December 22, 2024

Bhavana Tv

Its Your Channel

ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಮಳವಳ್ಳಿ : ಗುರುವಾರ ಮಳವಳ್ಳಿ ಪಟ್ಟಣದ ಹೃದಯ ಭಾಗದಲ್ಲಿನ ಚರಂಡಿಯೊAದರಲ್ಲಿ ಕೊಳೆತು ನಾರುತ್ತಿದ್ದ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ.
ಪಟ್ಟಣದ ಹೃದಯ ಭಾಗ ಎಂದೇ ಕರೆಯಲಾಗುವ ಪೇಟೆ ವೃತ್ತದಲ್ಲಿನ ಮೈಸೂರು ರಸ್ತೆ ಬದಿಯ ಚರಂಡಿ ಸೇತುವೆ ಅಡಿಯಲ್ಲಿ ಸುಮಾರು 50 ವರ್ಷ ವಯಸ್ಸಿನ ವ್ಯಕ್ತಿಯ ಶವ ಪತ್ತೆಯಾಗಿದೆ.
ಚರಂಡಿಯಲ್ಲಿ ಕೊಚ್ಚಿ ಬಂದಿರುವ ಕಸದ ಮದ್ಯ ಸಿಕ್ಕಿಕೊಂಡಿದ್ದ ಅಪರಿಚಿತ ವ್ಯಕ್ತಿಯ ಶವ ಸೇತುವೆ ಬಳಿ ತೇಲುತ್ತಿದ್ದು ಗುರುತಿಸಲಾಗದಷ್ಟು ಶವ ಸಂಪೂರ್ಣವಾಗಿ ಕೊಳೆತು ಹೋಗಿದ್ದು ಎರಡು ದಿನಗಳಿಂದ ದುರ್ನಾತ ಬೀರುತ್ತ ಪಟ್ಟಣದ ಹೃದಯ ಭಾಗದ ವೃತ್ತದ ಚರಂಡಿಯಲ್ಲಿ ಬಿದ್ದಿದ್ದರು ಪುರಸಭೆಯವರಾಗಲಿ ಪೊಲೀಸರಾಗಲಿ ತಕ್ಷಣ ಕ್ರಮ ಕೈಗೊಳ್ಳದೆ ಇರುವುದು ಸಾರ್ವಜನಿಕರ ಅಸಮಾಧಾನ ಕ್ಕೆ ಕಾರಣವಾಗಿದೆ.
ಶುಕ್ರವಾರ ಶವದ ಮಹಜರು ನಡೆಸಿರುವ ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: