December 22, 2024

Bhavana Tv

Its Your Channel

ಬೈಂದೂರು : ಮರವಂತೆ ಮೀನುಗಾರಿಕಾ ಹೊರಬಂದಿರಿನ ಉತ್ತರ ದಿಕ್ಕಿನ ಕಡಲ ಅಲೆಗೆ ರಸ್ತೆ ಜಖಂ

ಬೈಂದೂರು ; ತಾಲೂಕು ಮರವಂತೆ ಬ್ರೇಕ್ ವಾಟರ್ ಉತ್ತರ ದಿಕ್ಕಿನ 100 ಮೀಟರ್ ಅಂತರದಲ್ಲಿ ಸಮುದ್ರದ ರಕ್ಕಸ ಅಲೆಗೆ ಮೀನುಗಾರಿಕೆ ಸಂಪರ್ಕ ರಸ್ತೆ ಜಖಂಗೊ0ಡಿದ್ದು ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ.

ಅರಬಿ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಪಶ್ಚಿಮ ಕರಾವಳಿಗೆ ಬೀಪರ್ ಬಾಯ್ ಚಂಡಮಾರುತ ಅಪ್ಪಳಿಸಿದ್ದು ಚಂಡಮಾರುತ ತೀವ್ರತೆಯ ಪರಿಣಾಮದಿಂದ ಸಮುದ್ರದ ರಕ್ಕಸ ಅಲೆಗಳು ತಡೆಗೋಡೆಗೆ ಅಪ್ಪಳಿಸಿ ಸಂಪರ್ಕ ರಸ್ತೆ ಕುಸಿತಗೊಂಡಿದ್ದು ಮೀನುಗಾರರು ಭಯದ ವಾತಾವರಣದಲ್ಲಿ ಬದುಕುವ ಸ್ಥಿತಿ ಉಂಟಾಗಿದೆ.
ಕಳೆದ ವರ್ಷ ತೌಕೆ ಚಂಡಮಾರುತದಿAದ ತತ್ತರಿಸಿದ ಗ್ರಾಮದ ಜನರು ಈ ವರ್ಷ ಬಿಪರ್ ಬಾಯ್ ಚಂಡಮಾರುತದಿAದ ಮತ್ತೆ ಭಯಭೀತರಾಗಿದ್ದಾರೆ ರಕ್ಕಸ ಅಲೆಯು ತಡೆಗೋಡೆಗೆ ಅಪ್ಪಳಿಸಿ ರಸ್ತೆ ಬಿರುಕು ಬಿಟ್ಟಿದ್ದು, ಮತ್ತು ಮುಂಬರುವ ತೂಫಾನ್ ಗೆ, ಸಮುದ್ರದ ಅಲೆಯ ತೀವ್ರತೆ ಜಾಸ್ತಿಯಾಗಿರುದರಿಂದ ಮೀನುಗಾರರ ಮನೆಗೆ ತೊಂದರೆ ಆಗುವ ಸಾಧ್ಯತೆ ಇದ್ದು ಜನ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ,
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಸಂಬAಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂಜಾಗ್ರತಾ ಕ್ರಮಕ್ಕೆ ಆದೇಶಿಸಿದ್ದಾರೆ ಹಾಗೂ ಮೀನುಗಾರರು ಭಯಪಡುವ ಅವಶ್ಯಕತೆ ಇಲ್ಲ ಹಗಲು ರಾತ್ರಿ ನಿಮ್ಮ ಜೊತೆ ಸಂಪರ್ಕದಲ್ಲಿ ಇರುತ್ತೇನೆ ಎಂದು ಧೈರ್ಯ ತುಂಬಿದ್ದಾರೆ.
ವರದಿ : ಎಚ್ ಸುಶಾಂತ್ ಬೈಂದೂರು

error: