May 6, 2024

Bhavana Tv

Its Your Channel

ತೆಲಂಗಾಣದಲ್ಲಿ ವರುಣಾರ್ಭಟಕ್ಕೆ 32 ಮಂದಿ ಬಲಿ..!

ಹೈದರಾಬಾದ್: ತೆಲಂಗಾಣದಲ್ಲಿ ಸತತ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ರಾಜಧಾನಿ ಹೈದರಾಬಾದ್ ಮತ್ತು ಸುತ್ತಮುತ್ತ ಪ್ರದೇಶಗಳ ಜನಜೀವನ ಅಸ್ತವ್ಯಸ್ತವಾಗಿದ್ದು, ಜನರು ತಮ್ಮ ಜೀವವನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಭೀಕರ ಪ್ರವಾಹಕ್ಕೆ ಇದುವರೆಗೆ ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 32ಕ್ಕೇರಿದ್ದು, ಹೈದರಾಬಾದ್‌ನಲ್ಲಿಯೇ 25 ಮಂದಿ ಮೃತಪಟ್ಟಿದ್ದಾರೆ.


ಜಡಿ ಮಳೆಗೆ ಮನೆಗಳ ಗೋಡೆ ಕುಸಿದು, ವಿದ್ಯುತ್ ಪ್ರವಹಿಸಿ ಮತ್ತು ಕಾಲುವೆಗಳಲ್ಲಿ ಕೊಚ್ಚಿಹೋಗಿ ಹೈದರಾಬಾದ್‌ನ ಹೊರವಲಯಗಳಲ್ಲಿ 9 ಮಂದಿ ಕಾಣೆಯಾಗಿದ್ದಾರೆ. ಗಂಗನ್ ಪಹಾಡ್‌ನಲ್ಲಿ ಮೂವರು ಕಾರ್ಮಿಕರು ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾರೆ. ಹಾಗು ಮಹಬೂಬ್ ನಗರ ಜಿಲ್ಲೆಯಲ್ಲಿ 7 ಮಂದಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಬಂಜಾರಾ ಹಿಲ್ಸ್ ಪ್ರದೇಶದಲ್ಲಿ ವೈದ್ಯರೊಬ್ಬರ ಮೇಲೆ ವಿದ್ಯುತ್ ಪ್ರವಹಿಸಿ ನೀರಿನಲ್ಲಿ ಕೊಚ್ಚಿ ಹೋಗಿದ್ದು, ದಿಲ್ಸುಕ್ ನಗರದಲ್ಲಿ ಮೂರು ವರ್ಷದ ಮಗು ಅಪಾರ್ಟ್ಮೆಂಟ್‌ನಲ್ಲಿ ನೀರು ನುಗ್ಗಿ ಕೊಚ್ಚಿ ಹೋಗಿದ್ದಾಳೆ. ಜೊತೆಗೆ ಚಂದ್ರಯಾನಗುಟ್ಟದಲ್ಲಿ ರಾತ್ರಿ ವೇಳೆ ಬಂಡೆಯೊಂದು ಮನೆಗೆ ಅಪ್ಪಳಿಸಿ ಗೋಡೆ ಕುಸಿದುಬಿದ್ದು 8 ಮಂದಿ ಮೃತಪಟ್ಟಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಮತ್ತು ಪೌರಾಡಳಿತ ಸಚಿವ ಕೆ.ಟಿ. ರಾಮ ರಾವ್ ಪರಿಸ್ಥಿತಿ ಮೆಲೆ ನಿಗಾವಹಿಸುತ್ತಿದ್ದು, ಜನರ ಸಂಕಷ್ಟಕ್ಕೆ ಧಾವಿಸುವಂತೆ ಸಂಬಂಧಪಟ್ಟ ಆಡಳಿತಾಧಿಕಾರಿಗಳಿಗೆ ಸೂಚಿಸುತ್ತಿದ್ದಾರೆ. ಜೊತೆಗೆ ಓಆಖಈ ತಂಡದಿಂದ ಹೈದರಾಬಾದ್‌ನಲ್ಲಿ ರಕ್ಷಣಾ ಕಾರ್ಯವು ನಿರಂತರವಾಗಿ ಸಾಗುತ್ತಿದೆ

error: