
ನವದೆಹಲಿ, : ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣದ ಕಾರಣದಿಂದ ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯವು (ಡಿಜಿಸಿಎ) ನಿಗದಿತ ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕ ವಿಮಾನ ಸೇವೆಗಳ ಸಂಚಾರದ ಮೇಲಿನ ನಿರ್ಬಂಧವನ್ನು ಅಕ್ಟೋಬರ್ 31ರವರೆಗೂ ವಿಸ್ತರಿಸಿದೆ.
ಗೃಹ ಸಚಿವಾಲಯವು ಬುಧವಾರ ಅನ್‌ಲಾಕ್ 5ರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಡಿಜಿಸಿಎ ಈ ಪ್ರಕಟಣೆ ಹೊರಡಿಸಿದೆ. ಅನ್‌ಲಾಕ್ ಪ್ರಕ್ರಿಯೆಯ ಈಗಿನ ಹಂತದಲ್ಲಿ ಪ್ರಯಾಣಿಕರ ವೈಮಾನಿಕ ಪ್ರಯಾಣಕ್ಕೆ ಅನುಮತಿ ನೀಡಲು ಸಾಧ್ಯವಾಗುವುದಿಲ್ಲ. ಗೃಹ ಸಚಿವಾಲಯದಿಂದ ಅನುಮತಿ ಪಡೆದವರು ಮಾತ್ರವೇ ವಿಮಾನದಲ್ಲಿ ಪ್ರಯಾಣಿಸಬಹುದಾಗಿದೆ. ಆದರೆ ಸರಕು ಸಾಗಣೆ ವಿಮಾನಗಳ ಓಡಾಟಕ್ಕೆ ಯಾವುದೇ ನಿರ್ಬಂಧವಿಲ್ಲ.
ಆದರೆ ಈಗಾಗಲೇ ವಿವಿಧ ದೇಶಗಳ ನಡುವೆ ವಿಮಾನ ಸಂಚಾರ ನಡೆಸುವ ಏರ್ ಬಬಲ್ ಒಪ್ಪಂದಗಳನ್ನು ಭಾರತ ಮಾಡಿಕೊಂಡಿದ್ದು, ಅದು ಮುಂದುವರಿಯಲಿದೆ. ಇದಕ್ಕೂ ಮುನ್ನ ಬುಧವಾರ ನಾಗರಿಕ ವಿಮಾನಯಾನ ಸಚಿವಾಲಯವು ಭಾರತೀಯರು ಪ್ರಯಾಣಿಸಬಹುದಾದ ದೇಶಗಳ ಪಟ್ಟಿಗೆ ಭೂತಾನ್ ಮತ್ತು ಕೀನ್ಯಾಗಳನ್ನು ಸೇರ್ಪಡೆ ಮಾಡಿದೆ. ಭಾರತ-ಭೂತಾನ್ ಮತ್ತು ಭಾರತ-ಕೀನ್ಯಾ ನಡುವಿನ ಏರ್ ಬಬಲ್ ಕಾರ್ಯಾಚರಣೆ ಆರಂಭಿಸಿದ್ದು, ಈ ಮೂರೂ ದೇಶಗಳ ಎಲ್ಲ ರಾಷ್ಟ್ರೀಯ ವಿಮಾನಗಳು ವಾಣಿಜ್ಯ ಪ್ರಯಾಣ ಸೇವೆಯನ್ನು ಆರಂಭಿಸಲಿವೆ.
ಭಾರತವು ಇದೇ ರೀತಿ ಏರ್ ಬಬಲ್ ಹೊಂದಾಣಿಕೆಯನ್ನು ಅಮೆರಿಕ, ಬ್ರಿಟನ್, ಜರ್ಮನಿ, ಫ್ರಾನ್ಸ್, ಅಫ್ಘಾನಿಸ್ತಾನ, ಬಹರೇನ್, ಭೂತಾನ್, ಕೀನ್ಯಾ, ಕೆನಡಾ, ಇರಾಕ್, ಜಪಾನ್, ಮಾಲ್ಡೀವ್ಸ್, ನೈಜೀರಿಯಾ, ಕತಾರ್ ಮತ್ತು ಯುಎಇ ನಡುವೆ ಮಾಡಿಕೊಂಡಿದೆ.
source: Oneindia
More Stories
ಈಜಿಪ್ಟ್ ನಲ್ಲಿ ನಡೆಯಲಿರುವ ಹವಾಮಾನ ವೈಫರೀತ್ಯದ ವಿಶ್ವ ನಾಯಕರ ಸಮಾವೇಶಕ್ಕೆ ಕನ್ನಡಿಗ ಐಎಫ್ಎಸ್ ಅಧಿಕಾರಿ ಎ.ಟಿ. ದಾಮೋದರ ನಾಯ್ಕ
‘ಖೇಲ್ ರತ್ನ ಪ್ರಶಸ್ತಿ’ಯನ್ನು ‘ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ’ ಎಂದು ಮರುನಾಮಕರಣ – ಪ್ರಧಾನಿ ನರೇಂದ್ರ ಮೋದಿ ಘೋಷಣೆ
NEET-PG ಪರೀಕ್ಷೆ ಕನಿಷ್ಠ ʼ4 ತಿಂಗಳು ಮುಂದೂಡಿಕೆʼ; ಕೇಂದ್ರ ಸರ್ಕಾರ ಘೋಷಣೆ