April 29, 2024

Bhavana Tv

Its Your Channel

ಜಮಿಯೂತುಲ್ ಫಲಾಹ್ ಕಾರ್ಕಳ ಘಟಕದ ವಾರ್ಷಿಕ ಮಹಾಸಭೆ

ಕಾರ್ಕಳ:– ಶಿಕ್ಷಣಕ್ಕಾಗಿ ಒತ್ತು ಕೊಡುವ ಜಮಿಯೂತುಲ್ ಫಲಾಹ್ ಕಾರ್ಕಳ ಘಟಕದ ವಾರ್ಷಿಕ ಮಹಾಸಭೆಯು ಜಮಿಯೂತುಲ್ ಫಲಾಹ್ ಘಟಕದ ಅಧ್ಯಕ್ಷರಾದ ಮೊಹಮ್ಮದ್ ಯಾಕೂಬ್ ರವರ ಅಧ್ಯಕ್ಷತೆಯಲ್ಲಿ ಜರಗಿತು.

ಈ ಸಂದರ್ಭದಲ್ಲಿ ಕೇಂದ್ರ ಕಚೇರಿಯಿಂದ ಉಭಯ ಜಿಲ್ಲೆಯ ಅಧ್ಯಕ್ಷರಾದ ಹಾಜಿ ಸಬಿ ಅಹ್ಮದ್ ಕಾಜಿ. ಮತ್ತು ಪ್ರಬಂಧಕರಾದ ಆದಮ್ ಬ್ಯಾರಿ, ಜಮಾಲ್ ಸಾಹೇಬ್ ಉಪಸ್ಥಿತರಿದ್ದು.

ವೀಕ್ಷಕರಾಗಿ ಸಾಬೀರಲಿ, ಮತ್ತು ಅಬ್ದುಲ್ ಕಪೂರ್ ಸಾಬ್ ಆಗಮಿಸಿದ್ದರು. ಕಳೆದ ವರ್ಷದ ವರದಿಯನ್ನು ಘಟಕದ ಕಾರ್ಯದರ್ಶಿ, ಸೈಯದ್ ಹಸನ್ ಲೆಕ್ಕ ಪತ್ರವನ್ನು ಸಭೆಯಲ್ಲಿ ಮಂಡಿಸಿದರು. ಕಳೆದ 17 ವರ್ಷಗಳಿಂದ ಮಂಗಳೂರು ಕೇಂದ್ರ ಕಚೇರಿಯಲ್ಲಿ ಪ್ರಬಂಧಕರಾಗಿ ದುಡಿದು ಸೇವೆ ಸಲ್ಲಿಸಿ ನಿವರತ್ತರಾದ ಆದಂ ಬ್ಯಾರಿಯವರಿಗೆ ಘಟಕದ ವತಿಯಿಂದ ಸನ್ಮಾನಿಸಲಾಯಿತು ಸನ್ಮಾನ ಸ್ವೀಕರಿಸಿದ ಮಾತನಾಡಿದ ಆದಂ ಬ್ಯಾರಿಯವರು, ಇನ್ನು ಮುಂದೆ ನಾನು ಕೇಂದ್ರ ಕಚೇರಿಯಲ್ಲಿ ಉಚಿತವಾಗಿ ಸೇವೆ ಸಲ್ಲಿಸುತ್ತೇನೆ ಎಂದು ಹೇಳಿದರು ನಂತರ ಮಾತನಾಡಿದ ಅಧ್ಯಕ್ಷರಾದ ಸಫಿ ಅಹ್ಮದ್ ಖಾಝಿ ಈ ಘಟಕವು
ಬಡವರಿಗಾಗಿ ಹಾಗೂ ಬಡವರ ವಿದ್ಯಾಭ್ಯಾಸಕ್ಕಾಗಿ, ಹಾಗೂ ಬಡವರ ವೈದ್ಯಕೀಯ ಚಿಕಿತ್ಸೆಗಾಗಿ ಈ ಸಂಸ್ಥೆ ಹಗಲಿರು ದುಡಿಯುತ್ತದೆ. ಮತ್ತು ಕಾರ್ಕಳ ಘಟಕದ ಅಧ್ಯಕ್ಷರಾದ ಯಕು ಸಾಹೇಬ್ ಮತ್ತು ಅವರ ಕಾರ್ಯಕಾರಿ ಸಮಿತಿಯವರು ತುಂಬಾ ಜನಪರ ಕೆಲಸ ಮಾಡುತ್ತ ಬಂದಿರುತ್ತಾರೆ ನಾನು ಈ ಸಂದರ್ಭದಲ್ಲಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು. ನಂತರ ಮಾತನಾಡಿದ ಕಾರ್ಕಳ ಘಟಕದ ಅಧ್ಯಕ್ಷರಾದ ಜನಾಬ್ ಯಾಕೂಬ್ ಸಾಹೇಬ್ ಮಾತನಾಡಿ ನಾವು ಮೂತ್ರಪಿಂಡದ ಕಾಯಿಲೆ ಬಳಲುತ್ತಿರುವ ಬಡ ರೋಗಿಗಳಿಗೆ ಚಿಕಿತ್ಸೆ ನೀಡಲು ದಾನಿಗಳ ಸಹಾಯದಿಂದ ಇನ್ನೆರಡು ವಾರಗಳ ಒಳಗೆ ಡಯಾಲಿಸಿಸ್ ಮಿಷನ್ ಅನ್ನು ಕಾರ್ಕಳದ ರೋಟರಿ ಆಸ್ಪತ್ರೆಗೆ ಉಚಿತವಾಗಿ ನೀಡುತ್ತಿದ್ದೇವೆ ಎಂದು ಹೇಳಿದರು.
ತಾಲೂಕಿನಲ್ಲಿ ಏಕೈಕ 115 ವರ್ಷ ಇತಿಹಾಸವಿರುವ ಉರ್ದು ಶಾಲೆಯನ್ನು ಉಳಿಸುವ ಪ್ರಯತ್ನದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಉಚಿತ ವಾಹನದ ವ್ಯವಸ್ಥೆಯನ್ನು ಮಾಡಿದ್ದೇವೆ ಎಂದು ಹೇಳಿದರು

ಈ ಸಂದರ್ಭದಲ್ಲಿ ಘಟಕದ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಇನ್ನಿತರ ಸದಸ್ಯರು ಉಪಸಿತರಿದ್ದರು.

ವರದಿ: ಅರುಣ ಭಟ್ ಕಾರ್ಕಳ

error: