
ರಾಮನಗರ: ಪ್ರತಿಭೆ ಯಾರೊಬ್ಬರ ಆಸ್ತಿಯೂ ಅಲ್ಲ. ಸಾಧಿಸುವ ಛಲವೊಂದಿದ್ದರೆ ಯಾರೂ ಬೇಕಾದರೂ ಸಾಧನೆಯ ಶಿಖರವನ್ನೇರಬಹುದಾಗಿದೆ. ಈ ಸಾಲಿಗೆ ಬೊಂಬೆ ನಾಡು ಚನ್ನಪಟ್ಟಣದ ಹುಡುಗ ಸೇರ್ಪಡೆಯಾಗುತ್ತಾನೆ. ಚನ್ನಪಟ್ಟಣದ ಮತ್ತೀಕೆರೆ ಗ್ರಾಮದ ದರ್ಶನ್‌ಗೌಡ ತನ್ನ ಅಸಾಮಾನ್ಯ ಸಾಧನೆಯ ಮೂಲಕ ಇಂದು ಗಿನ್ನೀಸ್ ದಾಖಲೆ ಮಾಡಿದ್ದಾನೆ.
ಹೌದು, ಈತ 6.9 ಸೆಂಟಿಮೀಟರ್ ಅಳತೆಯ ಒಂದು ಸಿಗರೇಟ್ನ ಮೇಲೆ ‘ಸ್ಮೋಕಿಂಗ್ ಇಸ್ ಇಂಜುರಿಯಸ್ ಟು ಹೆಲ್ತ್’ ಮತ್ತು ‘ಇಂಡಿಯಾ’ ಎಂಬ ಪದಗಳನ್ನು ಬಳಸಿ 7186 ಅಕ್ಷರಗಳನ್ನು ಬರೆದು ಇಂಡಿಯಾ ಬುಕ್ ಆಫ್ ರೆಕಾರ್ಡ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಸ್ಥಾನ ಪಡೆದಿದ್ದಾನೆ. ಆ ಮೂಲಕ ಗ್ರಾಂಡ್ ಮಾಸ್ಟರ್ ಎಂಬ ಬಿರುದಿಗೆ ಪಾತ್ರನಾಗಿದ್ದಾನೆ.
ದರ್ಶನ್‌ಗೌಡ ಮತ್ತೀಕೆರೆ ಗ್ರಾಮದ ಮುಖ್ಯಶಿಕ್ಷಕ ಸುರೇಶ್ ಮತ್ತು ಶೋಭಾ ದಂಪತಿ ಮಗ. ಯುವ ಜನಾಂಗದ ಆರೋಗ್ಯ ಕಾಳಜಿ ಹಾಗೂ ದೇಶಾಭಿಮಾನವನ್ನು ರೂಢಿಸುವ ಸದುದ್ದೇಶವನ್ನುಇಟ್ಟುಕೊಂಡು ಈ ಸಾಧನೆ ಮಾಡಿದ್ದಾರೆ ದರ್ಶನ್.
ಇನ್ನು, ಈ ಯುವಕ ಬಹುಮುಖ ಪ್ರತಿಭೆಯುಳ್ಳವನಾಗಿದ್ದಾನೆ. 2018-19 ನೇ ಸಾಲಿನಲ್ಲಿ ಥೈಲ್ಯಾಂಡ್ ದೇಶದಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ಚಾಂಪಿಯನ್ ಶಿಪ್ನಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.
ಇಷ್ಟೇ ಅಲ್ಲದೇ ಸಮಾಜಕ್ಕೆ ಜಾಗೃತಿ ಮೂಡಿಸುವ ಕಿರುಚಿತ್ರಗಳ ನಿರ್ಮಾಣ, ಸಾಹಿತ್ಯ ಹಾಗೂ ರಂಗಭೂಮಿ ಕ್ಷೇತ್ರದಲ್ಲಿ ನಿರಂತರವಾಗಿಯೂ ತೊಡಗಿಸಿಕೊಂಡಿದ್ದಾರೆ. ಯುವಸಮೂಹ ಹಾಗೂ ವಿದ್ಯಾರ್ಥಿಗಳಿಗೆ, ವ್ಯಕ್ತಿತ್ವ ವಿಕಸನ ತರಬೇತುದಾರರಾಗಿಯೂ ಸಹ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ದರ್ಶನ್.
ರಾಮನಗರ ಜಿಲ್ಲೆಗೆ ಕೀರ್ತಿ ತಂದಿರುವ ಸಾಧಕ ದರ್ಶನ್‌ಗೌಡ ಎಂ.ಎಸ್ ಅವರಿಗೆ ಜಿಲ್ಲೆಯ ಹಲವಾರು ಗಣ್ಯರ ಜೊತೆಗೆ ದರ್ಶನ್ ಗುರುಗಳಾದ ವಿಜಯ್ ರಾಂಪುರರವರು ಶುಭ ಕೋರಿದ್ದಾರೆ.
More Stories
ಮ್ಯಾರಥಾನ ಓಟದ ಮೂಲಕ ಮತದಾನ ಜಾಗೃತಿ
ಮೃತ ನೇಹಾಳಿಗೆ ಶ್ರದ್ಧಾಂಜಲಿ ಸಲ್ಲಿಸಿದ ಡಾ.ಅಂಜಲಿ
ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಸಾಧನಾ ಕುಟೀರದ 6ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ