April 5, 2025

Bhavana Tv

Its Your Channel

ರಾಜ್ಯದಲ್ಲಿ ಕಿಲ್ಲರ್ ಕೊರೊನಾ ಅಟ್ಟಹಾಸ: ಒಂದೇ ದಿನ 416 ಮಂದಿಗೆ ಕೊರೊನಾ ಸೋಂಕು, 9 ಸಾವು

ಬೆಂಗಳೂರು : ಜೂನ್ 20: ಕರ್ನಾಟಕದಲ್ಲಿ ಇಂದು 416 ಜನರಿಗೆ ಕೊರೊನಾ ವೈರಸ್ ದೃಢವಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 8697ಕ್ಕೆ ಏರಿಕೆಯಾಗಿದೆ.

ಇಂದು ವರದಿಯಾದ ಒಟ್ಟು ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 94 ಕೇಸ್ ಪತ್ತೆಯಾಗಿದೆ. ಬೀದರ್‌ನಲ್ಲಿ 73 ಜನರಿಗೆ ಮಹಾಮಾರಿ ವಕ್ಕರಿಸಿದೆ. ರಾಮನಗರದಲ್ಲಿ 38 ಹಾಗೂ ಬಳ್ಳಾರಿಯಲ್ಲಿ 38 ಮಂದಿಗೆ ಕೊವಿಡ್ ತಗುಲಿದೆ.

ಕಲಬುರಗಿಯಲ್ಲಿ 34 ಕೇಸ್, ಮೈಸೂರಿನಲ್ಲಿ 22 ಕೇಸ್, ಹಾಸನದಲ್ಲಿ 16 ಕೇಸ್, ರಾಯಚೂರಿನಲ್ಲಿ 15 ಕೇಸ್, ಉಡುಪಿಯಲ್ಲಿ 13 ಕೇಸ್, ಹಾವೇರಿಯಲ್ಲಿ 12 ಕೇಸ್, ವಿಜಯಪುರದಲ್ಲಿ 9 ಕೇಸ್, ಚಿಕ್ಕಮಗಳೂರಿನಲ್ಲಿ 8 ಕೇಸ್, ಧಾರವಾಡ ಹಾಗೂ ಚಿಕ್ಕಬಳ್ಳಾಪುರದಲ್ಲಿ ತಲಾ 5 ಕೇಸ್, ದಕ್ಷಿಣ ಕನ್ನಡ, ಮಂಡ್ಯ, ಉತ್ತರ ಕನ್ನಡ, ಕೋಲಾರ, ಬೆಂಗಳೂರು ಗ್ರಾಮಾಂತರದಲ್ಲಿ ತಲಾ 4 ಪ್ರಕರಣ ವರದಿಯಾಗಿದೆ.

error: