
ನಾಗಮಂಗಲ:-ತಾಲ್ಲೂಕು ಕನ್ನಡಸಾಹಿತ್ಯ ಪರಿಷತ್ತು ನಾಗಮಂಗಲ ಹಾಗೂ ಸರ್ಕಾರಿ ಚಿಣ್ಯ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಅಂತರಾಷ್ಟ್ರೀಯ ಮಾತೃಭಾಷಾ ದಿನಾಚರಣೆಯನ್ನು ಆಚರಿಸಲಾಯಿತು
ಕನ್ನಡ ಭಾಷೆಯ ಹಿರಿಮೆ-ಗರಿಮೆಯನ್ನು ಕುರಿತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಸವೇಗೌಡ ಖರಡ್ಯ ಮಾತನಾಡಿ ಕನ್ನಡ ಭಾಷೆಯು ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದ್ದು ವಿಶ್ವದಲ್ಲಿಯೇ ಅತ್ಯಂತ ಸುಂದರ ಭಾಷೆಯಾಗಿ ಹೆಸರು ವಾಸಿಯಾಗಿದೆ. ಇಲ್ಲಿಯವರೆಗೆ ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಪ್ರಸಿದ್ಧ ಭಾರತೀಯ ಭಾಷೆಗಳಲ್ಲಿ ಒಂದೆನಿಸಿದೆ.ಕನ್ನಡ ಭಾಷೆಯು ಪ್ರಾಚೀನ ಭಾಷೆಯಾದ್ದರಿಂದ ಶಾಸ್ತ್ರೀಯ ಸ್ಥಾನಮಾನ ಗಳಿಸಿದೆ.ಕನ್ನಡದ ಪ್ರಸಿದ್ಧ ಕವಿ ಮಹಾಲಿಂಗರAಗ ಹೇಳಿದಂತೆ “ಸುಲಿದ ಬಾಳೆ ಹಣ್ಣಿನಂದದಿ. ಸಿಗುರು ತೆಗೆದ ಕಬ್ಬಿನಂತೆ ಉಷ್ಣ ಅಳಿದ ಹಾಲಿನಂತೆ .ಸರಳವೂ ಸುಂದರವೂ. ಮನೋಜ್ಞವೂ ಆದ ಭಾಷೆಯಾಗಿದೆ.ಇಂದು ಕನ್ನಡದ ಕಂಪು ಪ್ರಪಂಚದಾದ್ಯAತ ಪ್ರಸರಿಸಿದೆ. ಇಂತಹ ಮಾತೃ ಭಾಷೆಯನ್ನು ಪಡೆದ ಶ್ರೀಗಂಧದ ಚೆಂದದ ಸುಂದರ ನಾಡಿನಲ್ಲಿ ಇರುವ ನಾವೇ ಧನ್ಯರು.ನಾವೆಲ್ಲರೂ ಇತರ ಭಾಷೆಗಳನ್ನು ಕಲಿತು ಕನ್ನಡ ಭಾಷೆಯನ್ನು ಹೆಚ್ಚು ಹೆಚ್ಚು ಬಳಸಿ ಉಳಿಸಬೇಕುಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕಿ ಗಾಯತ್ರಮ್ಮ, ಪನ್ನಗ ಸ್ಮಿತಾ,ಬಸವರಾಜು,ಪ್ರಕಾಶ್, ಶಿವಕುಮಾರ, ಪವಿತ್ರ ರಿಯಾನ, ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು.
ವರದಿ: ಚಂದ್ರಮೌಳಿ ನಾಗಮಂಗಲ
More Stories
ಫೈಟರ್ ರವಿ ಸಾರಥ್ಯದಲ್ಲಿ ಹನುಮ ಮಾಲಾಧಾರಿಗಳು ಯಾತ್ರೆ
ಕಾಂತಾಪುರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಸಿ.ಕೆ.ರಮೇಶ್ ಕುಮಾರ ಆಯ್ಕೆ
ನಾಗಮಂಗಲದಲ್ಲಿ 75 ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಚೆಲುವರಾಯಸ್ವಾಮಿ ಸಾರಥ್ಯದಲ್ಲಿ ಪಾದಯಾತ್ರೆ