May 4, 2024

Bhavana Tv

Its Your Channel

ರಾಜ್ಯ ಸರಕಾರ ಮತಾಂತರ ನಿಷೇದ ಕಾಯ್ದೆ ಜಾರಿಗೆ ತಂದಿರುವುದು ಸಮಸ್ತ ಹಿಂದೂ ಸಮಾಜಕ್ಕೆ ಹಾಗೂ ಹಿಂದೂ ಸಂಘಟನೆಗಳಿಗೆ ಸಂದ ಜಯವಾಗಿದೆ: ರತ್ನಾಕರ ಅಮೀನ್

ಕಾರ್ಕಳ:ಕೋಟ್ಯಾಂತರ ಹಿಂದೂಗಳ ನಿರಂತರ ಹೋರಾಟ ಜೈಲುವಾಸ ಫಲವಾಗಿ ಮತಾಂತರ ನಿಷೇದ ಕಾನೂನು ಜಾರಿಯಾಗಿರುವುದು ಸ್ವಾಗತರ್ಹ ಎಂದೂ ಹಿಂದೂ ಜಾಗರಣ ವೇದಿಕೆ ಮುಖಂಡ ರತ್ನಾಕರ ಅಮೀನ್ ಹೇಳಿದ್ದಾರೆ. ದೇಶದಾದ್ಯಂತ ಅಮಾಯಕ ಹಿಂದುಳಿದ ಹಾಗೂ ದಲಿತ ಸಮುದಾಯದ ಹಿಂದೂ ಬಡ ಕುಟುಂಬಗಳನ್ನು ಗುರಿಯಾಗಿಸಿಕೊಂಡು ಬಲವಂತದ ಹಾಗೂ ಹಣದ ಆಸೆ ಆಮಿಷದ ಮೂಲಕ ಮತಾಂತರ ಮಾಡುವ ವ್ಯವಸ್ಥಿತ ಜಾಲ ಕಾರ್ಯಾಚರಿಸುತ್ತಿದೆ ಇದರ ವಿರುದ್ಧ ಹಿಂದೂ ಪರ ಸಂಘಟನೆಗಳು ಸಾಕಷ್ಟು ಉಗ್ರ ಹೋರಾಟಗಳನ್ನು ನಡೆಸುತ್ತಾ ಬಂದಿವೆ.ಪ್ರಾರ್ಥನಾ ಕೇಂದ್ರಗಳಲ್ಲಿ ಪ್ರಾರ್ಥನೆಯ ನೆಪದಲ್ಲಿ ದುರ್ಬಲ ಮನಸಿನ ವ್ಯಕ್ತಿಗಳನ್ನು ಮೋಸದಿಂದ ಮತಾಂತರ ಮಾಡುವ ಮೂಲಕ ಹಿಂದೂ ಧರ್ಮದ ಮೇಲೆ ನಿರಂತರ ದಬ್ಬಾಳಿಕೆ ನಡೆಲಾಗುತಿದ್ದು, ಕಳೆದ ೨೦೦೨ರಲ್ಲಿ ಮೂಡಬಿದಿರೆಯಲ್ಲಿ ಅಲಂಗಾರಿನ ಪ್ರಾರ್ಥನಾ ಕೇಂದ್ರಗಳಲ್ಲಿ ಹಿಂದೂಗಳನ್ನು ಮತಾಂAತರ ಮಾಡಲಾಗುತ್ತಿದೆ ಎನ್ನುವ ವಿಷಯ ತಿಳಿದು ಹಿಂದೂ ಸಂಘಟನೆಯ ಕಾರ್ಯಕರ್ತರು ದಾಳಿ ನಡೆಸಿ ಮತಾಂತರದ ವಿರುದ್ಧ ಉಗ್ರ ಪತಿಭಟನೆ ನಡೆಸಿದ್ದರು. ಈ ಪ್ರಕರಣವು ಜಗತಿನಾದ್ಯಂತ ಭಾರೀ ಸಂಚಲನಕ್ಕೆ ಕಾರಣವಾಗಿತ್ತು ಮತಾಂತರದ ವಿರುದ್ಧದ ಅಂದಿನ ಹೋರಾಟದ ಮೂಲಕ ಮತಾಂತರ ನಿಷೇದ ಕಾಯಿದೆ ಜಾರಿಗೆ ತರಬೇಕೆನ್ನುವ ಕೂಗು ಬಲವಾಗಿತ್ತು ಪ್ರಸ್ತುತ ಈ ಪಿಡುಗು ದೇಶದಾದ್ಯಂತ ವ್ಯಾಪಿಸಿದ್ದು ಪ್ರಾರ್ಥನೆಯ ನೆಪದಲ್ಲಿ ಹಳ್ಳಿ ಹಳ್ಳಿಗಳಲ್ಲಿ ಮತಾಂತರ ಮಾಡುವ ಜಾಲ ಸದ್ದಿಲ್ಲದೇ ನಡೆಯುತ್ತಿದೆ. ಇದರಿಂದ ಸಾವಿರಾರು ಬಡ ಕುಟುಂಬಗಳು ನೆಮ್ಮದಿಯನ್ನೇ ಕಳೆದುಕೊಳ್ಳುವಂತಾಗಿದೆ. ಈ ಎಲ್ಲಾ ವಿಚಾರಗಳನ್ನು ಹಾಗೂ ಹಿಂದೂ ಕಾರ್ಯಕರ್ತರ ಹೋರಾಟದ ತೀವ್ರತೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಬಿಜೆಪಿ ಸರಕಾರ ವಿರೋದ ಪಕ್ಷಗಳ ಪ್ರಬಲ ವಿರೋಧದ ನಡುವೆಯೂ ಮತಾಂತರ ಪಿಡುಗಿಗೆ ಮಟ್ಟ ಹಾಕುವ ನಿಟ್ಟಿನಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿರುವುದು ಸಮಸ್ತ ಹಿಂದೂ ಧರ್ಮಕ್ಕೆ ಮತ್ತು ಹಿಂದೂ ಸಂಘಟನೆಗಳಿಗೆ ಸಂದ ಜಯವಾಗಿದೆ ಎಂದು ರತ್ನಾಕರ ಅಮೀನ್ ಸರಕಾರದ ನಿಲುವನ್ನು ಶ್ಲಾಘಿಸಿದ್ದಾರೆ.

ಸಮಾಜದ ಶಾಂತಿ ಕದಡುವ ಮತಾಂತರವನ್ನು ಕಾಂಗ್ರೆಸ್ ಬೆಂಬಲಿಸುವುದು ಖಂಡನೀಯ

ಸಮಾಜದ ಶಾಂತಿ ಕದಡುವ ಮತಾಂತರ ಪಿಡುಗನ್ನು ವಿರೋದಿಸಬೇಕಿದ್ದ ವಿಪಕ್ಷಗಳು ಸದನದಲ್ಲಿ ಮತಾಂತರ ನಿಷೇದ ಕಾಯಿದೆಯನ್ನು ಪ್ರಬಲವಾಗಿ ವಿರೋಧಿಸುವ ಮೂಲಕ ಮತಾಂತರ ಮಾಡುವವರಿಗೆ ಪರೋಕ್ಷ ಬೆಂಬಲ ನೀಡುತ್ತಿರುವುದು ದುರದೃಷ್ಟಕರ ಎಂದು ರತ್ನಾಕರ ಅಮೀನ್ ಅರೋಪಿಸಿದ್ದಾರೆ

ವರದಿ:ಅರುಣ ಭಟ್ ಕಾರ್ಕಳ

error: