ಉಡುಪಿ: ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಶ್ರೀಮಂತ ಹಾಗೂ ಅರ್ಥವತ್ತುಗೊಳಿಸುವಲ್ಲಿ ಪತ್ರಕರ್ತನ ಪಾತ್ರ ಮಹತ್ತವಾದುದು. ಸಮಾಜದ ನೋವು ಮತ್ತು ಕೆಡುಕುಗಳನ್ನು ನಿವಾರಿಸುವಲ್ಲಿ ಪತ್ರಕರ್ತರ ಸೇವೆ ಶ್ಲಾಘನೀಯವಾದುದು ಎಂದು ಜಿ.ಪಂ ಸಿಇಓ ಪ್ರಸನ್ನ ಎಚ್ ಹೇಳಿದರು
ಅವರು ಶುಕ್ರವಾರ ಉಡುಪಿ ನಗರದ ಮಣಿಪಾಲ್ ಇನ್ ಹೋಟೆಲ್ ನಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಸಂಘ ಹಾಗು ಕೆನಾನ್ ಸಂಸ್ಥೆಯ ಸಹಭಾಗಿತ್ವದಲ್ಲಿ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು
ಪತ್ರಿಕೆಗಳಿಂದ ಜನಪ್ರತಿನಿಧಿ ಮತ್ತು ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ತಮ್ಮ ಅಭಿಪ್ರಾಯಗಳನ್ನು ಹೇರುವ ಮತ್ತು ಆದೇಶಿಸುವ ಪ್ರಯತ್ನ ಇಂದು ನಡೆಯುತ್ತಿರುವುದು, ಎಷ್ಟು ಸರಿ ಎಂಬುದನ್ನು ಪತ್ರಕರ್ತರು ಸ್ವ ವಿಮರ್ಶೆ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು
ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮಾಹಿತಿ ಮತ್ತು ಸುದ್ದಿ ಲಭ್ಯವಿದ್ದರೂ, ಪತ್ರಿಕೆಗಳ ಮಹತ್ವ ಕಡಿಮೆಯಾಗಿಲ್ಲ. ಉಡುಪಿ ಜಿ.ಪಂ ವತಿಯಿಂದ ಗ್ರಾ.ಪಂ ಗಳಲ್ಲಿ ನಡೆಯುತ್ತಿರುವ ಗ್ರಂಥಾಲಯಗಳಲ್ಲಿ ಜನರು ಪುಸ್ತಕಗಳಿಗಿಂತ ಪತ್ರಿಕೆಗಳನ್ನು ಓದುವುದಕ್ಕೆ ಹೆಚ್ಚು ಆಸಕ್ತಿ ವಹಿಸುತ್ತಿರುವುದು ಪತ್ರಿಕೆಯ ಮಹತ್ವವನ್ನು ತಿಳಿಸುತ್ತದೆ ಎಂದು ನುಡಿದರು
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಂಗಳೂರು ಮಹಾವೀರ್ ಏಜನ್ಸಿಯ ಸುಧಾಕರ್ ಶೆಣೈ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿಯ ಸದಸ್ಯ ಕಿರಣ್ ಮಂಜನಬೈಲು, ದೆಹಲಿಯ ಇಂಡಿಯನ್ ಫೆಡರೇಶನ್ ಆಫ್ ವರ್ಕಿಂಗ್ ಜರ್ನಲಿಸ್ಟ್ ನ ಸದಸ್ಯ ಅರುಣ್ ಕುಮಾರ್ ಶಿರೂರು, ವಾರ್ತಾಧಿಕಾರಿ ಮಂಜುನಾಥ್ ಉಪಸ್ಥಿತರಿದ್ದರು.
ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ವಂದಿಸಿದರು. ಪಬ್ಲಿಕ್ ಟಿವಿಯ ಉಡುಪಿ ಜಿಲ್ಲಾ ಕ್ಯಾಮರಾಮೆನ್ ಚೇತನ್ ಮಟಪಾಡಿ ನಿರೂಪಿಸಿದರು
ಹಿರಿಯ ಪತ್ರಕರ್ತ ಎಸ್.ಜನಾರ್ದನ ಮರವಂತೆ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ವಿಜಯ್ ಆಚಾರ್ಯ ಸನ್ಮಾನಿತರ ಪತ್ರ ಓದಿದರು. ನಂತರ ರಾಜ್ಯ ಪತ್ರಕರ್ತರ ಸಂಘದ ಪ್ರಶಸ್ತಿ ಪಡೆದ ಹಿರಿಯ ಪತ್ರಿಕಾ ಛಾಯಗ್ರಾಹಕ ಆಸ್ಟ್ರೋ ಮೋಹನ್, ಪತ್ರಕರ್ತ ಬಾಲಕೃಷ್ಣ ಭೀಮಗುಳಿ ಅವರನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಛಾಯಾಚಿತ್ರ ಪತ್ರಿಕೋದ್ಯಮದಲ್ಲಿ ಆಧುನಿಕ ಕೆಮರಾಗಳ ಪಾತ್ರದ ಕುರಿತಾಗಿ ಕಾರ್ಯಗಾರ ನಡೆಸಿದರು
ಪಿಯುಸಿ ಪರೀಕ್ಷೆಯಲ್ಲಿ ಶೇ.80 ಕ್ಕಿಂತ ಅಧಿಕ ಅಂಕ ಪಡೆದ ವಿಜಯ ಕರ್ನಾಟಕ ಪತ್ರಿಕೆಯ ವರದಿಗಾರ ಹರೀಶ್ ಕಟಪಾಡಿ ಅವರ ಪುತ್ರ ಧನುಷ್, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.80 ಕ್ಕಿಂತ ಅಧಿಕ ಅಂಕ ಗಳಿಸಿದ ಕಾರ್ಕಳ ವರದಿಗಾರ ಅರುಣ್ ಭಟ್ ಅವರ ಪುತ್ರಿ ಶಿವಾನಿ ಎ ಕೈಲಾಜೆ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ವರದಿ;ಅರುಣ ಭಟ್ ಕಾರ್ಕಳ
More Stories
ಪಾದಚಾರಿ ಮೇಲೆ ಕ್ರೇನ್ ಹರಿದು ಸ್ಥಳದಲ್ಲೆ ಸಾವು,
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ