ಮಳವಳ್ಳಿ : ಚಾಲಕನ ನಿಯಂತ್ರಣ ತಪ್ಪಿದ ಡೀಸೆಲ್ ಟ್ಯಾಂಕರ್‌ವೊAದು ರಸ್ತೆ ಬದಿಯ ಕಾಲುವೆಗೆ ಉರುಳಿ ಬಿದ್ದು ಲಕ್ಷಾಂತರ ರೂ ಮೌಲ್ಯ ದ ಡೀಸೆಲ್ ನೀರು ಪಾಲಾಗಿರುವ ದುರ್ಘಟನೆ ಯೊಂದು ತಾಲ್ಲೂಕಿನ ಬೆಳಕವಾಡಿ ಗ್ರಾಮದ ಬಳಿ ಜರುಗಿದೆ.
ಮಂಗಳೂರಿನಿAದ ಬೆಳಕವಾಡಿಯ ಪೆಟ್ರೋಲ್ ಬಂಕ್‌ವೊAದಕ್ಕೆ ಸುಮಾರು 20 ಸಾವಿರ ಡೀಸೆಲ್‌ನ್ನು ಸಾಗಿಸುತ್ತಿದ್ದು ನೆನ್ನೆ ರಾತ್ರಿ 10 ಗಂಟೆ ಸಮಯದಲ್ಲಿ ಮಡುವಾಡಿ ರಸ್ತೆ ಮಾರ್ಗವಾಗಿ ಈ ಟ್ಯಾಂಕರ್ ಬೆಳಕವಾಡಿ ಕಡೆ ಬರುತ್ತಿದ್ದಾಗ ಈ ದುರ್ಘಟನೆ ಜರುಗಿದೆ.
ಮುಂದೆ ರಸ್ತೆ ರಿಪೇರಿ ಕಾರಣ ವಾಪಸ್ ಆಗಲು ಟ್ಯಾಂಕರ್‌ನ್ನು ಚಾಲಕ ವೆಂಕಟೇಶ್ ಹಿಮ್ಮುಖವಾಗಿ ಓಡಿಸಿ ವಾಹನವನ್ನು ತಿರುಗಿಸಿಕೊಳ್ಳುವ ಯತ್ನದಲ್ಲಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಟ್ಯಾಂಕರ್ ರಸ್ತೆ ಪಕ್ಕದ ಕಾಲುವೆಗೆ ಉರುಳಿ ಬಿತ್ತು ಎಂದು ವರದಿಯಾಗಿದೆ.
ಟ್ಯಾಂಕರ್ ನಲ್ಲಿದ್ದ 20 ಸಾವಿರ ಲೀಟರ್ ಡೀಸೆಲ್ ನೀರು ಪಾಲಾಗಿದ್ದು ಇದರ ಮೌಲ್ಯ 17 ಲಕ್ಷ ರೂ ಎಂದು ಅಂದಾಜಿಸ ಲಾಗಿದೆ.
ಜೊತೆಗೆ ಟ್ಯಾಂಕರ್ ಸಹ ಸಂಪೂರ್ಣ ಜಖಂ ಗೊಂಡಿದ್ದು ಚಾಲಕ ವೆಂಕಟೇಶ ಪ್ರಾಣಪಾಯದಿಂದ ಪಾರಾಗಿದ್ದಾನೆ.
ಈ ಕಾಲುವೆ ನೀರು ಬೆಳಕವಾಡಿ ದೊಡ್ಡ ಕೆರೆ ಸೇರುತ್ತಿದ್ದು ಡೀಸಲ್ ಮಿಶ್ರಿತ ಈ ನೀರು ಕೆರೆ ಸೇರಿದರೆ ಮೀನು ಸೇರಿದಂತೆ ಜಲಚರ ಪ್ರಾಣಿಗಳ ಮಾರಣ ಹೋಮವಾಗುವ ಅಪಾಯ ಎದುರಾಗಿದೆ.
ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಬೆಳಕವಾಡಿ ಪಿಎಸ್ ಐ ಅಶೋಕ್ ಹಾಗೂ ಸಿಬ್ಬಂದಿ ಕ್ರೇನ್ ಸಹಾಯದಿಂದ ಟ್ಯಾಂಕರ್ ಮೇಲೆತ್ತುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಟ್ಯಾಂಕರ್ ನಿಂದ ಹೊರ ಹರಿಯುತ್ತಿರುವ ಡೀಸಲ್ ತುಂಬಿಕೊಳ್ಳಲು ಜನ ಮುಗಿಬಿದ್ದಿದ್ದಾರೆ.
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ