April 28, 2024

Bhavana Tv

Its Your Channel

ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಹಾಗೂ ಆಶ್ರಮ ಬಡಾವಣೆಗೆ ಕೊಳವೆ ಮಾರ್ಗ ಅಳವಡಿಸುವ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಡಾ ಕೆ ಅನ್ನದಾನಿ

ಮಳವಳ್ಳಿ ; ಮಳವಳ್ಳಿ ಪಟ್ಟಣಕ್ಕೆ ವಾರದ 24 ಗಂಟೆ ಕುಡಿಯುವ ನೀರು ಪೂರೈಕೆ ಮಾಡುವ ಮಹತ್ವಾಕಾಂಕ್ಷೆಯ ಯೋಜನೆ ಕಳಪೆ ಹಾಗೂ ಅಸಮರ್ಪಕ ಕಾಮಗಾರಿಯಿಂದ ಯೋಜನೆ ವಿಫಲವಾಗಿದೆ ಎಂದು ಶಾಸಕ ಡಾ ಕೆ ಅನ್ನದಾನಿ ಆರೋಪಿಸಿದರು
ಅವರು ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ, ಹಾಗೂ ಪುರಸಭೆ ವತಿಯಿಂದ ಮಳವಳ್ಳಿ ಪಟ್ಟಣಕ್ಕೆ 2 ನೇ ಹಂತದ ಕುಡಿಯುವ ನೀರು ಸರಬರಾಜಿಗಾಗಿ ಸುಮಾರು 4.50 ಕೋಟಿ ವೆಚ್ಚದಲ್ಲಿ 15 ಲಕ್ಷ ಲೀಟರ್ ನೀರು ಸಂಗ್ರಹಣಾ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಹಾಗೂ ಆಶ್ರಮ ಬಡಾವಣೆಗೆ ಕೊಳವೆ ಮಾರ್ಗ ಅಳವಡಿಸುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು ಕಳೆದ 20015-16 ನೇ ಸಾಲಿನಲ್ಲಿ ಸುನಾರು 70 ಕೋಟಿ ವೆಚ್ಚದಲ್ಲಿ ಆರಂಭವಾದ ಈ ಯೋಜನೆ ಕಳಪೆ ಸಲಕರಣೆಗಳ ಬಳಕೆ, ಕಳಪೆ ಕಾಮಗಾರಿ ಯಿಂದ ಎಲ್ಲವೂ ಹಾಳಾಗಿದ್ದು ಇದರಿಂದ ಪಟ್ಟಣದ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ ಇದೀಗ ಈ ಎಲ್ಲಾ ಲೋಪಗಳನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಪಟ್ಟಣದ ಕ್ರೀಡಾಂಗಣಕ್ಕೆ ಕನಕದಾಸ ಕ್ರೀಡಾಂಗಣ ಎಂದು ಕೇವಲ ಫಲಕ ಹಾಕಿಸಿದನ್ನು ಬಿಟ್ಟರೆ ನಿಯಮಾವಳಿಯಂತೆ ಯಾವುದೇ ನಿರ್ಣಯ ಮಾಡಿ ಸರ್ಕಾರಕ್ಕೆ ಕಳುಹಿಸಿದೆ ಕನಕದಾಸರ ಹೆಸರಿಗೆ ಅಪಮಾನ ಮಾಡಲಾಗಿದೆ ಎಂದು ಟೀಕಿಸಿದರು.
ಇದೀಗ ತಮ್ಮ ಅಧ್ಯಕ್ಷತೆಯ ಸಮಿತಿ ಕನಕದಾಸರ ಹೆಸರು ಶಿಫಾರಸು ಮಾಡಿದ್ದು ಆಶ್ರಮ ಬಡಾವಣೆಗೆ ಸಹ ಅನ್ನದಾನಿ ಬಡಾವಣೆ ಎಂಬ ಹೆಸರನ್ನು ಸರ್ಕಾರ ಅನುಮೋದಿಸಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷೆ ರಾಧ ನಾಗರಾಜು, ಉಪಾಧ್ಯಕ್ಷ ನಂದಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಪುಟ್ಟಸ್ವಾಮಿ, ಸದಸ್ಯರಾದ ಸಿದ್ದರಾಜು, ನೂರುಲ್ಲಾ, ಕುಮಾರ್, ಜಯಸಿಂಹ , ಭೀಮಣ್ಣ ತಾಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇಗೌಡ, ಸೇರಿದಂತೆ ಹಲವಾರು ಸದಸ್ಯರು ಮುಖಂಡರು ಪಾಲ್ಗೊಂಡಿದ್ದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: