April 16, 2025

Bhavana Tv

Its Your Channel

ವ್ಯಕ್ತಿಯನ್ನು ಕೊಲೆ ಮಾಡಿರುವ ದುಷ್ಕರ್ಮಿಗಳು ಶವವನ್ನು ಟಾರ್ಪಲ್‌ನಲ್ಲಿ ಸುತ್ತಿ ಗೋಮಾಳದಲ್ಲಿ ಎಸೆದು ಪರಾರಿ

ಮಳವಳ್ಳಿ : ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿರುವ ದುಷ್ಕರ್ಮಿ ಗಳು ಶವವನ್ನು ಟಾರ್ಪಲ್ ನಲ್ಲಿ ಸುತ್ತಿ ಗೋಮಾಳ ದಲ್ಲಿ ಎಸೆದು ಪರಾರಿಯಾಗಿರುವ ದುಷ್ಕೃತ್ಯವೊಂದು ಮಳವಳ್ಳಿ ತಾಲ್ಲೂಕಿನ ಪಂಡಿತಹಳ್ಳಿ ಗ್ರಾಮದ ಬಳಿ ಜರುಗಿದೆ.
ಈ ಗ್ರಾಮದ ಬಳಿಯ ಗೋಮಾಳದಲ್ಲಿ ಇಂದು ಬೆಳಿಗ್ಗೆ ಟಾರ್ಪಲ್‌ನಲ್ಲಿ ಸುತ್ತು ಬೀಸಾಡಿದ್ದ ವ್ಯಕ್ತಿಯ ಶವ ಪತ್ತೆಯಾಗಿದ್ದು ಮೃತನನ್ನು ಕೊಳ್ಳೇಗಾಲದ ವಾಸಿ ಸಲೀಮ್ ಎಂದು ಗುರುತಿಸಲಾಗಿದೆ.
ಸುಮಾರು 40 ವರ್ಷ ವಯಸ್ಸಿನ ಈತನನ್ನು ದುಷ್ಕರ್ಮಿಗಳು ಉಸಿರು ಕಟ್ಟಿಸಿ ಕೊಲೆ ಮಾಡಿ ಕೊಲೆ ಮಾಡಿ ಶವವನ್ನು ಪಂಡಿತಹಳ್ಳಿ ಬಳಿ ಬೀಸಾಡಿದ್ದಾರೆ.
ಹಣಕಾಸಿನ ವೈಷಮ್ಯವೇ ಈ ಕೊಲೆಗೆ ಕಾರಣ ಎನ್ನಲಾಗಿದೆ.
ಈಗಾಗಲೇ ಆರೋಪಿಗಳು ಸುಳಿವು ಸಿಕ್ಕಿದ್ದು ಇಷ್ಟರಲ್ಲೇ ಬಂಧಿಸುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಗೊಂಡಿದ್ದಾರೆ

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: