ಕಾರ್ಕಳ: ಬೀದಿ ಬದಿಗಳಲ್ಲಿ ಮೀನು ವ್ಯಾಪಾರವನ್ನು ನಿಷೇಧಿಸಬೇಕು, ಇಲ್ಲವೆ ಆಯ್ದ ಜಾಗದಲ್ಲಿ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಲು ಅವಕಾಶ ಇದೆ ಎಂದು ಪುರಸಭೆ ಅಧ್ಯಕ್ಷೆ ಸುಮಕೇಶವ್ ಹೇಳಿದ್ದಾರೆ.
ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿದರು. ಅಶ್ಪಕ್ ಅಹ್ಮದ್ ಮಾತನಾಡಿ, ಮೀನು ಮಾರಾಟ ವ್ಯವಸ್ಥೆ ಕಲ್ಪಿಸಲು ಅವಕಾಶವಿದೆ ಎಂದರು. ಪ್ರತಿಮಾ ರಾಣೆ ಮಾತನಾಡಿ ಈ ಬಗ್ಗೆ ಅನೇಕ ಬಾರಿ ಚರ್ಚೆ ನಡೆದಿದೆ. ಹೊಟ್ಟೆಪಾಡಿಗಾಗಿ ಬೀದಿ ಬದಿಯಲ್ಲಿ ವ್ಯಾಪಾರ ನಿರ್ವಹಿಸುತ್ತಿದ್ದಾರೆ. ಪುರಸಭೆಯ ಈ ನಿರ್ಣಯದಿಂದ ತೊಂದರೆಯಾಗಲಿದೆ ಎಂದರು. ಪ್ರಸನ್ನ ದಾನಶಾಲೆ ಮಾತನಾಡಿ ಬೀದಿ ವ್ಯಾಪಾರಿಗಳನ್ನು ಒಂದೆಡೆ ಸೇರಿಸಿ ವ್ಯಾಪಾರ ನಿರ್ವಹಿಸುವಂತೆ ಕ್ರಮ ಕೈಗೊಂಡಲ್ಲಿ ಅವರವರ ವ್ಯಾಪಾರದಲ್ಲಿ ತೊಂದರೆಯಾಗಲಿದೆ ಎಂದರು. ಯೋಗೀಶ್ ದೇವಾಡಿಗ ಮಾತನಾಡಿ ಬೀದಿ ಬದಿಗಳಲ್ಲಿ ಕೊಳಕು ಮಾಡಿ ವ್ಯಾಪಾರ ನಿರ್ವಹಿಸುವವರ ವಿರುದ್ದ ಕ್ರಮ ಕೈಗೊಳ್ಳಬೇಕು. ಅದು ಅಧಿಕಾರಿಗಳ ಜವಾಬ್ದಾರಿ ಎಂದರು. ರೆಹಮತ್ ಎನ್.ಶೇಖ್ ಪ್ರದೀಪ್ ಮಾರಿಗುಡಿ ಶುಭದ ರಾವ್ ಮುಂತಾದವರು ಬೀದಿ ವ್ಯಾಪಾರಿಗಳಿಗೆ ತೊಂದರೆಯಾಗದAತೆ ಕ್ರಮ ವಹಿಸಿ ಎಂದರು. ಎಲ್ಲಾ ಬೀದಿ ಬದಿ ಮೀನು ವ್ಯಾಪಾರಿಗಳನ್ನು ಕರೆಸಿ ಪ್ರತ್ಯೇಕ ಸಭೆ ನಡೆಸೋಣ ಎಂದು ತೀರ್ಮಾನಿಸಲಾಯಿತು.
ಅಶ್ಪಕ್ ಅಹ್ಮದ್ ಬಂಡೀಮಠ ಬಸ್ ನಿಲ್ದಾಣದಲ್ಲಿ ಶಲ್ಟರ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ಒತ್ತಾಯಿಸಿದರು.
ಅಂಬೇಡ್ಕರ್ ನಿಗಮದಲ್ಲಿ ಮಂಜೂರಾದ ಮನೆಗಳ ಫಲಾನುಭವಿಗಳಿಗೆ ಆದೇಶ ವಿತರಣೆ ವೇಳೆ ಜನಪ್ರತಿನಿಧಿಗಳ ಗಮನಕ್ಕೆ ತರಲಿಲ್ಲ ಎಂದು ಪ್ರತಿಮಾ ಆರೋಪಿಸಿದರು. ಶುಭದ ರಾವ್ ಮಾತನಾಡಿ, ಆಯಾಯ ವಾರ್ಡ್ಗಳ ಫಲಾನುಭವಿಗಳಿಗೆ ಸವಲತ್ತು ವಿತರಣೆಯ ವೇಳೆ ಸಂಬAಧಿಸಿದ ಜನಪ್ರತಿನಿಧಿಗಳ ಗಮನಕ್ಕೆ ತರಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಮೀನಾಕ್ಷಿ ಗಂಗಾಧರ್ ಕೂಡಾ ಇದೇ ವಿಚಾರವಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಳಿನಿ ಆಚಾರ್ಯ ಮಾತನಾಡಿ ನನ್ನ ವಾರ್ಡ್ನಲ್ಲಿ ಹೂಳೆತ್ತುವ ಕಾಮಗಾರಿ ನಡೆದಿಲ್ಲ ಎಂದರು. ಪ್ರಭಾ ಮಾತನಾಡಿ ನನ್ನ ವಾರ್ಡ್ನ ರಸ್ತೆಗಳು ಕಿತ್ತು ಹೋಗಿದ್ದು, ಕನಿಷ್ಟ ಪ್ಯಾಚ್ ವರ್ಕ್ ಆದರೂ ನಡೆಸಿ ಎಂದರು.
ಒಳಚರಂಡಿ ಕಾಮಗಾರಿ 13 ಕೋಟಿ ರೂ. ವೆಚ್ಚದಲ್ಲಿ ನಡೆದಿದ್ದು, ಈ ಬಗ್ಗೆ ಸಾರ್ವಜನಿಕ ಅಡಿಟ್ ವರದಿ ನೀಡಬೇಕು ಎಂದು ಅಶ್ಪಕ್ ಅಹ್ಮದ್ ಆರೋಪಿಸಿದರು. ಸರಕಾರದ ಸವಲತ್ತು ವಿತರಣೆಯ ಸಂದರ್ಭ ಎಸ್‌ಸಿ/ಎಸ್ಟಿ ಫಲಾನುಭವಿಗಳು ದಾಖಲೆಗನ್ನು ಸಲ್ಲಿಸುವ ವೇಳೆ ತೊಂದರೆಯಾಗುತ್ತಿದ್ದು, ಕಾನೂನನ್ನು ಸಡಿಲಿಕೆ ಮಾಡಿ ಸಹಕರಿಸುವಂತೆ ಶುಭದ ರಾವ್ ಆಗ್ರಹಿಸಿದರು.
ಮದುವೆ ಸಭಾಭವನಗಳು ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿದೆ. ಅವರಿಗೆ ಯಾವ ಕಾನೂನು ಅನ್ವಯವಾಗುವುದಿಲ್ಲ ಎಂದು ಸೋಮನಾಥ ನಾಯ್ಕ್ ಆಗ್ರಹಿಸಿದರು. ಮುಖ್ಯಾಧಿಕಾರಿ ರೂಪಾ ಶೆಟ್ಟಿ ಮಾತನಾಡಿ ಆ ನಿರ್ಣಯ ಕೈಗೊಂಡಲ್ಲಿ ಕಾನೂನಿನಲ್ಲಿ ಅವಕಾಶ ಇಲ್ಲ. ತೆರಿಗೆ ಕಟ್ಟದ ಸಭಾಭವನದ ವಿರುದ್ದ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಎಣ್ಣೆಹೊಳೆ ಏತಾ ನೀರಾವರಿ ಕಾಮಗಾರಿಯ ಪ್ರಯುಕ್ತ ನಗರದಲ್ಲಿ ಅಳವಡಿಸಿದ ಪೈಪ್‌ಲೈನ್ ಕಾಮಗಾರಿಗೆ ರಸ್ತೆಯನ್ನು ಅಗೆದು ಹಾಕಲಾಗಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅಶೋಕ್ ಸುವರ್ಣ ಒತ್ತಾಯಿಸಿದರು. ಸಾಮಾನ್ಯ ಸಭೆಗೆ ಮೈಕ್ ಕೈಗೊಡುತ್ತಿದ್ದು, ಮುಂದಿನ ಬಾರಿ ಸರಿಪಡಿಸಬೇಕು ಎಂದು ಸಂತೋಷ್ ರಾವ್ ಒತ್ತಾಯಿಸಿದರು.
ಈ ಸಂದರ್ಭದಲ್ಲಿಪುರಸಭೆ ಅಧ್ಯಕ್ಷೆ ಸುಮ ಕೇಶವ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪಲ್ಲವಿ, ಸ್ಥಾಯಿ ಸಮಿತಿ ಅಧ್ಯಕ್ಷ ಯೋಗೀಶ್ ದೇವಾಡಿಗ, ಮುಖ್ಯಾಧಿಕಾರಿ ರೂಪಾ ಶೆಟ್ಟಿ ಉಪಸ್ಥಿತರಿದ್ದರು.
ವರದಿ: ಅರುಣ ಭಟ್
More Stories
ಪಾದಚಾರಿ ಮೇಲೆ ಕ್ರೇನ್ ಹರಿದು ಸ್ಥಳದಲ್ಲೆ ಸಾವು,
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ