May 15, 2024

Bhavana Tv

Its Your Channel

ಕಾರ್ಕಳದಲ್ಲಿ ಗಣರಾಜ್ಯೋತ್ಸವ

ಕಾರ್ಕಳ : ಪ್ರಜಾಪ್ರಭುತ್ವಕ್ಕಾಗಿ ಶ್ರಮಿಸಿದ ಮಹಾನ್ ವ್ಯಕ್ತಿಗಳ ಸ್ಮರಣೆ, ರಾಷ್ಟ್ರಗೀತೆಯ ಗಾಯನ ರಾಷ್ಟ್ರೀಯ ಭಾವೈಕ್ಯತೆ ಜಾಗೃತಗೊಳಿಸುವುದು ಎಂದು ತಹಶೀಲ್ದಾರ್ ಪ್ರದೀಪ್ ಕುರುಡೇಕರ್ ಅಭಿಪ್ರಾಯಪಟ್ಟರು.

ಅವರು ಗುರುವಾರ ಗಣರಾಜ್ಯೋತ್ಸವದ ಅಂಗವಾಗಿ ಗಾಂಧಿ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಬಳಿಕ ಸಂದೇಶ ನೀಡಿದರು. ಸಂವಿಧಾನದ ಆಶಯದಂತೆ ನಡೆದು ಸಮೃದ್ಧ ಭಾರತದ ಕಟ್ಟುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ದಿಸೆಯಿಂದಲೇ ದೇಶಭಕ್ತಿ ಮೈಗೂಡಿಸಿಕೊಳ್ಳಬೇಕೆಂದು ಕುರ್ಡೇಕರ್ ಹೇಳಿದರು.
ಪುರಸಭೆ ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ತಾ.ಪಂ. ಇಒ ಗುರುದತ್ ಎಂ.ಎನ್., ಡಿವೈಎಸ್‌ಪಿ ಎಸ್. ವಿಜಯ ಪ್ರಸಾದ್, ಮುಖ್ಯಾಧಿಕಾರಿ ರೂಪ ಶೆಟ್ಟಿ, ಬಿಇಒ ಚಂದ್ರಯ್ಯ ಜಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮದ್ ಭುವನೇಂದ್ರ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸಂಜಯ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

ಮೆರವಣಿಗೆ
ಇದಕ್ಕೂ ಮುನ್ನ ಅನಂತಶಯನದಲ್ಲಿ ಪುರಸಭಾ ಅಧ್ಯಕ್ಷೆ ಸುಮಾ ಕೇಶವ್ ಧ್ವಜಾರೋಹಣಗೈದರು. ಬಳಿಕ ಅನಂತಶಯನ ವೃತ್ತದಿಂದ ಗಾಂಧಿ ಮೈದಾನದವರೆಗೆ ಮೆರವಣಿಗೆ ಸಾಗಿತು. ಕಾರ್ಕಳ ನಗರ ಹಾಗೂ ಗ್ರಾಮಾಂತರ ಠಾಣೆ ಪೊಲೀಸ್ ತಂಡ, ಸ್ಕೌಟ್ ಗೈಡ್ಸ್, ಗೃಹ ರಕ್ಷಕ ದಳದವರು ಪರೇಡ್ ನಡೆಸಿದರು. ಪರೇಡ್ ಕಮಾಂಡರ್ ಆಗಿ ಆರ್‌ಎಸ್‌ಐ ಸಂಜು ಮಾಲದಿನ್ನಿ, ಪ್ಲಟೂನ್ ಕಮಾಂಡರ್ ನಗರ ಠಾಣೆಯ ಎಎಸ್‌ಐ ದಿನಕರ್ ಕಾರ್ಯನಿರ್ವಹಿಸಿದರು.

ಪರಶುರಾಮನ ಟ್ಯಾಬ್ಲೊ
ಪೆರ್ವಾಜೆ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಅನಂತಕೃಷ್ಣ ಪರಶುರಾಮನ ವೇಷ ಧರಿಸಿ ಟ್ಯಾಬ್ಲೋದಲ್ಲಿ ಸಾಗಿದ್ದು ಮೆರವಣಿಗೆಗೆ ವಿಶೇಷ ಮೆರುಗು ನೀಡಿತ್ತು.

ಸಭಾ ಕಾರ್ಯಕ್ರಮ
ಧ್ವಜಾರೋಹಣದ ಬಳಿಕ ಮಂಜುನಾಥ ಪೈ ಸ್ಮಾರಕ ಸಭಾಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಬಳಿಕ ಎಸ್. ಎನ್. ವಿ ಪ್ರೌಢಶಾಲೆ ಹಿರಿಯಂಗಡಿ, ಸ. ಪ್ರೌ. ಶಾಲೆ ಪೆರ್ವಾಜೆ, ಸ. ಹಿ. ಪ್ರಾ. ಶಾಲೆ ಪತ್ತೊಂಜಿಕಟ್ಟೆ, ಶ್ರೀಮದ್ ಭುವನೇಂದ್ರ ಪ್ರೌಢಶಾಲೆ, ಸ. ಮಾ. ಹಿ. ಪ್ರಾ. ಶಾಲೆ ಪೆರ್ವಾಜೆ ಮತ್ತು ಕಾಬೆಟ್ಟು ಸ. ಪ್ರೌ. ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಲ್ಯಾಪ್‌ಟಾಪ್ ವಿತರಣೆ
2021-22 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಪಡೆದ ಪೆರ್ವಾಜೆ ಸ. ಪ್ರೌ. ಶಾಲೆಯ ಅನಿಕೇತ ನಿಶಿಕಾಂತ್ ಶೆಟ್ಟಿ (624 ಅಂಕ), ಕುಕ್ಕುಜೆ ಸ. ಪ. ಪೂ. ಕಾಲೇಜಿನ ಶ್ರೇಷ್ಠಾ ಹೆಚ್. ಪಂಚಮಿ (623 ಅಂಕ) ಹಾಗೂ ಕುಚ್ಚೂರು ಸ. ಪ್ರೌ. ಶಾಲೆಯ ಕೀರ್ತನ್ (622 ಅಂಕ) ಅವರನ್ನು ಗೌರವಿಸಿ ಲ್ಯಾಪ್‌ಟಾಪ್ ಹಸ್ತಾಂತರಿಸಲಾಯಿತು.

ಸನ್ಮಾನ
ರಾಜ್ಯಮಟ್ಟದ ಯುವ ಸಂಸತ್ತಿನಲ್ಲಿ ಪ್ರಥಮ ಸ್ಥಾನ ಪಡೆದ ಸ. ಪ. ಪೂ. ಕಾಲೇಜಿನ ವಿದ್ಯಾರ್ಥಿನಿ ನವ್ಯಾ, ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಪೆರ್ವಾಜೆ ಸ. ಪ್ರೌ. ಶಾಲೆಯ ವಿದ್ಯಾರ್ಥಿನಿ ಕವನ, ಮಕ್ಕಳ ಹಕ್ಕುಗಳ ಸಂಸತ್ತಿನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯ ವಿದ್ಯಾರ್ಥಿ ಸಿದ್ಧಿರಾಜ್ ಡಿ., ವಾಲಿಬಾಲ್‌ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಬೈಲೂರು ಸ. ಪ. ಪೂ. ಕಾಲೇಜಿನ ವಿದ್ಯಾರ್ಥಿಗಳಾದ ಮಣಿಕಂಠ, ಸುಚಿತ್ ಹಾಗೂ ಶೇಕ್ ಮೊಹಮ್ಮದ್ ನುಮನ್, ರಾಜ್ಯ ವಿಜ್ಞಾನ ಮೇಳದಲ್ಲಿ ಪ್ರಥಮ ಸ್ಥಾನಿಯಾದ ದುರ್ಗಾ ತೆಳ್ಳಾರು ಸ. ಪ್ರೌ. ಶಾಲೆಯ ವಿದ್ಯಾರ್ಥಿನಿ ತನುಜಾ, ಯೋಗಾಸನದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಜ್ಞಾನಸುಧಾ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ದಿಶಾ ವಿ. ಎ., ಶಟ್ಲ್ ಬ್ಯಾಡ್ಮಿಂಟನ್‌ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಕ್ರೈಸ್ಟ್ಕಿಂಗ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಅಲವಿನಾ ಡೇಸಾ ಮತ್ತು ಧನ್ಯಾ ಪೂಜಾರಿ, ರಾಜ್ಯಮಟ್ಟದ ಚೆಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಸಾನ್ವಿ ಬಳ್ಳಾಲ್ ಹಾಗೂ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಉದ್ಭವ ದೇವಾಡಿಗ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ಗ್ರಾಮ ಒನ್ ಯೋಜನೆಯಡಿಯಲ್ಲಿ ಗ್ರಾಮೀಣ ಭಾಗದ ನಾಗರಿಕರಿಗೆ ನಿಗದಿತ ಸಮಯದಲ್ಲಿ ಸೇವೆಯನ್ನು ಒದಗಿಸಿರುವ ಮಿಯ್ಯಾರಿನ ಗ್ರಾಮ ಒನ್ ಆಪರೇಟರ್ ಸುಗುಣ ಶೆಣೈ, ಈದು ಗ್ರಾಮ ಒನ್ ಆಪರೇಟರ್ ಅಪೂರ್ವ ಹಾಗೂ ಬೋಳ ಗ್ರಾಮ ಒನ್ ಆಪರೇಟರ್ ಸುದರ್ಶನ್ ರಾಜ್ ಕುಕ್ಯಾನ್ ಅವರನ್ನು ಇದೇ ಸಂದರ್ಭ ಅಭಿನಂದಿಸಲಾಯಿತು.
ತಾಲೂಕು ಕಚೇರಿಯ ಸಿಬ್ಬಂದಿ ರಿಯಾಝ್ ಅಹಮದ್ ಸ್ವಾಗತಿಸಿದರು. ದೇವದಾಸ್ ಕೆರೆಮನೆ ಮತ್ತು ಗಣೇಶ್ ಜಾಲ್ಸೂರು ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಯ್ಯ ಜಿ. ವಂದಿಸಿದರು. ತಾಲೂಕಿನ 34 ಗ್ರಾಮ ಪಂಚಾಯತ್, 241 ಶಾಲೆಗಳು, ಕಾಲೇಜುಗಳು, ಸರಕಾರಿ ಕಚೇರಿ, ಸಂಘ-ಸAಸ್ಥೆಗಳಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.
ವರದಿ : ಅರುಣ ಭಟ್ ಕಾರ್ಕಳ

error: