
ನಾಗಮಂಗಲ:- ಹರದನಹಳ್ಳಿ ಪಂಚಾಯತಿಗೆ ಮೂಲಭೂತ ಸೌಕರ್ಯಗಳಲ್ಲೊಂದಾದ ಸಾರಿಗೆ ಬಸ್ ಇಲ್ಲವಂತೆ, ಪ್ರತಿ ದಿನವೂ ಆಟೋಗಳಿಗೆ 70 ರಿಂದ 80ರೂ ಕೊಟ್ಟು ಶಾಲಾ ಕಾಲೇಜಿಗೆ ಬಂದು ಓದಲಿಕ್ಕೆ ಆಗುತ್ತಾ ಇಲ್ಲವೆಂದು ತಾಲ್ಲೂಕು ಆಡಳಿತ ವ್ಯವಸ್ಥೆ ವಿರುದ್ಧ ಹರದನಹಳ್ಳಿ ಗ್ರಾಮ ಪಂಚಾಯತಿಯ ಸುತ್ತಮುತ್ತಲ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ
ನಾಗಮಂಗಲ ತಾಲ್ಲೂಕಿನ ಹರದನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿದ್ಯಾರ್ಥಿಗಳು ನಿತ್ಯವೂ ಶಾಲಾ ಕಾಲೇಜಿಗೆ ತೆರಳಲು ಸಾರಿಗೆ ಸಂಪರ್ಕವಿಲ್ಲದೆ ಪರದಾಡುತ್ತಿದ್ದಾರೆ.
ಶಾಲೆಗಾಗಿ ನಿತ್ಯವೂ ಕನಿಷ್ಠ 5 ರಿಂದ 10 ಕಿ.ಮೀ. ನಡೆದೆ ಹೋಗಬೇಕು, ಇಲ್ಲಾ ಅಂದ್ರೆ ಆಟೋ, ಪ್ರಯಾಣಿಕರ ಬೈಕ್ ಗಳನ್ನೆ ಆಶ್ರಯಿಸಿಬೇಕು. ಇದು ನಮ್ಮ ದಿನಚರಿಯ ನಿತ್ಯದ ಗೋಳಾಗಿದೆ ಎಂದು ವಿದ್ಯಾರ್ಥಿಗಳು ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುತ್ತ ಮುತ್ತಲ ಹಳ್ಳಿಗಳಿಂದ ಹರದನಹಳ್ಳಿ ಶಾಲಾ ಕಾಲೇಜಿಗಾಗಿ ಬರಬೇಕೆಂದರೂ ಬಸ್ಸು ಗಳಿಲ್ಲ ಆಟೋಗಳಿಗೆ ದುಬಾರಿ ಹಣ ನೀಡಬೇಕು, ಅಪರೂಪಕ್ಕೆ ಒಂದು ಖಾಸಗಿ ಬಸ್ ಇದ್ದರೂ ಶಾಲಾ ಸಮಯಕ್ಕೆ ಇಲ್ಲ ಎಂದರು.
ಈ ಬಗ್ಗೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ನಾಗಮಂಗಲ ಕೆ.ಎಸ್ .ಆರ್.ಟಿ.ಸಿ ಡಿಪೋಗೂ ಮನವಿ ಕೊಟ್ಟರೂ ಯಾವುದೆ ಪ್ರಯೋಜನವಾಗಿಲ್ಲ ಕಳೆದ 15 ವರ್ಷಗಳಿಂದ ಡಿಪೋ ಅಧಿಕಾರಿಗಳಿಗೆ ಮನವಿ ಪತ್ರ ಕೊಟ್ಟು ಕೊಟ್ಟು ಸಾಕಾಗಿದೆ, ಯಾವುದೆ ಭರವಸೆ ಮಾತ್ರ ಸಿಕ್ಕಿಲ್ಲ ಎಂದು ಪೋಷಕರು ಕಿಡಿಕಾರಿದ್ದಾರೆ.
ಹರದನಹಳ್ಳಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಾರಿಗೆ ಸೌಕರ್ಯ ಇಲ್ಲದ ಕುರಿತು ಶಾಸಕ ಸುರೇಶ್ ಗೌಡ ಗಮನಕ್ಕೂ ತಂದಿದ್ದು ಇನ್ನಾದ ನಮ್ಮ ಸಮಸ್ಯೆ ಗೆ ಸ್ಪಂದಿಸುತ್ತಾರಾ ಎಂದು. ಆಸೆಗಣ್ಣುಗಳಿಂದ ಎದುರು ನೋಡುತ್ತಿದ್ದೇವೆ ಎಂದಿರು
ವರದಿ: ಚಂದ್ರಮೌಳಿ ನಾಗಮಂಗಲ
More Stories
ಫೈಟರ್ ರವಿ ಸಾರಥ್ಯದಲ್ಲಿ ಹನುಮ ಮಾಲಾಧಾರಿಗಳು ಯಾತ್ರೆ
ಕಾಂತಾಪುರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಸಿ.ಕೆ.ರಮೇಶ್ ಕುಮಾರ ಆಯ್ಕೆ
ನಾಗಮಂಗಲದಲ್ಲಿ 75 ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಚೆಲುವರಾಯಸ್ವಾಮಿ ಸಾರಥ್ಯದಲ್ಲಿ ಪಾದಯಾತ್ರೆ