ಬೈಂದೂರು : ಡಾ. ಮಹಮ್ಮದ್ ಪೀರ್ ವರದಿ ಪ್ರಕಾರ ಪ್ರತಿ ಕೊರಗ ಕುಟುಂಬಗಳಿಗೆ ಸರಕಾರಿ ಭೂಮಿಯನ್ನು ನೀಡಬೇಕು ಎಂದು ಆಯೋಗದ ವರದಿ ಇದ್ದರೂ ಕೂಡ ನಾಡ ಗ್ರಾಮದ ಪಡುಕೋಣೆ ಕೊರಗ ಸಮುದಾಯದವರಿಗೆ ಅನ್ಯಾಯ ಮಾಡುತ್ತಿದೆ ಎಂದು ಕೊರಗ ಸಮುದಾಯದ ಮುಖಂಡರು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಆಕ್ರೋಶ ವ್ಯಕ್ತಪಡಿಸಿದರು, ಹಾಗೂ ಭೂಮಿಗೆ ಸಂಬ0ಧಿಸಿದ ವಿವಾದಗಳ, ಸಮಸ್ಯೆಗಳನ್ನು ಇತ್ಯರ್ಥ ಮಾಡಲು ಒತ್ತಾಯಿಸಿ ನಾಡ ಗ್ರಾಮ ಪಂಚಾಯತ್ ಆವರಣದ ಒಳಗಡೆ ಬುಧವಾರ ಧರಣಿ ಸತ್ಯಾಗ್ರಹ ನಡೆಸಿದ್ದರು.
ಪ್ರತಿಭಟನಾ ಸ್ಥಳಕ್ಕೆ ಬೈಂದೂರು ತಹಶೀಲ್ದಾರ್ ಶ್ರೀಕಾಂತ್ ಕೆ ಹೆಗ್ಡೆ ಆಗಮಿಸಿ ಕೊರಗ ಸಮಾಜದ ಮುಖಂಡರನ್ನು ಮನವೊಲಿಸಿದರು ಕೂಡ ಮಾತಿಗೆ ಮಣಿಯದ ಮುಖಂಡರು ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಬೇಕು ಹಾಗೂ ನಮ್ಮ ಸಮಸ್ಯೆಗಳನ್ನು ಬಗೆಹರಿಸುವವರೆಗೆ ಈ ಜಾಗವನ್ನು ಬಿಟ್ಟು ತೊಲಗುವುದಿಲ್ಲ ಎಂದು ಪಟ್ಟು ಹಿಡಿದರು.
ಜಿಲ್ಲಾಧಿಕಾರಿಗಳು ಪ್ರತಿಭಟನ ಸ್ಥಳಕ್ಕೆ ಆಗಮಿಸದೆ ಇದ್ದರೆ ನಮ್ಮ ಹೆಂಡತಿ ಮತ್ತು ಮಕ್ಕಳು ಹಾಗೂ ಕುಟುಂಬದವರ ಜೊತೆ ನಾಡ ಗ್ರಾಮ ಪಂಚಾಯತ್ ಒಳಗಡೆ ವಾಸ್ತವ ಹೂಡುತ್ತೇವೆ ಹಾಗೂ ಪ್ರತಿಭಟನೆ ನಿರಂತರ ಮುಂದುವರೆಯುತ್ತದೆ ಎಂದು ಆಕ್ರೋಶ ಹೊರ ಹಾಕಿದರು. ಸರಕಾರ ಕೊರಗ ಸಮಾಜವನ್ನು ಹೀಗೆ ಕಡೆಗಣಿಸುತ್ತಿದ್ದರೆ ಇಂದು ನಾಡ ಗ್ರಾಮ ಪಂಚಾಯಿತಿನಲ್ಲಿ ನಡೆದ ಪ್ರತಿಭಟನೆ ಮುಂದೆ ತಾಲೂಕು ಹಾಗೂ ಜಿಲ್ಲಾ ವ್ಯಾಪ್ತಿ ಪ್ರತಿಭಟನೆ ಮಾಡಿ ರಾಜ್ಯ ವ್ಯಾಪ್ತಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಬೈಂದೂರು ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಆನಂದ ಕಾಯ್ಕಿಣಿ, ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ವಿನಯ್ ಕೊರ್ಲಹಳ್ಳಿ ಹಾಗೂ ಸಿಬ್ಬಂದಿಗಳು ಮತ್ತು ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಯಲ್ಲಿದ್ದರು.
ಜಿಲ್ಲಾ ಕೊರಗ ಸಂಘಟನೆಗಳ ಮುಖಂಡರಾದ ಗಣೇಶ ಕೊರಗ, ಗೌರಿ ಕೆಂಜೂರು, ಲಕ್ಷ್ಮಣ ಕೊರಗ ಬೈಂದೂರು, ಸುನಿತಾ, ಮಮತಾ, ಮಹಾಬಲ ಕೋಟ, ಕರ್ನಾಟಕದ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಘಟನಾ ಸಮಿತಿ ಉಡುಪಿ ಜಿಲ್ಲೆ ದಿನ ಕೂಲಿ ಕಾರ್ಮಿಕರ ಸಂಘ ಹಾಗೂ ಇತರ ಸಂಘಗಳು ಉಪಸ್ಥಿತರಿದ್ದರು
ಶ್ರೀಧರ ನಾಡ, ಗಣೇಶ ಆಲೂರು ರೇವತಿ, ಕೃಷ್ಣ ಇನ್ನಾ ರವರು ಧರಣಿ ನೇತೃತ್ವ ವಹಿಸಿದ್ದಾರೆ.
ವರದಿ ; ಎಚ್. ಸುಶಾಂತ್ ಬೈಂದೂರು
More Stories
ಮಕ್ಕಳಿಗಾಗಿ ಸಿದ್ಧ ಸಮಾಧಿ ಯೋಗ ಸಂಸ್ಕಾರ ಶಿಬಿರ ಮತ್ತು ಗಾಂಧಾರಿ ವಿದ್ಯೆ.
ಸೈಬರ್ ಜಾಗ್ರತಿ ಕಾರ್ಯಾಗಾರ
ಯು. ರಾಘವೇಂದ್ರ ಹೊಳ್ಳ ಅವರಿಗೆ ಬೀಳ್ಕೋಡಿಗೆ ಸಮಾರಂಭ