May 6, 2024

Bhavana Tv

Its Your Channel

ರಾಜ್ಯದಲ್ಲಿ ಇನ್ಮುಂದೆ ‘ನೆಗೆಟಿವ್ ಲ್ಯಾಬ್ ರಿಪೋರ್ಟ್’ ಎಸ್‌ಎಂಎಸ್ ಮೂಲಕ ರವಾನೆ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಬಂದ್ರೆ ಮಾತ್ರ ಆರೋಗ್ಯ ಇಲಾಖೆಯವರು ಮಾಹಿತಿ ನೀಡುತ್ತಾರೆ. ನೆಗೆಟಿವ್ ಅಂತ ಬಂದ್ರೆ. ಒಂದೇ ಒಂದು ಮಾಹಿತಿ ಕೂಡ ನೀಡದೇ ಸುಮ್ಮನಿರುತ್ತಾರೆ ಎಂಬುದಾಗಿ ಕೊರೋನಾ ಪರೀಕ್ಷೆಗೆ ಒಳಗಾದಂತ ಅನೇಕರು ದೂರಾಗಿತ್ತು. ಇದೀಗ ಈ ನಿರ್ಲಕ್ಷ್ಯಕ್ಕೆ ಆರೋಗ್ಯ ಇಲಾಖೆ ಬ್ರೇಕ್ ಹಾಕಿದೆ. ಇನ್ಮುಂದೆ ಕೋವಿಡ್-19 ಸೋಂಕಿಲ್ಲ (ನೆಗೆಟಿವ್) ಎಂಬುದಾಗಿ ವ್ಯಕ್ತಿಗಳ ಫಲಿತಾಂಶವನ್ನೂ ಎಸ್‌ಎಂಎಸ್ ಮೂಲಕ ರವಾನಿಸುವಂತೆ ಖಡಕ್ ಸೂಚನೆ ನೀಡಿದೆ.

ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರಾದಂತ ಡಾ.ಅರುಂಧತಿ ಚಂದ್ರಶೇಖರ್ ಅವರು, ಎಲ್ಲಾ ಕೋವಿಡ್-19 ಪ್ರಯೋಗಾಲಯಗಳ ನೋಡಲ್ ಅಧಿಕಾರಿಗಳು ಕೋವಿಡ್-19 ಸೋಂಕಿಲ್ಲದ (Negative) ವ್ಯಕ್ತಿಗಳ ಫಲಿತಾಂಶ ಬಂದ ಕೂಡಲೇ, ಸಂಬಂಧ ಪಟ್ಟವರಿಗೆ ಎಸ್ ಎಂ ಎಸ್ ಮುಖಾಂತರ ಕನ್ನಡ ಮತ್ತು ಇಂಗ್ಲೀಷ್ ಭಾಷೆ ಎರಡರಲ್ಲೂ ರವಾನಿಸುವಂತೆ ಸೂಚಿಸಿದ್ದಾರೆ.

error: