
ನಾಗಮಂಗಲ: ಶಿವಮೊಗ್ಗದಿಂದ ಶೀರಂಗಪಟ್ಟಣದವರೆಗೆ ಹೊರಟಿದ್ದ ಚಿತಾಭಸ್ಮ ರಥಯಾತ್ರೆಗೆ ರಾಜ್ಯ ಸರ್ಕಾರದಿಂದಲೇ ಅಡ್ಡಿ ಎಂದು ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲೂಕಿನ ದೇವನೂರು ಸಮೀಪದ ಕಾಳಿಮಠದ ಶ್ರೀ ಯೋಗೇಂದ್ರ ಋಷಿಕುಮಾರ ಮಹಾಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲೆ ನಾಗಮಂಗಲ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಳೆದ ಭಾನುವಾರ ರಾತ್ರಿ ಕೊಲೆಯಾಗಿದ್ದ ಭಜರಂಗದಳ ಕಾರ್ಯಕರ್ತ ಹರ್ಷ ಹಿಂದೂ ಚಿತಾಭಸ್ಮ ಕ್ಕೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಹತ್ಯೆಯಾಗಿರುವ ಹರ್ಷ ಕುಟುಂಬದ ಸದಸ್ಯರು ನನಗೆ ಹಸ್ತಾಂತರಿಸಿರುವ ಚಿತಾಭಸ್ಮ ವನ್ನು ರಥಯಾತ್ರೆ ಮೂಲಕ ಕಾವೇರಿ ನದಿಯಲ್ಲಿ ಚಿತಾಭಸ್ಮ ವಿಸರ್ಜನೆ ಮಾಡುವ ಉದ್ದೇಶಕ್ಕೆ ರಾಜ್ಯಸರ್ಕಾರ ಅವಕಾಶ ನೀಡಿಲ್ಲ. ಸರ್ಕಾರ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ. ಮುಖ್ಯಮಂತ್ರಿಗಳು ಮತ್ತು ಗೃಹಸಚಿವರಿಗೆ ನಮಗೆ ರಕ್ಷಣೆ ನೀಡಲು ಸಾಧ್ಯವಾಗುತ್ತಿಲ್ಲ. ಹಿಂದೂಗಳ ಅಸ್ತಿಗೆ ಭದ್ರತೆ ನೀಡದ ಈ ಸರ್ಕಾರ ಹಿಂದುಗಳ ಅಸ್ತಿತ್ವ ಕಾಯಲ್ಲ. ಸಂತ್ರಸ್ತ ಕುಟುಂಬಕ್ಕೆ ಕೇವಲ ಹಣದ ಸಹಾಯ ಜನಸಾಮಾನ್ಯರನ್ನು ಮರಳು ಮಾಡುವ ತಂತ್ರವಷ್ಟೆ. ಇಡೀ ರಾತ್ರಿ ಪೊಲೀಸರ ಬೆಂಗಾವಲಿನಲ್ಲಿ ನನ್ನನ್ನು ನಾಗಮಂಗಲದ ಪ್ರವಾಸಿ ಮಂದಿರಕ್ಕೆ ಕರೆತರಲಾಗಿದೆ. ಆದರೆ ಸಂತ್ರಸ್ತ ಕುಟುಂಬದ ಸಂಪ್ರದಾಯದ ವಿಧಿ-ವಿಧಾನಗಳೊಂದಿಗೆ ಅಸ್ತಿ ವಿಸರ್ಜನೆಯಾಗಬೇಕಿದೆ. ಇಲ್ಲಿಂದಾದರೂ ರಥಯಾತ್ರೆ ಮೂಲಕವೇ ಚಿತಾಭಸ್ಮ ತೆರಳಬೇಕಿದೆ .ಅಲ್ಲಿಯವರೆಗೆ ನಾನು ಇಲ್ಲಿಯೇ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ಹೇಳುತ್ತಿದ್ದಾಗಲೇ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ದೂರವಾಣಿ ಮೂಲಕ ಕಾಳಿ ಸ್ವಾಮೀಜಿ ಮನವೊಲಿಸಿದರು. ಮುತಾಲಿಕ್ ಮನವಿಯ ಮೇರೆಗೆ ಶ್ರೀರಂಗಪಟ್ಟಣಕ್ಕೆ ತೆರಳಿದರು.
ವರದಿ: ಚಂದ್ರಮೌಳಿ ನಾಗಮಂಗಲ
More Stories
ಫೈಟರ್ ರವಿ ಸಾರಥ್ಯದಲ್ಲಿ ಹನುಮ ಮಾಲಾಧಾರಿಗಳು ಯಾತ್ರೆ
ಕಾಂತಾಪುರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಸಿ.ಕೆ.ರಮೇಶ್ ಕುಮಾರ ಆಯ್ಕೆ
ನಾಗಮಂಗಲದಲ್ಲಿ 75 ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಚೆಲುವರಾಯಸ್ವಾಮಿ ಸಾರಥ್ಯದಲ್ಲಿ ಪಾದಯಾತ್ರೆ