ ಯನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ಕುರುಬ ಸಮಾಜದ ಮುಖಂಡ ರಾದ ಬಸವನಪುರದ ಕರಿಯಪ್ಪ, ಜೆಡಿಎಸ್ ನ ತಾಲೂಕು ಯುವ ಘಟಕದ ಅಧ್ಯಕ್ಷ ಚಂದಹಳ್ಳಿ ಶ್ರೀಧರ್, ಮಾಜಿ ತಾ ಪಂ ಸದಸ್ಯ ದೊಡ್ಡಯ್ಯ ರವರುಗಳು. ಕಳೆದ ಹತ್ತು ವರ್ಷಗಳ 5-6 ವರ್ಷಗಳ ಹಿಂದೆಯೇ ಮಾಜಿ ಶಾಸಕರಾದ ನರೇಂದ್ರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಅಂದಿನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನಕದಾಸ ಕ್ರೀಡಾಂಗಣ ಎಂದು ನಾಮಕರಣ ಮಾಡಿ ಉದ್ಘಾಟನೆ ಮಾಡಿದ್ದು ಅಂದಿನಿAದಲೂ ಅದೇ ಕನಕದಾಸರ ಕ್ರೀಡಾಂಗಣ ಎಂದೇ ಸರ್ಕಾರದ ಆಹ್ವಾನ ಪತ್ರಿಕೆಯಲ್ಲಿ ಮುದ್ರಿತವಾಗಿ ಸಮಾರಂಭಗಳು ನಡೆದುಕೊಂಡು ಬರುತ್ತಿದೆ , ಸರ್ಕಾರ ಸಹ ಕನಕದಾಸ ಕ್ರೀಡಾಂಗಣ ಎಂದು ನಾಮಫಲಕ ಹಾಕಿದೆ ಹೀಗಿರುವಾಗ ಈಗಿನ ಸರ್ಕಾರ ಏಕಾಏಕಿ ಕ್ರೀಡಾ ಇಲಾಖೆ ಮೂಲಕ ಕ್ರೀಡಾಂಗಣಕ್ಕೆ ಕನಕದಾಸರ ಹೆಸರು ಬದಲಿಗೆ ತಾಲೂಕು ಕ್ರೀಡಾಂಗಣ ಎಂದು ಬೋರ್ಡ್ ಹಾಕಿರುವುದು ಮಹಾನ್ ಮಾನವತಾ ವಾದಿ ದಾಸ ಶ್ರೇಷ್ಠ ಕನಕದಾಸರಿಗೆ ಮಾಡಿದ ಅಪಮಾನ ವಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬಸವಣ್ಣ, ಅಂಬೇಡ್ಕರ್, ಹಾಗೂ ಕನಕದಾಸರು ಈ ಸಮಾಜಕ್ಕೆ ಶೋಷಣೆ ಅಸಮಾನತೆ, ಅಂಧಕಾರದ ವಿರುದ್ಧ ಕ್ರಾಂತಿಕಾರಿ ಹೋರಾಟ ನಡೆಸಿದ ಮಹಾನ್ ಮಾನವತಾ ವಾದಿಗಳಾಗಿದ್ದು ಇವರ ಹೆಸರಿಗೆ ಅಗೌರವ ತರುವ ಕೆಲಸವನ್ನು ಯಾರೇ ಮಾಡಿದರು ಅದು ಅಕ್ಷಮ್ಯ ಅಪರಾಧ ಎಂದು ಕಿಡಿ ಕಾರಿದ ಮುಖಂಡರು ಏಕಾಏಕಿ ಹೊಸ ನಾಮಫಲಕ ಹಾಕಿ ಕನಕದಾಸರಿಗೆ ಅಪಮಾನ ಮಾಡಿರುವುದು ಕುರುಬ ಸಮುದಾಯಕ್ಕೆ ಭಾರಿ ನೋವು ಉಂಟು ಮಾಡಿದೆ ಎಂದು ಅಸಮಧಾನ ವ್ಯಕ್ತ ಪಡಿಸಿದರು.
ಏಕಾಏಕಿ ಇಂತಹ ಕ್ರಮ ಕೈಗೊಂಡಿರುವವರ ವಿರುದ್ಧ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರ ಜೊತೆಗೆ ಇನ್ನೂ ಒಂದು ವಾರದ ಒಳಗೆ ನೂತನ ನಾಮಫಲಕವನ್ನು ತೆಗೆದುಹಾಕಿ ಕನಕದಾಸರ ಹೆಸರಿನ ಫಲಕವನ್ನು ಕ್ರೀಡಾಂಗಣ ದಲ್ಲಿ ಹಾಕದ್ದಿದ್ದ ಪಕ್ಷದಲ್ಲಿ ಸಮಾಜದ ವತಿಯಿಂದ ಉಗ್ರಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ರಾಜ್ಯ ಕುರುಬರ ಸಂಘದ ನಿರ್ಧೇಕ ರಾಜೇಶ್, ಎಂ ಡಿ ಉಮೇಶ್, ಮುಖಂಡರಾದ ಸೋಮಶೇಖರ್, ಬುಲೆಟ್ ಲಿಂಗಣ್ಣ, ರಾಜಣ್ಣ, ಮತ್ತಿತರರು ಗೋಷ್ಠಿಯಲ್ಲಿ ಹಾಜರಿದ್ದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: