May 7, 2024

Bhavana Tv

Its Your Channel

ಪಾಸಿಟಿವ್‌ ಕಂಡು ಬಂದ ಮನೆಗೆ ಆಕ್ಸಿಮೀಟರ್‌- ಸುನಿಲ್‌ ಕುಮಾರ್ ಘೋಷಣೆ, ಉದ್ಯಮಿ ಆನಂದ ಶೆಟ್ಟಿ ಅವರಿಂದ ೧೫೦೦ ಆಕ್ಸಿಮೀಟರ್‌ ಕೊಡುಗೆ

ಆಕ್ಸಿಜನ್‌ ಸ್ಯಾಚುರೇಷನ್‌ ೯೦ ಕ್ಕಿಂತ ಕಡಿಮೆಯಾದಲ್ಲಿ ಆಸ್ಪತ್ರೆಗೆ ದಾಖಲಾಗುವಂತೆ ಮನವಿ

ಕರ‍್ಕಳ : ಇಂಡೋನೇಷ್ಯಾದಲ್ಲಿರುವ ನಿಟ್ಟೆಯ ಉದ್ಯಮಿ ಆನಂದ ಶೆಟ್ಟಿ ಅವರು ೧೫೦೦ ಆಕ್ಸಿಮೀಟರ್‌ ಅನ್ನು ಕೊಡುಗೆಯಾಗಿ ನೀಡಿದ್ದಾರೆ. ಮಂಗಳವಾರ ಕರ‍್ಕಳ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಶಾಸಕ ವಿ. ಸುನಿಲ್‌ ಕುಮಾರ್‌ ಅವರಿಗೆ ಆನಂದ ಶೆಟ್ಟಿ ಅವರ ಪತ್ನಿ ಆಶಾ ಹಾಗೂ ಪುತ್ರ ಅನ್ವೇಷ್‌ ಅವರು ಆಕ್ಸಿಮೀಟರ್‌ ಅನ್ನು ಹಸ್ತಾಂತರಿಸಿದರು. ಈ ವೇಳೆ ಮಾತನಾಡಿದ ಶಾಸಕರು, ಆನಂದ ಶೆಟ್ಟಿ ಅವರು ಕರ‍್ಕಳ ತಾಲೂಕಿಗೆ ತಾನು ಯಾವ ರೀತಿ ಸಹಾಯ ಮಾಡಲಿ ಎಂದು ಇಂಡೋನೇಷ್ಯಾದಿಂದ ಮೆಸೇಜ್‌ ಮಾಡಿದ್ದರು. ಅವರಲ್ಲಿ ಆಕ್ಸಿಮೀಟರ್‌ ಅಗತ್ಯತೆ ಬಗ್ಗೆ ತಿಳಿಸಿದ್ದೆ. ತಕ್ಷಣವೇ ಸ್ಪಂದಿಸಿದ ಅವರು ೨೧ ಲಕ್ಷ ರೂ. ವೆಚ್ಚದಲ್ಲಿ ೧೫೦೦ ಆಕ್ಸಿಮೀಟರ್‌ ಒದಗಿಸಿರುತ್ತಾರೆ. ಕೊರೊನಾ ಸಂಕಷ್ಟ ಕಾಲದಲ್ಲಿ ಆಕ್ಸಿಮೀಟರ್ ಕರ‍್ಕಳಕ್ಕೆ ಬಹುದೊಡ್ಡ ಕೊಡುಗೆಯಾಗಿದೆ ಎಂದರು.

ಶಾಸಕರ ನಿಧಿ ಬಳಕೆ
ಕರ‍್ಕಳದಲ್ಲಿ ಬಹುತೇಕ ಮಂದಿ ಆಕ್ಸಿಜನ್‌ ಸ್ಯಾಚುರೇಷನ್‌ ತೀರಾ ಕಡಿಮೆಯಾದ ಬಳಿಕ ಆಸ್ಪತ್ರೆಯತ್ತ ಧಾವಿಸುತ್ತಾರೆ. ಕೊನೆ ಹಂತದಲ್ಲಿ ಆಸ್ಪತ್ರೆಗೆ ದಾಖಲಾದರೆ ಚಿಕಿತ್ಸೆಗೆ ಸ್ಪಂದನೆ ಕಡಿಮೆಯಿರುವುದು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಕೊರೊನಾ ಬಾಧಿತರಾಗಿ ಹೋಂ ಐಸೋಲೇಷನ್‌ ನಲ್ಲಿರುವವರಿಗೆ ಪಲ್ಸ್‌ ಆಕ್ಸಿಮೀಟರ್‌ ನೀಡಲಾಗುವುದು. ಹೆಚ್ಚಿನ ಆಕ್ಸಿಮೀಟರ್ ಖರೀದಿಗೆ ಶಾಸಕರ ನಿಧಿ ಬಳಕೆ ಮಾಡುತ್ತೇವೆ. ಆಕ್ಸಿಜನ್‌ ಸ್ಯಾಚುರೇಷನ್‌ ೯೦ ಕ್ಕಿಂತ ಕಡಿಮೆಯಾದಲ್ಲಿ ಅಂತವರು ಕೂಡಲೇ ಆಸ್ಪತ್ರೆಗೆ ದಾಖಲಾಗುವಂತೆ ಶಾಸಕ ಸುನಿಲ್‌ ಕುಮಾರ್‌ ಮನವಿ ಮಾಡಿಕೊಂಡರು.

ಅಭಿನಂದನೆ
ಆನಂದ ಶೆಟ್ಟಿ ಪತ್ನಿ ಆಶಾ ಹಾಗೂ ಪುತ್ರ ಅನ್ವೇಷ್‌ ಅವರನ್ನು ಇದೇ ಸಂರ‍್ಭದಲ್ಲಿ ಅಭಿನಂದಿಸಲಾಯಿತು. ಕರ‍್ಕಳ ತಹಶೀಲ್ದಾರ್‌ ಪುರಂದರ ಹೆಗ್ಡೆ, ಹೆಬ್ರಿ ತಹಶೀಲ್ದಾರ್‌ ಪುರಂದರ್‌, ತಾಲೂಕು ಆರೋಗ್ಯಾಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ, ಹೆಬ್ರಿ ಇಒ ಶ್ರೀನಿವಾಸ್‌ ಬಿ.ವಿ., ರಾಜಾಪುರ ಸೊಸೈಟಿ ಅಧ್ಯಕ್ಷ ರವೀಂದ್ರ ಪ್ರಭು ಕಡಾರಿ ಉಪಸ್ಥಿತರಿದ್ದರು. ಕರ‍್ಕಳ ಇಒ ಶಶಿಧರ್‌ ಜಿ.ಎಸ್. ಕರ‍್ಯಕ್ರಮ ನಿರೂಪಿಸಿದರು.

ವರದಿ ; ಅರುಣ ಕುಮಾರ ಭಟ್, ಕಾರ್ಕಳ

error: