May 3, 2024

Bhavana Tv

Its Your Channel

ಜೋಡುರಸ್ತೆಯಲ್ಲಿ ಶುಭಾರಂಭಗೊಳ್ಳಲಿರುವ ಪೂರ್ಣಿಮಾ ಲೈಫ್‌ಸ್ಟೈಲ್‌ನಲ್ಲಿ ಲಕ್ಷ್ಮಿಪೂಜೆ

ಕಾರ್ಕಳ, ಫೆ.23: ಕಾರ್ಕಳದ ಜೋಡುರಸ್ತೆಯ ಪ್ರೈಮ್ ಮಾಲ್‌ನ 2ನೇ ಮಹಡಿಯಲ್ಲಿ ಅತೀ ಶೀಘ್ರದಲ್ಲಿ ಆರಂಭಗೊಳ್ಳಲಿರುವ ಪೂರ್ಣಿಮಾ ಲೈಫ್‌ಸ್ಟೈಲ್ ನಲ್ಲಿ ಸೋಮವಾರ ಲಕ್ಷ್ಮಿ ಪೂಜೆ ನಡೆಯಿತು.
ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ಕುಮಾರ್ ಹಾಗೂ ಸುವೃತ್ ಕುಮಾರ್ ಮಹಲ್‌ಗೆ ಭೇಟಿ ನೀಡಿ ಲಕ್ಷ್ಮಿ ಪೂಜೆಯಲ್ಲಿ ಪಾಲ್ಗೊಂಡರು.

ವಿದ್ಯುಕ್ತವಾಗಿ ಮಾ.10ರಂದು ಪ್ರೈಮ್ ಮಾಲ್‌ನಲ್ಲಿ ಪೂರ್ಣಿಮ ಲೈಫ್ ಸ್ಟೈಲ್ ಶುಭಾರಂಭಗೊಳ್ಳಲಿದೆ. ಅಂದು ಸಚಿವ ವಿ.ಸುನಿಲ್‌ಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳದ ಹರ್ಷೇಂದ್ರ ಹೆಗ್ಗಡೆ, ತುಳು ಚಿತ್ರನಟ ಅರವಿಂದ ಬೋಳಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.

ನೂತನ ಮಳಿಗೆಯಲ್ಲಿ ಅವಿಭಜಿತ ದ.ಕ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಮೆನ್ಸ್ ವಿಮೆನ್ಸ್ ಎಥಿಕ್‌ವೇರ್‌ನೊಂದಿಗೆ ಪುಡ್ ಕೋರ್ಟ್, ಚೈನಿಸ್, ನಾರ್ತ್ ಇಂಡಿಯನ್ ಪ್ಯೂರ್ ವೆಜಿಟೇರಿಯನ್ ಪುಡ್‌ಕೋರ್ಟ್, ಬುರ್ಕಾ ಶಾಪ್, ಕಾಸ್ಮೇಟಿಕ್ ವಿಭಾಗ ಸೇರಿದಂತೆ ಇನ್ನಿತರ ಮಳಿಗೆಗಳು 8 ಸಾವಿರ ಚದರಡಿಯಲ್ಲಿ ಒಂದೇ ಸೂರಿನಡಿಯಲ್ಲಿ ಆರಂಭಗೊಳ್ಳಲಿದೆ ಎಂದು ಸಂಸ್ಥೆಯ ಪಾಲುದಾರರಾದ ರವಿಪ್ರಕಾಶ್ ಪ್ರಭು, ಕಿರಣ ರವಿಪ್ರಕಾಶ್, ಪ್ರಜ್ವಲ್ ಪ್ರಭು ತಿಳಿಸಿದರು.

error: