December 19, 2024

Bhavana Tv

Its Your Channel

೩ ದಿನದ ಹೆಣ್ಣು ಜಿಂಕೆ ಮರಿ, ನಾಯಿಯಿಂದ ರಕ್ಷಣೆ

ಮಧುಗಿರಿ: ಗ್ರಾಮದ ಹೊರವಲಯದಲ್ಲಿ ವಾಯು ವಿಹಾರ ಮಾಡುತ್ತಿದ್ದ ವೇಳೆ ನಾಯಿ ದಾಳಿಗೆ ಸಿಲುಕಿದ್ದ ಜಿಂಕೆ ಮರಿಯನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ ಘಟನೆ ಮಂಗಳವಾರ ಬೆಳಿಗ್ಗೆ ವರದಿಯಾಗಿದೆ.

ಹೋಬಳಿಯ ತೆರಿಯೂರು ಗ್ರಾಮದ ಹಿಂದೂಪುರ ರಸ್ತೆಯಲ್ಲಿ ಮಲ್ಲೇಶ್ ಎಂಬಾತ ಯುವಕ ವಾಯು ವಿಹಾರ ಮಾಡುತಿದ್ದಾಗ ೩ ದಿನದ ಹೆಣ್ಣು ಜಿಂಕೆ ಮರಿಯೊಂದು ನಾಯಿ ದಾಳಿಗೆ ಸಿಲುಕಿ ಒದ್ದಾಡುತಿದ್ದಾಗ ನಾಯಿ ದಾಳಿಯಿಂದ ರಕ್ಷಿಸಿದ್ದಾರೆ.

ಹರೀಶ್, ಶಶಿಕುಮಾರ್, ಖ್ವಾಜಾ ಸ್ನೇಹಿತರು ತಕ್ಷಣ ವಲಯ ಅರಣ್ಯ ಅಧಿಕಾರಿ ವಾಸು ದೇವಮೂರ್ತಿ ಅವರಿಗೆ ಸಂಪರ್ಕಿಸಿ ಪಶು ಇಲಾಖೆಯ ವೈದ್ಯರ ಮೂಲಕ ಚಿಕಿತ್ಸೆ ಕೊಡಿಸಿ ಜಿಂಕೆ ಮರಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ವರದಿ: ಮಧು ಮಧುಗಿರಿ

ಹೆಚ್ಚಿನ ಮಾಹಿತಿ ಹಾಗೂ ಸುದ್ದಿ ವಿವರಕ್ಕೆ ಹಾಗೂ ವಿಡಿಯೊ ನ್ಯೂಸ್ ವೀಕ್ಷಿಸಲು ಭಾವನ ಟಿವಿ ವೀಕ್ಷಿಸಿ. ಭಾವನ ಟಿವಿ ಇದು ನಿಮ್ಮ ವಾಹಿನಿ.
ಭಾವನಾ ಟಿವಿಯಲ್ಲಿ ಮತ್ತು ವೆಬ್ ಸೈಟ್‌ನಲ್ಲಿ ಜಾಹಿರಾತು ನೀಡಲು ಕರೆ ಮಾಡಿ, 9740723670, 9590906499

error: