May 6, 2024

Bhavana Tv

Its Your Channel

ಜಗತ್ಪ್ರಸಿದ್ಧ ಅತ್ತೂರು ಬಸಿಲಿಕಾ ಸಂತ ಲಾರೆನ್ಸ್ ಚರ್ಚ್ ನ ಜಾತ್ರಾ ಮಹೋತ್ಸವ

ಕಾರ್ಕಳ: ಜಗತ್ಪ್ರಸಿದ್ಧ ಅತ್ತೂರು ಬಸಿಲಿಕಾ ಸಂತ ಲಾರೆನ್ಸ್ ಚರ್ಚ್ ನ ಜಾತ್ರಾ ಮಹೋತ್ಸವವು ಫೆಬ್ರವರಿ 20 ರಂದು ಆರಂಭಗೊAಡಿದ್ದು ಫೆ.24ರ ತನಕ ನಡೆಯಲಿದೆ. ಅತ್ಯಂತ ಸರಳ ರೀತಿಯಲ್ಲಿ ಹಬ್ಬದ ಆಚರಣೆ ನಡೆಯುತ್ತಿದ್ದು ಆದಿತ್ಯವಾರ ದಂದು(20-2-2022) ಬಸಿಲಿಕಾದ ಬಾವುಟವನ್ನು ಅನಾವರಣ ಮಾಡಿ ಹಬ್ಬಕ್ಕೆ ಚಾಲನೆಯನ್ನು ನೀಡಿ ಪವಾಡ ಮೂರ್ತಿಯನ್ನು ವಿಶೇಷವಾಗಿ ಬಹಿರಂಗ ಜಾಗದಲ್ಲಿ ಇಟ್ಟಿದ್ದು ಹಾಗೂ ಸಂತ ಲಾರೆನ್ಸ್ರ ಅವಶೇಷದ ಭಾಗವನ್ನು ಕೂಡ ಪವಾಡ ಜಾಗದಲ್ಲಿ ಇಟ್ಟಿರುತ್ತೇವೆ. ಆದಿತ್ಯವಾರ ದಿಂದ ಆರಂಭಗೊoಡ ಹಬ್ಬವು ಅತ್ಯುನ್ನತ ರೀತಿಯಲ್ಲಿ ಹಾಗೂ ಭಕ್ತಿ ಪೂರ್ವಕವಾಗಿ ನಡೆಯುತ್ತಿದ್ದು ಆದಿತ್ಯವಾರದಂದು 6 ಬಲಿ ಪೂಜೆಗೆ ಸಾಕಷ್ಟು ಜನರು ಆಗಮಿಸಿದರು. ಪಾಪ ನಿವೇದನೆ ಸಂಸ್ಕಾರ ನಡೆಯುತ್ತಿದ್ದು, ಮಂಗಳೂರು, ಉಡುಪಿ, ಶಿವಮೊಗ್ಗ ,ಚಿಕ್ಕಮಂಗಳೂರು, ಧರ್ಮಪ್ರಾಂತ್ಯದ ಧರ್ಮಗುರುಗಳು ಬಲಿ ಪೂಜೆಯನ್ನು ನೆರವೇರಿಸಿದರು.ಮಂಗಳೂರು ಧರ್ಮಾಧ್ಯಕ್ಷರಾದ ಅತಿವಂದನೀಯ ಪೀಟರ್ ಪೌಲ್ ಸಲ್ಡ್ಡಾನ್ನ ಬಲಿ ಪೂಜೆ ನೆರವೇರಿಸಿದರು.
ಸೋಮವಾರದಂದು(21-02-2022 ) ಉಡುಪಿ ಧರ್ಮಾಧ್ಯಕ್ಷರಾದ ಜೆರಾಲ್ಡ್ ಐಸಾಕ್‌ರವರು ಬಲಿ ಪೂಜೆಯನ್ನು ನೆರವೇರಿಸಿದರು. ಮಂಗಳವಾರ, ಬುಧವಾರ, ಗುರುವಾರ ಹಬ್ಬದ ಬಲಿಪೂಜೆ ನಡೆಯಲಿದೆ. ಬಲಿ ಪೂಜೆಯಲ್ಲಿ ವಿಶೇಷವಾಗಿ ರೋಗಿಗಳಿಗೆ ಅಸ್ವಸ್ಥರಿಗೆ, ಹಾಗೂ ಕೊರೋನ ರೋಗಕ್ಕೆ ತುತ್ತಾದವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು. ನಮ್ಮ ನಾಡಿಗೂ ಕ್ಷೇತ್ರಕ್ಕೂ ಶಾಂತಿ ಸಮಾಧಾನ ಸಿಗಲಿ ಎಂದು ಸಂತ ಲಾರೆನ್ಸ್ ರಲ್ಲಿ ಪ್ರಾರ್ಥಿಸುತ್ತೇವೆ ಎಂದು ಅತ್ತೂರು ಚರ್ಚ್ ನ ಧರ್ಮ ಗುರುಗಳಾದ ವಂದನೀಯ ರೆವರೆಂಡ್ ಫಾದರ್ ಆಲ್ಬರ್ಟ್ ಡಿ.ಸೋಜಾ ರವರು ಮಾದ್ಯಮಕ್ಕೆ ವಿವರ ನೀಡಿದರು.

ತಾತ್ಕಾಲಿಕವಾಗಿ ಅಂಗಡಿ ,ಮುಂಗಟ್ಟು , ವ್ಯಾಪಾರಸ್ಥರಿಗೆ ಏಲಂನಲ್ಲಿ ಅಂಗಡಿಗಳಿಗೆ ವ್ಯಾಪಾರಕ್ಕೆ ಸ್ಥಳ ನೀಡಿದ್ದು ಎಲ್ಲಾ ತರಹದ ವ್ಯವಸ್ಥೆಗಳಾದ ನೀರು,ಸ್ನಾನಗೃಹ, ಶೌಚಾಲಯದ ವ್ಯವಸ್ಥೆ ಹಾಗೂ ಕಸವಿಲೇವಾರಿ ಅಚ್ಚುಕಟ್ಟಾಗಿ ನಡೆಯುತ್ತಿದ್ದು ಪಂಚಾಯತ್ ಅದ್ಯಕ್ಷರು ಉಪಾಧ್ಯಕ್ಷರು, ಹಾಗೂ ಪಂಚಾಯತ್ ಸದಸ್ಯರು ಹಾಗೂ ಎಲ್ಲಾ ಪಂಚಾಯತ್ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮಾಧ್ಯಮಕ್ಕೆ ನಿಟ್ಟೆ ಪಂಚಾಯತ್ ಪಿ.ಡಿ.ಒ ಶೇಖರ್ ಪೂಜಾರಿ ವಿವರ ನೀಡಿದರು..

ವರದಿ: ಅರುಣ ಭಟ್ ಕಾರ್ಕಳ

error: