
ಪಾಂಡವಪುರ :-ಎಐಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಡಾ. ರವೀಂದ್ರ ರವರು ಪಾಂಡವಪುರ ಐದು ರುತ್ತದ ಬಳಿ ಪಟಾಕಿ ಸಿಡಿಸಿ ಸಿಹಿ ವಿತರಣೆ ಮಾಡಿದರು..
ಡಾ. ರವೀಂದ್ರ ರವರು ಮಾತನಾಡುತ್ತ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಭಾರತದಲ್ಲಿ 5 ತಿಂಗಳು ಯಶಸ್ವಿಯಾಗಿ ಜೋಡೋಯಾತ್ರೆ ನಡೆಸಿ ಯುವಕರು,ಮಹಿಳೆಯರು, ಎಲ್ಲ ವರ್ಗದ ಜನರಿಗೆ ಪ್ರೀತಿ ಪಾತ್ರರದರು ಹಾಗೂ ಒಬ್ಬ ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಇನ್ನು ಹೆಚ್ಚಿನ ಕೆಲಸ ಮಾಡಲು ಸಹಾಯ ಮಾಡಿದ್ದಾರೆ..
ವಿರೋಧ ಪಕ್ಷದ ನಾಯಕ ರಾದ ಸಿದ್ದರಾಮಯ್ಯ ಕರ್ನಾಟಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ ಕೆ ಶಿವಕುಮಾರ್‌ರವರಿಗೆ ಕರ್ನಾಟಕದಲ್ಲಿ 2023 ರ ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಎಲ್ಲರೂ ಒಂದು ಗೂಡಿ ಪಕ್ಷವನ್ನು ಅಧಿಕಾರದ ಚುಕ್ಕಾಣಿ ಹಿಡಿಯಲು ಸಹಕರಿಸ ಬೇಕು ಎಂದು ಹೇಳಿದರು ಹಾಗೂ 224 ವಿಧಾನ ಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ ಎಂದು ಮಾಧ್ಯಮಕ್ಕೆ ಉತ್ತರಿಸಿದರು…
2017 ರಲ್ಲಿ ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ರೈತ ಸಂಘದ ಶಾಸಕರಾಗಿದ್ದ ಕೆ ಎಸ್ ಪುಟ್ಟಣ್ಣಯ್ಯ ನವರು ಅಕಾಲಿಕ ಮರಣ ಹೊಂದಿದ ಕಾರಣದಿಂದ ನಾವು ಹೈಕಮಾಂಡ್ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರೊಂದಿಗೆ ಮಾತನಾಡಿ ದರ್ಶನ್ ಪುಟ್ಟಣ್ಣಯ್ಯ ನವರಿಗೆ ಸಹಕರಿಸಲಿತು.. ಆದರೆ ಈ ಬಾರಿ 2023ರ ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದು ಖಚಿತ ಹಾಗೂ ಅಮೆರಿಕಕ್ಕೆ ಹೊದವರಿಗೆಲ್ಲ ನಾವೂ ಸಹಕರಿಸಲು ಸಾಧ್ಯವಿಲ್ಲ ಅಂದು ಹೇಳಿದರು..
ಈ ಕಾರ್ಯಕ್ರಮದಲ್ಲಿ ಮೇಲುಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೊನಗನಹಳ್ಳಿ ಕೃಷ್ಣೇಗೌಡ, ಕಿಟ್ಟಿ, ಬಾಬು, ದೀಪಕ್, ರಾಮು, ವಿಜಯ್ ಕುಮಾರ್..
ದೇವರಾಜು, ಮಹೇಶ್, ಕೃಷ್ಣಯ್ಯ, ಹನುಮಯ್ಯ, ಕೋಮಲ, ಹಾಗೂ ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರು..ಪುರಸಭಾ ಸದಸ್ಯರು..ಜಿಲ್ಲಾ ಪಂಚಾಯತ್ ಸದಸ್ಯರು..ಮುಖಂಡರು ಹಾಜರಿದ್ದರು….
ವರದಿ..
ಟಿ ಎಸ್ ಶಶಿಕಾಂತ್
More Stories
ಮ್ಯಾರಥಾನ ಓಟದ ಮೂಲಕ ಮತದಾನ ಜಾಗೃತಿ
ಮೃತ ನೇಹಾಳಿಗೆ ಶ್ರದ್ಧಾಂಜಲಿ ಸಲ್ಲಿಸಿದ ಡಾ.ಅಂಜಲಿ
ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಸಾಧನಾ ಕುಟೀರದ 6ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ