
ಬೆಂಗಳೂರು: ರಾಜ್ಯದಲ್ಲಿ ಇಂದು ೨೭೧ ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ೬೫೧೬ ಕ್ಕೆ ಏರಿಕೆಯಾಗಿದೆ. ೩೪೪೦ ಜನ ಗುಣಮುಖರಾಗಿದ್ದು, ೨೯೯೫ ಸೋಂಕಿತರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ
ಇನ್ನು ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿoದಾಗಿ ಇಂದು ೭ ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ನಾಲ್ವರು, ಹಾಸನದಲ್ಲಿ ೧, ಕಲಬುರಗಿಯಲ್ಲಿ ೨ ಸಾವನ್ನಪ್ಪಿದ್ದಾರೆ. ಇದುವರೆಗೆ ೭೯ ಮಂದಿ ಮೃತಪಟ್ಟಿದ್ದಾರೆ. ೪೬೪ ಸೋಂಕಿತರು ಗುಣಮುಖರಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಗುಣಮುಖರಾದವರ ಸಂಖ್ಯೆ ೩೪೪೦ ಏರಿದ್ದು, ೨೯೯೫ ಆಕ್ಟಿವ್ ಕೇಸ್ ಇದೆ ಅಂತಾ ಆರೋಗ್ಯ ಇಲಾಖೆ ತಿಳಿಸಿದೆ. ಇಂದು ಪತ್ತೆಯಾದ ೨೭೧ ಪ್ರಕರಣಗಳಲ್ಲಿ ೯೨ ಅಂತಾರಾಜ್ಯ ಹಾಗೂ ೧೪ ಅಂತಾರಾಷ್ಟ್ರೀಯ ಪ್ರಯಾಣಿಕರು ಇರೋದಾಗಿ ಮಾಹಿತಿ ಲಭ್ಯವಾಗಿದೆ.
ಇದು ಪತ್ತೆಯಾದ ಜಿಲ್ಲಾವಾರು ಸೊಂಕಿತರು ಸಂಖ್ಯೆ ನೋಡುವುದಾದರೆ ಬಳ್ಳಾರಿ -೯೭,ಬೆಂಗಳೂರು ನಗರ -೩೬, ಉಡುಪಿ-೨೨, ಕಲಬುರಗಿ -೨೦, ಧಾರವಾಡ -೧೯,ದಕ್ಷಿಣ ಕನ್ನಡ -೧೭, ಬೀದರ್ -೧೦, ಹಾಸನ -೦೯, ಮೈಸೂರು -೦೯, ತುಮಕೂರು -೦೭, ಶಿವಮೊಗ್ಗ -೦೬, ರಾಯಚೂರು -೦೪,ಉತ್ತರಕನ್ನಡ -೦೪, ಚಿತ್ರದುರ್ಗ -೦೩, ರಾಮನಗರ -೦೩, ಮಂಡ್ಯ -೦೨ಬೆಳಗಾವಿ -೦೧,ವಿಜಯಪುರ -೦೧,ಕೋಲಾರ -೦೧ ಪ್ರಕರಣ ಪತ್ತೆಯಾಗಿದೆ.
More Stories
ಮ್ಯಾರಥಾನ ಓಟದ ಮೂಲಕ ಮತದಾನ ಜಾಗೃತಿ
ಮೃತ ನೇಹಾಳಿಗೆ ಶ್ರದ್ಧಾಂಜಲಿ ಸಲ್ಲಿಸಿದ ಡಾ.ಅಂಜಲಿ
ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಸಾಧನಾ ಕುಟೀರದ 6ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ