May 8, 2024

Bhavana Tv

Its Your Channel

ಸಾಧಕನಿಗೆ ಹುಟ್ಟೂರ ಸನ್ಮಾನವೇ ಬಹುದೊಡ್ಡ ಉಡುಗೊರೆ- ಮಾಜಿ ಸಚಿವ ಅಭಯಚಂದ್ರ ಜೈನ್.

ಕಾರ್ಕಳ: ಸಾಧಕನಿಗೆ ಹುಟ್ಟೂರ ಸನ್ಮಾನವೇ ಬಹುದೊಡ್ಡ ಉಡುಗೊರೆ , ಸಾಧಿಸುವ ಛಲವಿದ್ದರೆ ಉದ್ಯಮವನ್ನು ಹುಟ್ಟು ಹಾಕಬಹುದು,ಅದರಿಂದ ನೂರಾರು ಜನರಿಗೆ ಉದ್ಯೋಗ ವನ್ನು ನೀಡಬಹುದು ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದರು.
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಅಜೆಕಾರಿನ ಉದ್ಯಮಿ ಶಿವರಾಂ ಶೆಟ್ಟಿ ಯವರ ೭೫ ವರ್ಷದ ಪಂಚ ಸಪ್ತತಿ ಜನ್ಮದಿನೋತ್ಸವ
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಜೆಕಾರು ಪದ್ಮ ಗೋಪಾಲ್ ಟ್ರಸ್ಟ್ ಅಧ್ಯಕ್ಷ ಸುಧಾಕರ್ ಶೆಟ್ಟಿ ಮಾತನಾಡಿ ಸಮಾಜದ ಎತ್ತರವನ್ನು ಹುಡುಕುತ್ತೆವೆ ಆದರೂ ಅದರ ಹಿಂದಿನ ಶ್ರಮ ಅರ್ಥವಾದರೆ ಅದರ ಮೌಲ್ಯ,ಹಾಗೂ ಕಷ್ಟವು ತಿಳಿಯುವುದು ಎಂದರು

ಮಣಿಪಾಲ ಪ್ರಸನ್ನ ಗಣಪತಿ ದೇವಸ್ಥಾನದ ಧರ್ಮದರ್ಶಿ ಬೆಳ್ಳಿಪ್ಪಾಡಿ ಹರಿಪ್ರಸಾದ್ ರೈ ಮಾತನಾಡಿ ಕೋಟ್ಯಾಂತರ ರೂಪಾಯಿಯಿದ್ದರು ದೇವಸ್ಥಾನ ಕಟ್ಟಲು ಸಾಧ್ಯವಿಲ್ಲ ಅದಕ್ಕೆ ಯೋಗವಿದ್ದರೆ, ಸಾಮರ್ಥ್ಯವಿದ್ದರೆ ಮಾತ್ರ ದೇವಾಲಯದ ಕಾರ್ಯ ಮಾಡಲು ಸಾಧ್ಯ , ಛಲ ,ಶ್ರದ್ಧೆ ನಮ್ಮಲಿರಬೇಕು ಎಂದರು.

ಸಾರ್ವಜನಿಕ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಿವರಾಂ ಶೆಟ್ಟಿ ತಂದೆ ತಾಯಿ ಸೇವೆ ಮೊದಲು ಮಾಡಿ ನಂತರ ದೇವರ ಸೇವೆ ,ದೇಶ ಸೇವೆ ಮಾಡಬೇಕು , ಅಮ್ಮನ ಪ್ರೀತಿಯೇ ದೇಶ ಪ್ರೀತಿಯನ್ನು ಬೆಳೆಸುವುದು , ದೇವರ ಭಯವಿರಲಿ ಅಗಲೆ ಭಕ್ತಿ ಹುಟ್ಟಲು ಸಾಧ್ಯ ಎಂದರು ,ಶಿವರಾಂ ಶೆಟ್ಟಿ ಹಾಗೂ ಪುಷ್ಪ ಶಿವರಾಂ ಶೆಟ್ಟಿ ಯವರನ್ನು ಅಭಿನಂದಿಸಲಾಯಿತು
ದೇವಸ್ಥಾನದ ತಂತ್ರಿ ವಾದಿರಾಜ ತಂತ್ರಿ , ಉದ್ಯಮಿ ಸುಜಯ್ ಶೆಟ್ಟಿ , ವಿಜಯ್ ಶೆಟ್ಟಿ, ಶೋಭ ಶೆಟ್ಟಿ ಮುಖ್ಯ ಅರ್ಚಕ ರಂಗನಾಥ ಭಟ್ , ಉಪಸ್ಥಿತರಿದ್ದರು.
ಅಶೋಕ ಶೆಟ್ಟಿ ಪ್ರಾರ್ಥಿಸಿದರು , ಹರೀಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.ಭಾಸ್ಕರ ಶೆಟ್ಟಿ ಕುಂಠಿನಿ ಧನ್ಯವಾದವಿತ್ತರು.

ವರದಿ: ಅರುಣ ಭಟ್ ಕಾರ್ಕಳ

error: