December 22, 2024

Bhavana Tv

Its Your Channel

ತಹಶೀಲ್ದಾರ್ ಎಂ.ವಿಜಯಣ್ಣ ಅವರ ಅಧ್ಯಕ್ಷತೆಯಲ್ಲಿ ಮಳವಳ್ಳಿ ಸಿಡಿ ಹಬ್ಬದ ಆಚರಣೆಯ ಸಂಬOಧ ಸಭೆ

ಮಳವಳ್ಳಿ : ಬರುವ ಪೆಬ್ರವರಿ 11 ಹಾಗೂ 12ರಂದು ನಡೆಯುವ ಐತಿಹಾಸಿಕ ಮಳವಳ್ಳಿ ಸಿಡಿ ಹಬ್ಬದ ಆಚರಣೆಯ ಸಂಬAಧ ಜ.31ರ ನಂತರ ನಿರ್ಧಾರ ತೆಗೆದುಕೊಳ್ಳಲು ತಹಶೀಲ್ದಾರ್ ಎಂ.ವಿಜಯಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಕ್ಕೆ ಬರಲಾಯಿತು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಫೆ.8 ರಂದು ನಡೆಯುವ ದಂಡಿನ ಮಾರಮ್ಮ ನ ಹಬ್ಬ ಮತ್ತು ಫೆ.11 ಮತ್ತು 12ರಂದು ನಡೆಯುವ ಇತಿಹಾದ ಪ್ರಸಿದ್ದ ಸಿಡಿ ಹಬ್ಬದ ಆಚರಣೆಗೆ ತಹಶೀಲ್ದಾರ್ ವಿಧಿಸಿದ್ದ ನಿರ್ಬಂಧದ ಸಂಬAಧ ಮಂಗಳವಾರ ನಡೆದ ವಿವಿಧ ಸಮುದಾಯಗಳ ಮುಖಂಡರ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು.
ಕೆಲ ದಿನಗಳ ಹಿಂದೆ ತಹಶೀಲ್ದಾರ್ ಕೋವಿಡ್ ನಿಯಮದಂತೆ ಹಬ್ಬದ ಆಚರಣೆಗೆ ನಿರ್ಬಂಧ ವಿಧಿಸಿದರು. ಇದಕ್ಕೆ ಹಲವು ಮುಖಂಡರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಭೆ ಕರೆಯಲಾಗಿತ್ತು. ಸಭೆ ಆರಂಭವಾಗುತ್ತಿದ್ದAತೆಯೇ ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ, ಎಂ ಎ ಚಿಕ್ಕರಾಜು, ಎನ್ ನಂಜುAಡಯ್ಯ, ಚಿಕ್ಕಮೊಗಣ್ಣ ಮತ್ತಿತರರು ಮಾತನಾಡಿ ನಿರ್ಬಂಧಗಳಲ್ಲಿ ಕೆಲವನ್ನು ಸಡಿಲಗೊಳಿಸಿ ಸಂಪ್ರದಾಯ ಬದ್ಧವಾಗಿ ನಡೆದುಕೊಂಡು ಬಂದಿರುವ ಹಬ್ಬವನ್ನು ಕೋವಿಡ್ ನಿಯಮ ಪಾಲನೆಯ ಜೊತೆಗೆ ಸರಳ ಆಚರಣೆ ಮಾಡಲು ಅವಕಾಶ ನೀಡಬೇಕು ಎಂದರು.
ಅಲ್ಲದೆ ಮುಖಂಡರ ಅಭಿಪ್ರಾಯ ಸಂಗ್ರಹಿಸದೇ ಏಕಾಏಕಿ ತೀರ್ಮಾನ ಮಾಡಿರುವುದು ಸರಿಯಲ್ಲ, ಹಿಂದಿನಿAದಲೂ ಹಬ್ಬದ ಆಚರಣೆ ಸಂಬAಧ ಉಪ ವಿಭಾಗದಾಧಿಕಾರಿಗಳೇ ಸಭೆ ನಡೆಸುತ್ತಿದ್ದರು. ಅಲ್ಲದೆ ಕಳೆದ ಬಾರಿಯೂ ಕೋವಿಡ್ ಸಂದರ್ಭದಲ್ಲೂ ಯಶಸ್ವಿಯಾಗಿ ಹಬ್ಬವನ್ನು ಆಚರಣೆ ಮಾಡಿದ್ದು, ಈ ಬಾರಿಯೂ ಅವಕಾಶ ನೀಡಬೇಕು ಎಂದರು.
ಪಟ್ಟದಮ್ಮನ ದೇವಸ್ಥಾನ ಸಮಿತಿಯ ನಂಜುAಡಪ್ಪ ಮಾತನಾಡಿ, ಹಬ್ಬವನ್ನು ನಮ್ಮ ಪೂರ್ವಿಕರು ನಡೆಸಿಕೊಂಡು ಬಂದಿದ್ದು, ಈ ಬಾರಿ ನಿಲ್ಲಿಸುವುದರಿಂದ ಏನಾದರೂ ತೊಂದರೆಯಾಗಬಹುದು. ಹೀಗಾಗಿ ಸರಳ ಆಚರಣೆಗೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ದಂಡಿನ ಮಾರಮ್ಮ ದೇವಸ್ಥಾನ ಸಮಿತಿಯ ಅಧ್ಯಕ್ಷ ಎ.ಸಿ.ವೀರೇಗೌಡ ಮಾತನಾಡಿ, ಘಟ್ಟಗಳ ಮೆರವಣಿಗೆ, ಸಿಡಿ ಆಚರಣೆ ಸೇರಿದಂತೆ ಹೆಚ್ಚು ಜನ ಸೇರುವ ಆಚರಣೆಗಳನ್ನು ಈ ಬಾರಿ ಮಾಡುವುದಿಲ್ಲ, ಬದಲಾಗಿ ಕೋವಿಡ್ ಮಾರ್ಗಸೂಚಿಯಂತೆ ದೇವರಿಗೆ ಪೂಜೆ ಸಲ್ಲಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಮುಖಂಡರಿAದ ಅಭಿಪ್ರಾಯ ಸಂಗ್ರಹಿಸಿ ತಹಶೀಲ್ದಾರ್ ಎಂ.ವಿಜಯಣ್ಣ ಮಾತನಾಡಿ, ಜಿಲ್ಲಾಡಳಿತದ ನಿರ್ದೇಶನದಂತೆ ಹೆಚ್ಚು ಜನ ಸೇರುವ ಕಾರ್ಯಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ದೇವಸ್ಥಾನದಲ್ಲಿ ಕೋವಿಡ್ ನಿಯಮದೊಂದಿಗೆ ಪೂಜೆ ಸಲ್ಲಿಸಲು ನಿರ್ಬಂಧವಿಲ್ಲ, ಆದರೆ ಯಾವುದೇ ಜಾತ್ರೆ ಉತ್ಸವ ಗ್ರಾಮ ದೇವತೆ ಹಬ್ಬಗಳ ಸಾಮೂಹಿಕ ಆಚರಣೆಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿ ಹೊರಡಿಸಿ ರುವ ಆದೇಶ ಜ.31ರವರೆಗೆ ಜಾರಿಯಲ್ಲಿದೆ. ಹಾಗಾಗಿ ಮುಂದಿನ ಆದೇಶ ನೋಡಿಕೊಂಡು ಜನವರಿ 1 ಅಥವಾ 2 ರಂದು ಮತ್ತೆ ಮುಖಂಡರ ಸಭೆ ಕರೆದು ಹಬ್ಬ ಆಚರಣೆಯ ರೂಪು ರೇಷೆ ಕುರಿತು ತೀರ್ಮಾನಿಸಲಾಗು ವುದು ಎಂದರು.
ಪುರಸಭೆ ಅಧ್ಯಕ್ಷೆ ನಾಗರಾಜು, ಉಪಾಧ್ಯಕ್ಷ ಟಿ.ನಂದಕುಮಾರ್, ಡಿವೈಎಸ್ಪಿ ಎಚ್. ಲಕ್ಷ್ಮೀನಾರಾಯಣ ಪ್ರಸಾದ್, ಪುರಸಭೆ ಮುಖ್ಯಾಧಿಕಾರಿ ಕೆ.ಎಂ. ಪವನ್ ಕುಮಾರ್, ಲೋಕೋಪಯೋಗಿ ಇಲಾಖೆಯ ಎಇಇ ಪುಟ್ಟಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷರಾದ ಎಂ.ಎಚ್.ಕೆAಪಯ್ಯ, ನಂಜುAಡಯ್ಯ, ಮುಖಂಡರಾದ ಕಿರಣ್ ಶಂಕರ್, ರಾಜಶೇಖರ್, ಪ್ರಶಾಂತ್ ಸೇರಿದಂತೆ ಹಲವರು ಇದ್ದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: