December 22, 2024

Bhavana Tv

Its Your Channel

ಧೈರ್ಯವಾಗಿ ಬಂದು ವ್ಯಾಕ್ಸಿನೇಷನ್ ತೆಗೆದುಕೊಳ್ಳಿ : ತಾಲೂಕು ದಂಡಾಧಿಕಾರಿ ವೈ. ರವಿ ಮನವಿ

ತುಮಕೂರು : ತುಮಕೂರು ಜಿಲ್ಲಾಡಳಿತ- ಮಧುಗಿರಿ ತಾಲ್ಲೂಕ್ ಆಡಳಿತ-ಆರೋಗ್ಯ ಇಲಾಖೆಯಿಂದ ವ್ಯಾಕ್ಸಿನೇಷನ್ ಅನ್ನು ಪಟ್ಟಣದ ಟಿವಿವಿ ಕಾಲೇಜ್, ಎಂಜಿಎA ಸ್ಕೂಲ್, ಗೌರಿಪಾಳ್ಯ ಹಾಗೂ ಮಹಿಳಾ ಸಂಘದ ಕಟ್ಟಡದಲ್ಲಿ ವ್ಯಾಕ್ಸಿನೇಷನ್ ಅನ್ನು ನೀಡಲಾಗುತ್ತಿದೆ ಎಂದು ತಾಲೂಕು ದಂಡಾಧಿಕಾರಿ ವೈ. ರವಿ ಹೇಳಿದರು

೧೮ ವರ್ಷ ಮೇಲ್ಪಟ್ಟ ವರೆಗೂ ವ್ಯಾಕ್ಸಿನೇಷನ್ ನೀಡಲಾಗುತ್ತಿದ್ದು ಹಾಗೂ ೪೫ ವರ್ಷ ಮೇಲ್ಪಟ್ಟು ಮೊದಲ ಲಸಿಕೆ ಪಡೆಯದೇ ಇರುವ ನಿವಾಸಿಗಳಿಗೆ /ನಾಗರಿಕರಿಗೆ/ ಲಸಿಕೆಹಾಕಲಾಗುತ್ತಿದ್ದು. ಕೋವಿಡ್- ೧೯ ರ ಮೊದಲ ಲಸಿಕೆ ಪಡೆದು ೮೪ ದಿನ ಪೂರೈಸಿರುವ ನಿವಾಸಿಗಳಿಗೆ/ ನಾಗರಿಕರಿಗೆ/ ಎರಡನೆಯ ಲಸಿಕೆ ಹಾಕಲಾಗುತ್ತಿದೆ. ಕೆಲ ಸಾರ್ವಜನಿಕರು ವ್ಯಾಕ್ಸಿನೇಷನ್ ತೆಗೆದುಕೊಳ್ಳಲು ಭಯಪಡುತ್ತಿದ್ದಾರೆ ,ಯಾರು ಸಹ ಸುಳ್ಳು ವದಂತಿಗಳಿಗೆ ಕಿವಿಗೊಡದೆ ಧೈರ್ಯವಾಗಿ ಬಂದು ವ್ಯಾಕ್ಸಿನೇಷನ್ ತೆಗೆದುಕೊಳ್ಳಿ ಮತ್ತು ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ತಿಳಿಸಿದರು.
ವರದಿ:ಮಧು ತುಮಕೂರು

error: