December 19, 2024

Bhavana Tv

Its Your Channel

ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಚೇತನ್ ಕುಮಾರ್‌ಗೆ ಸನ್ಮಾನ..

ಮಳವಳ್ಳಿ : ಅಂಬೇಡ್ಕರ್ ವಿಚಾರ ವೇದಿಕೆ ವತಿಯಿಂದ ಮಳವಳ್ಳಿ ಪಟ್ಟಣದಲ್ಲಿ ಇಂದು ಗಣರಾಜ್ಯೋತ್ಸವ ದಿನವನ್ನು ಸಂವಿಧಾನ ದಿನವನ್ನಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಪುರಸಭಾ ಸದಸ್ಯರಾದ ಆರ್ ಎನ್ ಸಿದ್ದರಾಜು ಉದ್ಘಾಟಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವೇದಿಕೆ ಅಧ್ಯಕ್ಷ ಎಂ ಆರ್ ಮಹೇಶ್ ಅವರು ವಾಸ್ತವವಾಗಿ ದೇಶಾದ್ಯಂತ ಈ ದಿನವನ್ನು ಸಂವಿಧಾನ ದಿನವನ್ನಾಗಿ ಆಚರಿಸಬೇಕಾದ ಸರ್ಕಾರಗಳು ವಾಸ್ತವವನ್ನು ಮರೆಮಾಚುವ ಸಲುವಾಗಿ ಗಣರಾಜ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ವಿಷಾದಿಸಿದರು.
ಉಪನ್ಯಾಸಕ ರಾಜಣ್ಣ ಅವರು ಮಾತನಾಡಿ ಬಂಡವಾಳ ಸಾಹಿ ಹಾಗೂ ಪುರೋಹಿತ ಶಾಹಿ ಈ ಇಬ್ಬರು ದೇಶದ ಪ್ರಬಲ ಶತ್ರುಗಳು ಎಂದು ಅಂಬೇಡ್ಕರ್ ಅಂದೇ ಉಲ್ಲೇಖಿಸಿದ್ದರು ಎಂದು ಹೇಳಿ ಇಂತಹ ಶತ್ರುಗಳಿಂದ ದೇಶದ ಸಂವಿಧಾನ ಅಪಾಯಕ್ಕೆ ಸಿಲುಕಿದ್ದು ಇದರ ರಕ್ಷಣೆಯತ್ತ ಶೋಷಿತ ಸಮುದಾಯ ಮುಂದಾಗಬೇಕಿದೆ ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ನೂತನ ಅಧ್ಯಕ್ಷ ಎಲ್ ಚೇತನ್ ಕುಮಾರ್ ನೆಟ್ಕಲ್ ಅವರನ್ನು ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಚೇತನ್ ಕುಮಾರ್ ಅವರು ಈ ಭಾರಿಯ ತಾಲೂಕು ಘಟಕದ ಅಧ್ಯಕ್ಷ ಸ್ಥಾನವನ್ನು ದಲಿತ ಸಮುದಾಯಕ್ಕೆ ನೀಡಬೇಕೆಂಬ ಸಮುದಾಯದ ಆಗ್ರಹದಂತೆ ತನಗೆ ಈ ಸ್ಥಾನ ನೀಡಿರುವ ಜಿಲ್ಲಾಧ್ಯಕ್ಷ ರವಿಕುಮಾರ್ ಚಾಮಲಾಪುರ ಹಾಗೂ ಪದಾಧಿಕಾರಿಗಳನ್ನು ಅಭಿನಂದಿಸಿ ನಮ್ಮೆಲ್ಲರ ಆಶಯಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು.
ಕಾರ್ಯಕ್ರಮ ದಲ್ಲಿ ವೇದಿಕೆ ಮುಖಂಡರಾದ ಎಂ ಎನ್ ಜಯರಾಜು, ಮಂಚಯ್ಯ, ದುಗ್ಗನಹಳ್ಳಿ ನಾಗರಾಜು, ಮತ್ತಿತರರು ಪಾಲ್ಗೊಂಡಿದ್ದರು

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: