February 20, 2024

Bhavana Tv

Its Your Channel

ಕಾರ್ಕಳ ಸೌತ್ ಕೆನರಾಫೋಟೋಗ್ರಾಫರ್ಸ್ ಅಸೋಸಿಯೇಷನಿಂದ ಮಧುಮೇಹ ಕುರಿತು ಮಾಹಿತಿ

ಕಾರ್ಕಳ ಸೌತ್ ಕೆನರಾಫೋಟೋಗ್ರಾಫರ್ಸ್ ಅಸೋಸಿಯೇಷನ್ ಕಾರ್ಕಳ ವಲಯದ ಸದಸ್ಯರಿಗೆ ಪ್ರಥಮ ಬಾರಿಗೆ ತಮ್ಮ ಆರೋಗ್ಯವನ್ನು ಮಧುಮೇಹ ಮತ್ತು ಅಧಿಕ ರಕ್ತದ ಒತ್ತಡವನ್ನು ಹೇಗೆ ಕಾಪಾಡಬೇಕೆಂದು ವೈದ್ಯಕೀಯ ಕಾರ್ಯಗಾರವನ್ನು ಮೂಡಬಿದ್ರೆ ಆಳ್ವಾಸಿನ ವೈದ್ಯರಾದ ಬಿ. ಸದಾನಂದ ನಾಯಕ್ ಫೆ.28ರಂದು ಖಾಸಗಿ ಹೋಟೆಲಿನಲ್ಲಿ ಛಾಯಾ ಗ್ರಾಹಕರಿಗೆ ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಛಾಯಾಗ್ರಹಕರ ಬದುಕು ತುಂಬಾ ಕಷ್ಟಕರವಾದದ್ದು ಅವರಿಗೆ ಸಮಯಕ್ಕೆ ಸರಿಯಾಗಿ ನಿದ್ರೆ ಆಹಾರ ಸಿಗದೇ ಇದ್ದ ಕಾರಣ ಅವರ ಆರೋಗ್ಯವು ಬಹಳ ಬೇಗ ಕೆಡುತ್ತದೆ ಅದಲ್ಲದೆ ಮಧುಮೇಹ ಹಾಗೂ ಅಧಿಕ ರಕ್ತದಒತ್ತಡದ ಕಾಯಿಲೆಗೆ ಗುರಿಯಾಗುತ್ತಾರೆ. ಛಾಯಾಗ್ರಾಹಕರು ಅವರು ಹೋಗುವ ಕಾರ್ಯಕ್ರಮಗಳಲ್ಲಿ ಸಮಯಕ್ಕೆ ಸರಿಯಾಗಿ ಆಹಾರ ತೆಗೆದುಕೊಳ್ಳುವ ಅಭ್ಯಾಸವನ್ನು ಮಾಡಿಕೊಳ್ಳಬೇಕೆಂದು ಖ್ಯಾತ ವೈದ್ಯರಾದ ಬಿ. ಸದಾನಂದ ನಾಯಕ್ ಛಾಯಾಗ್ರಾಹಕರಿಗೆ ಹೇಳಿದರು.

ಈ ಸಂದರ್ಭದಲ್ಲಿ ವಲಯದ ಅಧ್ಯಕ್ಷರಾದ ಈಶ್ವರ ಕುಂಟಾಡಿ ಅತಿಥಿಗಳನ್ನು ಸ್ವಾಗತಿಸಿದರು. ದತ್ತಾತ್ರೇಯ ಹಿರಿ ಅಂಗಡಿ ಪ್ರಾಸ್ತಾವಿಕ ಭಾಷಣ ಮಾಡಿದರು. ವೇದಿಕೆಯಲ್ಲಿ ಗೌರವ ಅಧ್ಯಕ್ಷರಾದ ಮಹೇಂದ್ರ ಶೆಟ್ಟಿ ಉಪಾಧ್ಯಕ್ಷರಾದ ವಿಠಲ ಅಮೀನ್ ಉಪಸ್ಥಿತರಿದ್ದರು.

ವರದಿ: ಅರುಣ ಭಟ್ ಕಾರ್ಕಳ

error: