
ಪಾಂಡವಪುರ ; ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದ ಹಾರೋಹಳ್ಳಿಯಲ್ಲಿ ಕಾಂಗ್ರೆಸ್ ಮುಖಂಡ ಬಿ.ರೇವಣ್ಣ ಆಯೋಜಿಸಿದ್ದ ಉಚಿತ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಡಿಕೆಶಿ ಆರೋಪಿಸಿದರು. ಕೇಂದ್ರ ಸರ್ಕಾರ ಕೊರೊನಾ ಕಾಲದಲ್ಲಿ ದುಡ್ಡು ಮಾಡಲು ನಿಂತಿದೆ. ಒಂದು ಕಡೆ ತೈಲ ಬೆಲೆ ಏರಿಕೆ ಮಾಡಿದ್ರೆ ಮತ್ತೊಂದು ಕಡೆ ಕೊರೊನಾ ವೈದ್ಯಕೀಯ ಸಾಮಾಗ್ರಿಗಳಲ್ಲಿ ಕಮೀಷನ್ ಪಡೆದಿದೆ. ಇಂತಹ ಸರ್ಕಾರವನ್ನು ನಾನು ಎಂದಿಗೂ ನೋಡಿರಲಿಲ್ಲ. ಬೆಲೆ ಏರಿಕೆ ಮೂಲಕ ಜನರ ಜೇಬಿನಿಂದ ಪಿಕ್ ಪಾಕೆಟ್ ಮಾಡ್ತಿರೋ ಸರ್ಕಾರ ಎಮದು ಬಿ.ರೇವಣ್ಣ ಆಯೋಜಿಸಿದ್ದ ಉಚಿತ ಫುಡ್ ಕಿಟ್ ವಿತರಣೆಗೆ ಚಾಲನೆ ನೀಡಿ ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ಮಾರುಕಟ್ಟೆಯಲ್ಲಿ ಕಡಿಮೆ ಅವಕಾಶ ಕೊಟ್ಟು, ಮಧ್ಯ ಮಾರಾಟಕ್ಕೆ ಮಾತ್ರ ಹೆಚ್ಚುಕಾಲವಕಾಶ ಅಂತೆ ೧೦ ಗಂಟೆಯವರಗೆ ತೆರೆಯಬಹುದಂತೆ..! ತರಕಾರಿ ವ್ಯಾಪಾರಕ್ಕೆ ಮಾತ್ರ ೬ ರಿಂದ ೮ ಗಂಟೆಗೆ ಮಾತ್ರ ಅವಕಾಶ.
ಮಧ್ಯ ಮಾರಾಟಕ್ಕೆ ಮಾತ್ರ ೧೦ ಗಂಟೆ ಅವಕಾಶ..
ಇವಾಗ ೨ ಗಂಟೆ ಕಾಲಾವಕಾಶ ಕೊಟ್ಟಿದ್ದಾರೆ. ವ್ಯಾಪಾರಸ್ಥರನ್ನ ಮಾರುಕಟ್ಟೆಯಲ್ಲಿ ಸಮಯ ಮುಗಿದ ಮೇಲೆ ಹೋಡೆದೊಡಿಸುತ್ತಾರೆ. ರಕ್ಷಣೆಗೆ ಏನಾದರೂ ಹೋದ್ರ ಈ ಸರ್ಕಾರದವರು..?. ಇವರಿಗೆ ಸರಿಯಾದ ಸಂದರ್ಭದಲ್ಲಿ ನೀವೆ ಬುದ್ದಿಕಲಿಸಬೇಕು, ನೀವೆ ಪಾಠ ಕಲಿಸಬೇಕು.. ಕಾಂಗ್ರೆಸ್ ನವರು ನಿಮಗೆ ಎಲ್ಲತರಹದ ಸೇವೆ ಮಾಡಲು ಸಿದ್ದವಿದ್ದೇವೆ ಎಂದರು.
ಪೆಟ್ರೋಲ್ ಬೆಲೆ ೧೦೦ ನಾಟ್ ಔಟ್ ಆಗಿದೆ. ಪೆಟ್ರೋಲ್ ಬೆಲೆ ಇಳಿಕೆಯಾಗಲಿ ವಾಪಸ್ಸು ನಿಮಗೆ ಬರಲಿ.
ಸರ್ಕಾರ ನಿಮ್ಮ ಬದುಕಲ್ಲಿ ಚಲ್ಲಾಟವಾಡುವುದು ಬೇಡ ಎಂದು ಪ್ರಾರ್ಥಿಸುತ್ತೇನೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಡಿಕೆಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದ್ರುವ ನಾರಾಯಣ್, ಮಾಜಿ ಸಚಿವ ಚಲುವರಾಯಸ್ವಾಮಿ..
ಮಾಜಿ ಸಚಿವ ನರೇಂದ್ರ ಸ್ವಾಮಿ, ಮಂಡ್ಯ ಜಿಲ್ಲಾ ಅಧ್ಯಕ್ಷ ಗಂಗಾಧರ್, ಮಾಜಿ ಶಾಸಕ ಕೆ ಬಿ ಚಂದ್ರು ಶೇಖರ್, ಮುಖಂಡ ರಾದ ರವಿಗಾಣಿಗ, ರೇವಣ್ಣ ಅಭಿಮಾನಿ ಬಳಗದ ಮಂಜುನಾಥ್, ಶ್ರೀಕಂಠ, ಮಹದೇವ, ಜಗದೀಶ್ ಹಾಗೂ ಅಭಿಮಾನಿಗಳು ಉಪಸ್ಥುತರಿದ್ದರು.
ವರದಿ.. ಟಿ ಆಸ್ ಶಶಿಕಾಂತ್ ಶೆಟ್ಟಿ, ಮಂಡ್ಯ.. ಪಾಂಡವಪುರ

More Stories
ಫೈಟರ್ ರವಿ ಸಾರಥ್ಯದಲ್ಲಿ ಹನುಮ ಮಾಲಾಧಾರಿಗಳು ಯಾತ್ರೆ
ಕಾಂತಾಪುರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಸಿ.ಕೆ.ರಮೇಶ್ ಕುಮಾರ ಆಯ್ಕೆ
ನಾಗಮಂಗಲದಲ್ಲಿ 75 ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಚೆಲುವರಾಯಸ್ವಾಮಿ ಸಾರಥ್ಯದಲ್ಲಿ ಪಾದಯಾತ್ರೆ