ತುಮಕೂರು: ಜಿಲ್ಲೆಯ ಆಯುಷ್ಮಾನ್ ಕರ್ನಾಟಕ ಯೋಜನೆ ಅಡಿಯಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸಂಪೂರ್ಣ ಉಚಿತವಾಗಿ ಮಹಾಮಾರಿ ಕೋರೋನಾ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡುವ ಬಗ್ಗೆ ಹಾಗೂ ಜಿಲ್ಲೆಯ ಯುವಜನತೆಗೆ ೧ ಮತ್ತು೨ ನೇ ಡೊಸ್ ಲಸಿಕೆ, ಕೋವಿಡ್ ಅಲೆಯಿಂದ ಮಕ್ಕಳ ರಕ್ಷಣೆ, ಆಕ್ಷನ್ ರೆಮಿಡಿಸೀವರ್, ಆಂಬುಲೆನ್ಸ್, ಕೋವಿಡ್ ಹಾಗೂ ಫಂಗಸ್ ಔಷಧಿಗಾಗಿ ಕ್ರಿಯಾಯೋಜನೆ ಸಿದ್ಧಪಡಿಸುವ ಮೂಲಕ ಕೋವಿಡ್ ಮುಕ್ತ ಮೊದಲ ಜಿಲ್ಲೆಯನ್ನಾಗಿಸುವ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಕಾಂಗ್ರೆಸ್ನ ವಕ್ತಾರ ಮುರಳಿದರ ಹಾಲಪ್ಪ ಮಾಧ್ಯಮದೊಂದಿಗೆ ಮಾತನಾಡಿ ನಾವು ಕೇಳುವುದು ಆರೋಗ್ಯಧಿಕಾರಿಗಳನ್ನು ಇಲ್ಲಿಯವರೆಗೆ ಟ್ರೀಟ್ಮೆಂಟ್ ತೆಗೆದುಕೊಂಡವರಲ್ಲಿ ಹಳ್ಳಿಯ ಹೆಚ್ಚು ಜನ ಬಂಗಾರವನ್ನು ಒತ್ತೆ ಇಟ್ಟು, ಜಮೀನನ್ನು ಒತ್ತೆ ಇಟ್ಟಿದ್ದಾರೆ. ಆಯುಷ್ಮಾನ್ ಭಾರತ ಐದು ಲಕ್ಷ ರೂಪಾಯಿಗಳವರೆಗೆ ಸಹಾಯ ಧನ ಇದೆ. ಆ ಸಹಾಯಧನವನ್ನು ಉಪಯೋಗಿಸಿಕೊಂಡು ಎಷ್ಟು ಜನಕ್ಕೆ . ಇಲ್ಲಿಯವರೆಗೆ ಟ್ರೀಟ್ಮೆಂಟ್ ಕೊಟ್ಟಿದ್ದೀರಾ. ಬರೆ ಅನುಕೂಲಸ್ಥರು, ಶ್ರೀಮಂತರು ಯಾರ್ಯಾರಿಗೆ ಶಿಪಾರಸು ಇದೆ ಅವರಿಗೆ ಮಾತ್ರ ಖಾಸಗಿ ಆಸ್ಪತ್ರೆಗಳಲ್ಲಿ ಟ್ರೀಟ್ಮೆಂಟ್ತೆಗೆ ತೆಗೆದುಕೊಂಡಿದ್ದಾರೆ. ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಅಯೋಗ್ಯ ಕಾರ್ಡ್ ಇದ್ದರೆ ಎಲ್ಲಾ ಕಡೆ ಟ್ರೀಟ್ಮೆಂಟ್ ಉಚಿತ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡ ೫೦% ಉಚಿತ ಸಾರ್ವಜನಿಕರು ಇದನ್ನು ಬಳಕೆ ಮಾಡಿಕೊಳ್ಳಿ ಎಂದು ಹೇಳಿದರು.
ವರದಿ: ಮಧು ಮಧುಗಿರಿ
More Stories
ತುಮಕೂರಿನ ಮಹಿಳಾ ವಿದ್ಯುತ ಗುತ್ತಿಗೆದಾರರಾದ ಸುಪ್ರಿಯಾರವರಿಗೆ ಸನ್ಮಾನ
ಪುನೀತ್ ರಾಜಕುಮಾರ್ ನೂತನ ಕ್ಯಾಲೆಂಡರ್ ಹಂಚಿಕೆ
ಸೋಲಾರ್ ಪಾರ್ಕ್ ಗೆ ಭೇಟಿ ನೀಡಿದ ಸಚಿವ ವಿ. ಸುನೀಲ್ ಕುಮಾರ್