December 22, 2024

Bhavana Tv

Its Your Channel

ಶಿರೂರು ಟೋಲ್ ಗೇಟ್ ಬಳಿ ಮತ್ತೋಂದು ಅವಾಂತರ: ಟೋಲ್ ಕಂಬಕ್ಕೆ ಕಾರು ಬಡಿದು, ಸೆಕ್ಯೂರಿಟಿ ಸಿಬ್ಬಂದಿ ಸಾವು

ಶಿರೂರು: ಶಿರೂರು ಟೋಲ್ ಗೇಟ್ ಬಳಿ ಸೋಮವಾರ ಮುಂಜಾನೆ ಮತ್ತೊಂದು ಅವಘಡ ನಡೆದಿದೆ.ನಸುಕಿನ ೨ ಗಂಟೆ ವೇಳೆ ವೇಗವಾಗಿ ಬಂದ ಕಾರು ಟೋಲ್ ಗೇಟ್ ಮುಂಬಾಗದ ಗೋಡೆಗೆ ಡಿಕ್ಕಿ ಹೊಡೆದಿದೆ.ಈ ಸಂದರ್ಭದಲ್ಲಿ ಸ್ಥಳದಲ್ಲಿ ಟೋಲ್ ಸಿಬ್ಬಂದಿ ರಾಘವೇಂದ್ರ ಮೇಸ್ತ (೪೪)ಗಂಭೀರ ಗಾಯಗೊಂಡು ಆಸ್ಪತ್ರೆಯ ಮಾರ್ಗದಲ್ಲಿ ಮೃತಪಟ್ಟಿದ್ದಾನೆ.ಕಾರಿನಲ್ಲಿರುವವರು ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಸ್ಥಳೀಯರ ಅಕ್ರೋಶ: ಘಟನೆ ಬಳಿಕ ಟೋಲ್ ಗೇಟ್ ನಿರ್ಲಕ್ಷ ಹಾಗೂ ಸ್ಥಳೀಯರಿಗೆ ಮನ್ನಣೆ ನೀಡದಿರುವ ಕುರಿತು ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ವಲ್ಪ ದಿನದ ಹಿಂದೆ ವಿವಿಧ ಸಂಘಟನೆಗಳು ಸೇರಿ ಎಚ್ಚರಿಕೆ ನೀಡಿದ್ದರು ಟೋಲ್ ಅಧಿಕಾರಿಗಳು ಸುಧಾರಿಸಿಲ್ಲ. ಮಾತ್ರವಲ್ಲದೆ ಟೋಲ್ ಮ್ಯಾನೇಜರ್ ಕರೆ ಸ್ವೀಕರಿಸಿಲ್ಲ. ರಾತ್ರಿ ಘಟನೆ ನಡೆದರು ಬೆಳಿಗ್ಗೆ ತನಕ ಸಂಬoಧಿಸಿದ ಅಧಿಕಾರಿಗಳು ಬಂದಿಲ್ಲ.ಸೂಕ್ತ ಪರಿಹಾರ ನೀಡಿ ಕ್ರಮಕೈಗೊಳ್ಳದಿದ್ದರೆ ಟೋಲ್ ಗೇಟ್ ಎದುರು ಶವ ಇಟ್ಟು ಪ್ರತಿಭಟಿಸಲಾಗುವುದು ಎಂದರು. ಬಳಿಕ ಟೋಲ್ ಅಧಿಕಾರಿಗಳು ಸ್ಥಳೀಯರ ಜೊತೆ ಮಾತುಕತೆ ನಡೆಸಿದ್ದು ಸೂಕ್ತ ಪರಿಹಾರ ದೊರೆಯುವವರಗೆ ಹಿಂದಿರುಗುವುದಿಲ್ಲ ಎಂದು ಸಾರ್ವಜನಿಕರು ಪಟ್ಟು ಹಿಡಿದಿದ್ದಾರೆ.

ಈ ಸಂದರ್ಭದಲ್ಲಿ ಕುಂದಾಪುರ ಡಿ.ವೈ.ಎಸ್.ಪಿ ಶ್ರೀಕಾಂತ, ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ,ಕೊಲ್ಲೂರು ಠಾಣಾಧಿಕಾರಿ ನಾಸೀರ್ ಹುಸೈನ್, ಬೈಂದೂರು ಠಾಣಾಧಿಕಾರಿ ಪವನ್ ನಾಯಕ್,ಗಂಗೊಳ್ಳಿ ಠಾಣಾಧಿಕಾರಿ ನಂಜಾ ನಾಯ್ಕ, ಠಾಣಾಧಿಕಾರಿ ಅನೀಲ್, ಟೋಲ್ ಮುಖ್ಯಸ್ಥರಾದ ಜಿ.ಎಮ್ ವಿವೇಕ ಗರಡಿಕರ್, ಸಿ.ಜಿ.ಎಮ್ ಮೋಹನ್ ದಾಸ್, ಸ್ಥಳೀಯರಾದ ರಾಮ ಮೇಸ್ತ, ಶ್ರೀಧರ ಮೇಸ್ತ, ಗಿರೀಶ್ ಮೇಸ್ತ,ರಘುರಾಮ ವಿ.ಮೇಸ್ತ,ಮಧುಸೂಧನ್,ಕೇಶವ ಮೇಸ್ತ,ಶಂಕರ ಮೇಸ್ತ,ರವೀಂದ್ರ ಆರ್.ಮೇಸ್ತ,ವಾಸು ಮೇಸ್ತ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು

error: