
ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿನ ಹೆಚ್ಚಿನ ಫಾಸ್ಟ್ ಫುಡ್ ಉದ್ಯಮೆದಾರರು ಅವರು ತಯಾರಿಸುವ ಆಹಾರ ಪದಾರ್ಥಗಳಿಗೆ ಹೆಚ್ಚು ರುಚಿ ತರುವಂತಹ ಟೆಸ್ಟಿಂಗ್ ಪೌಡರ್ ಗಳನ್ನು ಬಳಸಿ ಗೋಬಿ ಮಂಚೂರಿ ತಯಾರಿಸುತ್ತಿರುವ ಬಗ್ಗೆ ಸ್ಥಳ ಪರಿಶೀಲನೆಯಿಂದ ಮಾಹಿತಿ ಕಂಡು ಬಂದ ಹಿನ್ನೆಲೆ ಪುರಸಭಾ ಮುಖ್ಯ ಅಧಿಕಾರಿ ರೂಪ ಟಿ ಶೆಟ್ಟಿ ಕಚೇರಿ ವ್ಯವಸ್ಥಾಪಕ ಸೂರ್ಯಕಾಂತ ಖಾರ್ವಿ. ಹಿರಿಯ ಆರೋಗ್ಯ ನಿರೀಕ್ಷಕಿ ಲೈಲಾ ತೋಮಸ್, ಪುರಸಭಾ ಸಿಬ್ಬಂದಿಗಳನ್ನೊಳಗೊAಡು ದಾಳಿ ನಡೆಸಿ ಅಜಿನಮೋಟೋ ವಶ ಪಡಿಸಿಕೊಂಡಿದ್ದಾರೆ. ಅದಲ್ಲದೆ ಸ್ವಚ್ಚತೆ ಕಾಪಾಡಿಕೊಳ್ಳಬೇಕು ಎಂದು ಖಡಕ್ ಎಚ್ಚರಿಕೆ ನೀಡಿದರು. ಮುಂದಿನ ದಿನಗಳಲ್ಲಿ ಅಜಿನ್ ಮೋಟೋ ಫಾಸ್ಟ್ ಫುಡ್ ಅಂಗಡಿಗಳಲ್ಲಿ ಸಿಕ್ಕಿದ್ದಲ್ಲಿ ಅವರ ಅಂಗಡಿಯ ಲೈಸೆನ್ಸ್ ರದ್ದು ಪಡಿಸಿ ಅವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಬೀದಿಬದಿಯ ವ್ಯಾಪಾರಸ್ಥರಿಗೆ ಖಡಕ್ ಎಚ್ಚರಿಕೆ ನೀಡಿದರು ಹಾಗೆ ಅವರುಗಳಿಂದ ಸಂಗ್ರಹವಾಗಿದ್ದ ಅಜ್ಜಿನೋ ಮೋಟೋ ಪೌಡರನ್ನ ವಶಪಡಿಸಿಕೊಳ್ಳಲಾಯಿತು.
ವರದಿ: ಅರುಣ ಕುಮಾರ ಭಟ್ ಕಾರ್ಕಳ
More Stories
ಪಾದಚಾರಿ ಮೇಲೆ ಕ್ರೇನ್ ಹರಿದು ಸ್ಥಳದಲ್ಲೆ ಸಾವು,
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ