ಮಳವಳ್ಳಿ : ನಾಡಿನ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಮಳವಳ್ಳಿ ಸಿಡಿ ಹಬ್ಬದ ಮೊದಲ ಹಂತವಾಗಿ ದಂಡಿನ ಮಾರಮ್ಮನ ಹಬ್ಬ ಪಟ್ಟಣದಲ್ಲಿ ಇಂದು ಸಡಗರ ಸಂಭ್ರಮದಿoದ ಜರುಗಿತು.
ಸಿಡಿ ಹಬ್ಬದ ಆರಾಧ್ಯ ದೇವತೆಗಳಲ್ಲಿ ಒಬ್ಬರಾಗಿರುವ ದಂಡಿನ ಮಾರಮ್ಮನ ದೇವಾಲಯಕ್ಕೆ ಇಂದು ಬೆಳಿಗ್ಗೆ ಯಿಂದಲೇ ತಂಡೋಪ ತಂಡವಾಗಿ ಆಗಮಿಸಿದ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳ ಜನ ದಂಡಿನ ಮಾರಮ್ಮನಿಗೆ ತಂಬಿಟ್ಟಿನ ನೈವೇದ್ಯದ ಜೊತೆಗೆ ಕೋಳಿ ಕುರಿ ಮೇಕೆಗಳ ಬಲಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಹೆಚ್ಚು ಜನ ಗುಂಪಾಗಿ ಸೇರದೆ ಸರಳವಾಗಿ ಸಿಡಿ ಹಬ್ಬ ಆಚರಣೆಗೆ ತಾಲೂಕು ಆಡಳಿತ ಅನುಮತಿ ನೀಡಿದ್ದರು ಸಹ ಕೋವಿಡ್ ಹಿನ್ನೆಲೆಯಲ್ಲಿ ಬಹಳ ದಿನಗಳಿಂದ ಯಾವುದೇ ಹಬ್ಬ ಹರಿದಿನಗಳ ಆಚರಣೆಗೆ ನಿರ್ಬಂಧ ವಿಧಿಸಿದ್ದ ನಂತರದಲ್ಲಿ ನಡೆಯುತ್ತಿರುವ ಸಿಡಿ ಹಬ್ಬದ ಮೊದಲ ಹಬ್ಬವಾದ ದಂಡಿನ ಮಾರಮ್ಮನ ಹಬ್ಬದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನ ಸಡಗರ ಸಂಭ್ರಮದಿAದ ಪಾಲ್ಗೊಂಡಿ ದ್ದರು.
ಸಾಕಷ್ಟು ಸಂಖ್ಯೆಯಲ್ಲಿ ಜನ ನೆರೆದಿದ್ದ ಹಿನ್ನೆಲೆಯಲ್ಲಿ ದೇವಾಲಯದ ಆವರಣದಲ್ಲಿ ಹೆಚ್ಚಿನ ಪೊಲೀಸ್ ಬಂದೊಬಸ್ತ್ ಮಾಡಲಾಗಿತ್ತು.
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ