April 29, 2024

Bhavana Tv

Its Your Channel

ಕನಕದಾಸ ಕ್ರೀಡಾಂಗಣದಲ್ಲಿ 73ನೇ ಗಣರಾಜ್ಯೋತ್ಸವ ಆಚರಣೆ

ಮಳವಳ್ಳಿ : ಮಳವಳ್ಳಿ ಪಟ್ಟಣದ ಕನಕದಾಸ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ 73ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ತಹಸೀಲ್ದಾರ್ ವಿಜಯಣ್ಣ ಧ್ವಜಾರೋಹಣ ನೆರವೇರಿಸಿದರು.
ನಂತರ ಸಂದೇಶ ನೀಡಿದ ಅವರು ಇಡೀ ವಿಶ್ವದಲ್ಲೇ ಉತ್ಕೃಷ್ಟವಾದ ಸಂವಿಧಾನ ವನ್ನು ಭಾರತಕ್ಕೆ ನೀಡಿದ ಡಾ ಬಿ ಆರ್ ಅಂಬೇಡ್ಕರ್ ಅವರ ಅಪ್ರತಿಮ ಪ್ರತಿಭೆಯಿಂದ ಇಂದು ವಿಶ್ವದಲ್ಲೇ ಭಾರತ ಸದೃಢವಾಗಿದೆ ಎಂದು ಶ್ಲಾಘಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಡಾ. ಕೆ ಅನ್ನದಾನಿ ಅವರು ದೇಶದಲ್ಲಿ ಸಂವಿಧಾನ ಜಾರಿಗೊಂಡು ಇಷ್ಟು ವರ್ಷಗಳೇ ಕಳೆದರೂ ಸಹ ದೇಶದಲ್ಲಿ ಅಸ್ಪೃಶ್ಯತೆ ಅಸಮಾನತೆ ಜಾತಿಯತೆ ತಾಂಡವವಾಡುತ್ತಿರುವುದು ದುರಾದೃಷ್ಟಕರ ಎಂದು ವಿಷಾದಿಸಿದರು.
ಕೇಂದ್ರ ಸರ್ಕಾರ ಸಹ 23 ಸಂಸದರನ್ನು ನೀಡಿದ ಕರ್ನಾಟಕಕ್ಕೆ ಸೂಕ್ತ ಅನುದಾನ ನೆರವು ನೀಡದಿರುವುದರ ಜೊತೆಗೆ ಮೇಕೆದಾಟು ಸೇರಿದಂತೆ ರಾಜ್ಯದ ನೀರಾವರಿ ಯೋಜನೆಗಳಿಗೆ ತಡೆಯೊಡ್ಡುತ್ತಿದೆ ಎಂದು ಟೀಕಿಸಿದರು.
ಪುರಸಭಾಧ್ಯಕ್ಷೆ ರಾಧ ನಾಗರಾಜು ಸಮಾರಂಭವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಲಕ್ಷ್ಮೀನಾರಾಯಣ ಪ್ರಸಾದ್, ಪುರಸಭೆಯ ಉಪಾಧ್ಯಕ್ಷ ಟಿ ನಂದಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಪುಟ್ಟಸ್ವಾಮಿ , ತಾ.ಪಂ ಇಓ ರಾಮಲಿಂಗಯ್ಯ, ಬಿಇಒ ಚಿಕ್ಕಸ್ವಾಮಿ, ಮುಖ್ಯಾಧಿಕಾರಿ ಪವನ್ ಕುಮಾರ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚೇತನ್ ಕುಮಾರ್ ನೆಟ್ಕಲ್, ಸೇರಿದಂತೆ ಹಲವಾರು ಪುರಸಭಾ ಸದಸ್ಯರು ಅಧಿಕಾರಿಗಳು ಪಾಲ್ಗೊಂಡಿ ದ್ದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: