May 4, 2024

Bhavana Tv

Its Your Channel

ಪುರಸಭಾ ವ್ಯಾಪ್ತಿಯಲ್ಲಿ ಕಲುಷಿತ ಕುಡಿಯುವ ನೀರು ಸರಬರಾಜು . ಸಾಮಾನ್ಯ ಸಭೆಯಲ್ಲಿ ಪ್ರತಿಪಕ್ಷ ಸದಸ್ಯರಿಂದ ಮಹತ್ವದ ವಿಚಾರ ಬೆಳಕಿಗೆ

ಕಾರ್ಕಳ: ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಕಲುಷಿತ ಕುಡಿಯುವ ನೀರು ಸರಬರಾಜು ಆಗುತ್ತಿದ್ದು, ಇದರಿಂದ ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ ಇದರ ಬಗ್ಗೆ ತೀವ್ರ ಕಟ್ಟೆಚ್ಚರ ಅಗತ್ಯವೆಂದು ಪ್ರತಿಪಕ್ಷ ಸದಸ್ಯ ಶುಭದರಾವ್ ಮಹತ್ವದ ವಿಚಾರವೊಂದನ್ನು ಪುರಸಭಾ ಸಾಮಾನ್ಯ ಸಭೆಯಲ್ಲಿ ಮುಂದಿಟ್ಟರು.
ಪುರಸಭಾ ಅಧ್ಯಕ್ಷೆ ಸುಮಾಕೇಶವ ಅಧ್ಯಕ್ಷತೆಯಲ್ಲಿ ಜರುಗಿದ್ದ ಸಾಮಾನ್ಯ ಸಭೆಯಲ್ಲಿ ಮೇಲಿನ ವಿಚಾರದ ಕುರಿತು ಮತಾನಾಡಿದ ಶುಭದರಾವ್, ತೆಳ್ಳಾರು ಬಲ್ಮಗುಂಡಿಯ ಕಿಂಡಿಅಣೆಕಟ್ಟಿನಿAದ ರಾಮಸಮುದ್ರಕ್ಕೆ ನೀರು ಸರಬರಾಜು ಆಗುತ್ತಿದ್ದು, ರಾಮಸಮುದ್ರದ ನೀರುಶುದ್ಧೀಕರಣ ಪ್ರಕ್ರಿಯೆಯೂ ನಿಷ್ಕಿçಯೆ ಗೊಂಡು ವರ್ಷ ಕಳೆದು ಹೋಗಿದ್ದು, ಇದರತ್ತ ಗಮನ ಹರಿಸಬೇಕಾಗಿದ್ದ ಆಡಳಿತ ವರ್ಗವು ಜನಸಾಮಾನ್ಯದ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ ಇದರಿಂದ ಬೆಳ್ಳಾರಿನ ಬಲ್ಮಗುಂಡಿಯ ನೀರು ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ಸೇರುತ್ತಿದೆ. ಗ್ರಾಹಕರಿಗೆ ತಲುಪುವ ನೀರು ಕುಡಿಯಲು ಯೋಗ್ಯವಲ್ಲವೆಂಬ ವರದಿಯೂ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆಯ ವರದಿಯಿಂದ ದೃಢಪಟ್ಟಿದೆ ಎಂಬ ಅಂಶವನ್ನು ಸಭೆಯ ಮುಂದಿಟ್ಟರು.
ಮೇಲಿನ ವಿಚಾರವನವನ್ನೇ ಮುಂದಿಟ್ಟು ಮಾತನಾಡಿದ ಪ್ರತಿಪಕ್ಷ ಸದಸ್ಯ ಅಶ್ಪಕ್ ಅಹಮ್ಮದ್ ಮಾತನಾಡಿ, ರಾಮಸಮುದ್ರ ಕುಡಿಯುವ ನೀರಿನ ಘಟಕ ದುರಸ್ಥಿಗೆ ಕಳೆದ ಸಾಮಾನ್ಯ ಸಭೆ ಕಳೆದು ಐದು ದಿನಗಳ ಬಳಿಕ ಜಿಲ್ಲಾಧಿಕಾರಿಯಿಂದ ಒಪ್ಪಿಗೆ ದೊರೆತ್ತಿದೆ. ಪುರಸಭಾ ಅಧಿಕಾರಿ ವರ್ಗ ಸಾಮಾನ್ಯ ಸಭೆಯಲ್ಲಿ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಕಳೆದ ಸಾಮಾನ್ಯ ಸಭೆಯಲ್ಲಿಯೇ ಟೆಂಡರ್ ಪ್ರಕ್ರಿಯೆ ನಡೆದಿದ್ದು, ರೂ. 34 ಲಕ್ಷ ಅದಕ್ಕಾಗಿ ವಿನಿಯೋಗಿಸಲು ಸಾಮಾನ್ಯಸಭೆಯಲ್ಲಿ ಒಪ್ಪಿಗೆಗಾಗಿ ಮುಂದಿಡಲಾಗಿತ್ತು. ಮಾತ್ರವಲ್ಲದೇ ಕಂಟ್ರಾಕ್ಟರ್‌ದಾರ ಪರವಾಗಿ ಅಭಿಯಂತರರು 10 ನಿಮಷ ಕಾಲ ಬ್ಯಾಂಟಿAಗ್ ನಡೆಸಿದ್ದಾರೆ. ಈ ಎಲ್ಲಾ ಬೆಳವಣಿಗಳನ್ನು ಗಮನಿಸಿದಾಗ ಕರೆದಿರುವ ಟೆಂಡರ್‌ನಲ್ಲಿ ಏನೋ ಎಡವಟ್ಟು ನಡೆದಿದೆ. ಜಿಲ್ಲಾಧಿಖಾರಿಯ ಅನುಮತಿಯೂ ಪೂರ್ವದಲ್ಲಿ ಇಂಜಿನಿಯರ್ ಟೆಂಡರ್ ಕರೆದಿರುವ ಉದ್ದೇಶವಾದರೂ ಏನೆಂಬುವುದನ್ನು ಬಯಲಾಗಬೇಕೆಂದು ಸಭೆಯ ಮುಂದಿಟ್ಟರು.
ಇದೇ ವಿಚಾರದಲ್ಲಿ ಆಡಳಿತ ಪಕ್ಷದ ಸ್ಥಾಯೀ ಸಮಿತಿ ಅಧ್ಯಕ್ಷ ಯೋಗಿಶ್ ದೇವಾಡಿಗ ಮಾತನಾಡಿ, ಸ್ಥಾಯೀ ಸಮಿತಿಯಲ್ಲಿ ಕೈಗೊಳ್ಳುವ ಅಗತ್ಯ ಕಾಮಗಾರಿಗಳನ್ನು ಮಾಡುವುದಕ್ಕೆ ಅಭಿಯಂತರರು ನಾನಾ ಕಾರಣ ನೀಡಿ ತಡೆಯೊಡ್ಡುತ್ತಿದ್ದಾರೆ. ರೂ. 24 ಲಕ್ಷ ವೆಚ್ಚದಲ್ಲಿ ಟೆಂಡರ್ ಕರೆದಿರುವ ಒಳಮರ್ಮ ಏನೆಂಬುವುದು ಸಭೆಯಲ್ಲಿ ಅಭಿಯಂತರರೇ ಉತ್ತರಿಸಬೇಕು. ಸದಸ್ಯ ಕಾರ್ಯದರ್ಶಿಯಾಗಿರುವ ಪುರಸಭಾ ಮುಖ್ಯಾಧಿಕಾರಿ ಅವರು ಈ ಲೋಪದ ಜವಾಬ್ದಾರಿಯಾಗಿರುತ್ತಾರೆ ಎಂದು ಆರೋಪಿಸಿದರು.

ಪ್ರತಿಪಕ್ಷ ಸದಸ್ಯರು ಲೆಕ್ಕಕ್ಕಿಲ್ಲದವರಂತಾಗಿದ್ದಾರೆ!
ಪ್ರತಿಯೊoದು ವಾರ್ಡ್ ಅಭಿವೃದ್ಧಿಯಾದಾಗ ಮಾತ್ರ ಪುರಸಭಾ ಸಮಗ್ರ ರೀತಿಯಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ. ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರುಗಳು ಪುರಸಭೆಯಲ್ಲಿ ಸಮಬಲದಲ್ಲಿ ಚುನಾಯಿತರಾಗಿದ್ದಾರೆ. ಸಂಸದ,ಶಾಸಕರ ಬೆಂಬಲದೊAದಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆಯಷ್ಟೇ. ಹೀಗೆಂದ ಮಾತ್ರಕ್ಕೆ ಪ್ರತಿಪಕ್ಷ ಸದಸ್ಯರನ್ನು ಹಾಗೂ ಅವರು ಪ್ರತಿನಿಧಿಸುವ ಕ್ಷೇತ್ರವನ್ನು ಪುರಸಭಾ ಅಧ್ಯಕ್ಷರು ಕಡೆಗಣಿಸಬಾರದು.
-ಇಂತಹದೊAದು ಸನ್ನಿವೇಶ ನನ್ನ ವಾರ್ಡ್ನಲ್ಲಿ ಆಗಿದೆ ಎಂದು ವಿನ್ನಿಬೋಲ್ಡ್ ಮೆಂಡೋನ್ಸಾ ಆರೋಪಿಸಿ, ನನ್ನ ವಾರ್ಡ್ಗೆ ಇತ್ತೀಚೆಗಷ್ಟೇ ಅಧ್ಯಕ್ಷರು ಅಗಮಿಸಿದಾಗ ನನ್ನ ಗಮನಕ್ಕೂ ತಂದಿರಲಿಲ್ಲ. ಅವರೊಂದಿಗೆ ನಾಮನಿರ್ದೇಶಿತ ಸದಸ್ಯರು ಇದ್ದರು. ಆ ಸಂದರ್ಭದಲ್ಲಿ ನನ್ನ ವಿರುದ್ಧವೇ ಮಾತನಾಡಿ, ನಿಮ್ಮ ವಾರ್ಡ್ನ ಸದಸ್ಯರು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಏನ್ನನ್ನೂ ಮಾತನಾಡುವುದಿಲ್ಲ. ಏನು ಕೆಲ ಮಾಡುವುದಿಲ್ಲ. ಇಲ್ಲಿನ ಸಮಸ್ಸೆ ನಮ್ಮ ಗಮನಕ್ಕೆ ತಂದು ಹೇಳೀರುವುದು ಪ್ರಜಾಪ್ರಭುತ್ವಕ್ಕೆ ನೀಡಿದ ಅಗೌರವ ಎಂದು ಹೇಳಿದರು.
ಮಾತ್ರವಲ್ಲದೇ ಪಡು ತಿರುಪತಿ ಶ್ರೀ ಕ್ಷೇತ್ರದ ಲಕ್ಷದೀಫೋತ್ಸವದ ಸಂದರ್ಭ ನಡೆಯುವ ವನಭೋಜನ ಕಾರ್ಯಕ್ರಮವು ನನ್ನದೇ ವಾರ್ಡ್ನಲ್ಲಿ ಪ್ರತಿವರ್ಷ ನಡೆಯುತ್ತಾ ಬಂದಿದೆ. ಪ್ರಸಕ್ತ ವರ್ಷಾವಧಿಯಲ್ಲಿ ರಸ್ತೆಯ ಇಕ್ಕೆಲೆಗಳಲ್ಲಿ ಸ್ವಚ್ಚತಾ ಕಾರ್ಯಕ್ಕೆ ಕರೆತಂದಿದ್ದ ಕಾರ್ಮಿಕರನ್ನು ಪುರಸಭಾ ಆಡಳಿತ ವ್ಯವಸ್ಥೆ ಹೈಜಾಕ್ ಮಾಡಿರುವುದರಿಂದ ಅಲ್ಲಿ ಸ್ವಚ್ಚತಾ ಕಾರ್ಯ ನಡೆದಿಲ್ಲ. ಜಾತ್ಯತೀತ ವ್ಯವಸ್ಥೆಯನ್ನು ನಂಬಿ ಬಂದವರು ನಾವು. ಈ ರೀತಿ ಮಾಡಿರುವುದರಿಂದ ಒಂದು ಸಮುದಾಯದವರನ್ನು ನನ್ನ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನದ ರಾಜಕೀಯ ದಾಳ ಬಳಸಿರುವುದು ನಿಮ್ಮ ಅಧಿಕಾರಕ್ಕೆ ಶೋಭೆ ತರುವಂತದಲ್ಲ ಎಂದರು.

ಯಾರನ್ನು ಅಗೌರವಿಸಿಲ್ಲ
-ವಿನ್ನಬೋಲ್ಡ್ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷೆ ಸುಮ, ಯಾವುದೇ ಕೌನ್ಸಿಲರ್ ಬಗ್ಗೆ ಅಗೌರವ ತೋರಿಲ್ಲ. ಅಂತಹ ಪ್ರವೃತ್ತಿ ನನ್ನದಲ್ಲ ಎಂದರು.

ಕರ್ತವ್ಯ ನಿರ್ವಹಿಸಲು ಅಸಾಧ್ಯವಾದರೆ ಪತ್ರಬರೆದಿಟ್ಟು ಹೋಗಿ
ಸ್ವಚ್ಚತಾ ಕಾರ್ಯವು ಸಮಗ್ರ ರೀತಿಯಲ್ಲಿ ನಿರ್ವಹಿಸಲು ಅಸಾಧ್ಯವಾದರೆ ಅದಕ್ಕೆ ಕಾರಣ ನೀಡಿ ಪತ್ರ ಬರೆದಿಟ್ಟು ಮನೆಗೆ ಹೋಗಿ. ನಿಮ್ಮ ಕರ್ತವ್ಯ ಲೋಪದಿಂದಾಗಿ ನಾಗರಿಕರು ತಲೆ ತಗ್ಗಿಸುವಂತಹ ಪ್ರಮೇಧ ಎದುರಾಗಿದೆ ಎಂದು ಆರೋಗ್ಯ ನೀರಿಕ್ಷಕಿ ಲೈಲಾ ಥೋಮಸ್ ಅವರ ಕರ್ತವ್ಯ ಲೋಪದ ಕುರಿತು ಶುಭದರಾವ್ ಸಭೆಯಲ್ಲಿ ಪ್ರಸ್ತಾಪಿಸಿದರು.

ಪ್ರತಿಭಟನಾ ರಸ್ತೆ ಎಂದೇ ಮರುನಾಮಕರಣ ಮಾಡಿ!
ಆನೆಕೆರೆ-ಮೂರುಮಾರ್ಗವನ್ನು ಪ್ರತಿಭಟನಾ ರಸ್ತೆ ಎಂದೇ ಮರುನಾಮಕರಣ ಮಾಡಿ ಎಂದು ಸದಸ್ಯ ಹರೀಶ್ ದೇವಾಡಿಗ ಲೇವಡಿ ಮಾಡಿದರು. ಹಲವು ಬಾರಿ ನಾಗರಿಕರು ಪ್ರತಿಭಟನೆ ನಡೆಸಿದ ಬಳಿಕ ಕಾಮಗಾರಿಗೆ ಚಾಲನೆ ಎಂಬAತೆ ಪ್ರತಿಬಿಂಬಿಸಿ ಪ್ರಚಾರದ ನಡುವೆ ಕಾಮಗಾರಿ ಕೈಗೊಳ್ಳಲಾಗಿದೆ. ಚರಂಡಿ ವ್ಯವಸ್ಥೆ ಸಮರ್ಪಕವಾಗಿ ಮಾಡದೇ ಕೇವಲ ರಸ್ತೆಗೆ ಡಾಂಬರೀಕರಣ ಮಾಡುವುದರಿಂದ ಎಷ್ಟು ದಿನಗಳ ವರೆಗೆ ಆ ಕಾಮಗಾರಿಯ ಗುಣಮಟ್ಟ ಕಾಪಾಡಲು ಸಾಧ್ಯವೆಂದು ಅವರು ಪ್ರಶ್ನಿಸಿದರು. ಆರಂಭದಲ್ಲಿಯೇ ನಾವೆಲ್ಲರೂ ನಮ್ಮ ಅಭಿಪ್ರಾಯವನ್ನು ಸಭೆಯ ಮುಂದಿಟ್ಟು ಆನೆಕೆರೆ-ಮೂರು ಮಾರ್ಗ ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಮಾರ್ಪಡು ಮಾಡುವಂತೆ ತಿಳಿಸಿದ್ದೇವೆ ಎಂದರು.
ಉಪಾಧ್ಯಕ್ಷೆ ಪಲ್ಲವಿ ರಾವ್, ಮುಖ್ಯಾಧಿಕಾರಿ ರೂಪಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ವರದಿ: ಅರುಣ ಭಟ್ ಕಾರ್ಕಳ

error: