July 14, 2024

Bhavana Tv

Its Your Channel

ಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪ್ರಯುಕ್ತ ಹಸಿರುಹೊರೆ ಕಾಣಿಕೆಯನ್ನು ದೇವಳಕ್ಕೆ ಮೆರವಣಿಗೆ

ಕಾರ್ಕಳ: ಐತಿಹಾಸಿಕ ಹಿನ್ನಲೆಯುಳ್ಳ ಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪ್ರಯುಕ್ತವಾಗಿ ಮಂಗಳವಾರದAದು ಹಸಿರುಹೊರೆ ಕಾಣಿಕೆಯನ್ನು ದೇವಳಕ್ಕೆ ಮೆರವಣಿಗೆಯ ಮೂಲಕ ತರಲಾಯಿತು.

ಇಕ್ಕೇರಿ ರಾಜನ ಕಾಲಘಟ್ಟದಲ್ಲಿ ಸಂಸ್ಥಾನದ ರಕ್ಷಣೆಗಾಗಿ ಕಾರ್ಕಳಕ್ಕೆ ಅಗಮಿಸಿದ ರಾಮಕ್ಷತ್ರಿಯ ಸಮಾಜದವರು ಆರಾಧಿಸಿಕೊಂಡು ಬಂದಿದ್ದ ಕೋಟೆ ಶ್ರೀ ಮಾರಿಯಮ್ಮ, ಕೋಟೆ ಆಂಜನೇಯ ಸ್ವಾಮಿ ಹಾಗೂ ರಣವೀರರ ಆರಾಧ್ಯ ದೇವಿ ಉಚ್ಚಂಗಿ ಗುಡಿ ಪ್ರಸಕ್ತ ಕಾಲಘಟ್ಟದಲ್ಲಿ ಜೀಣೋದ್ಧಾರವಾಗುತ್ತಿದೆ.

ಮಾರ್ಚ್ 9ರಿಂದ 15ರ ವರೆಗೆ ಧಾರ್ಮಿಕ ವಿಧಿವಿಧಾನದೊಂದಿಗೆ ಇದೇ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಜರಗಲಿರುವುದು.
ಇದರ ಅಂಗವಾಗಿ ಮಂಗಳವಾರ ಮಧ್ಯಾಹ್ನ 3.00 ಗಂಟಗೆ ಕಾರ್ಕಳ ಬಂಡೀಮಠ ಬಸ್ಸು ನಿಲ್ದಾಣ ವಠಾರದಿಂದ ಸಚಿವ ವಿ.ಸುನೀಲ್‌ಕುಮಾರ್ ತೆಂಗಿನ ಒಡೆದು ಹಸಿರು ಹೊರೆಕಾಣಿಕೆ ಮೆರೆವಣಿಗೆಗೆ ಚಾಲನೆ ನೀಡಿದರು.

ಕಾರ್ಕಳ ಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಬಿ,ಕೆ,ಗೋಪಾಲಕೃಷ್ಣ ರಾವ್, ಸುರೇಶ್ ರಾವ್, ರಾಘವೇಂದ್ರ ರಾವ್, ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷ ವಿಜಯಕುಮಾರ್ ಶೆಟ್ಟಿ, ಶ್ರೀರಾಮಸೇನೆಯ ಪರವೋಚ್ಛ ನಾಯಕ ಪ್ರಮೋದ್ ಮುತಾಲಿಕ್, ಜಗದೀಶ್ ಮಲ್ಯ, ನಿತ್ಯಾನಂದ ಪೈ, ಮುನಿಯಾಲು ಉದಯಕುಮಾರ್ ಶೆಟ್ಟಿ, ಡಿ.ಆರ್.ರಾಜು, ಭಾಸ್ಕರ್ ಕುಲಾಲ್, ನವೀನ್ ದೇವಾಡಿಗ, ಸಾಣೂರು ಶ್ರೀರಾಮ್ ಭಟ್, ಸುಬ್ರಹ್ಮಣ್ಯ ಭಟ್, ಮಣಿರಾಜ ಶೆಟ್ಟಿ, ಕಂಟ್ರಾಕ್ಟರ್ ಸುಜಯ್ ಶೆಟ್ಟಿ, ಅಂಟೋನಿ ಡಿಸೋಜಾ ನಕ್ರೆ, ಇರ್ವತ್ತೂರು ಉದಯ ಎಸ್.ಕೋಟ್ಯಾನ್ ಕಾರ್ಕಳ ಪುರತಸಭಾ ಅಧ್ಯಕ್ಷೆ ಸುಮಕೇಶವ್, ಉಪಾಧ್ಯಕ್ಷೆ ಪಲ್ಲವಿ ರಾವ್ ಮೊದಲಾದವರು ಜೊತೆಗಿದ್ದರು.

ವಿಶೇಷತೆ ಏನ್ನಿತ್ತು?
ಮೆರವಣಿಗೆ ಆರಂಭದಲ್ಲಿ ಕಲಶ ಹಾಗೂ ಅಕ್ಕು ಮುಡಿ ಹೊತ್ತ ಮಹಿಳೆಯರು, ಅಲಂಕಾರಿಕ ಕೊಡೆಗಳು ಹಿಡಿದ ಮಹಿಳೆಯರು, ಮಹಿಳೆ ಹಾಗೂ ಬಾಲಕಿಯರಿಂದ ಕುಣಿತ ಭಜನೆ ತಂಡಗಳು, ಓಂಕಾರ ಧ್ವಜ ಹಿಡಿದ ಮಹಿಳೆಯರು, ಕಲಶ ಹಿಡಿದ ಹೆಂಗಸರು, ನಾದಸ್ವರ ವಾದನ, ಡೋಲು ಕೊಳಲು, ಚೆಂಡೆ, ನಾಸಿಕ್ ಬ್ಯಾಂಡ್, ಕಂಗೀಲು ಕುಣಿತ, ಕೀಲುಕುದುರೆ, ಛದ್ಮವೇಷ, ಹುಲಿವೇಷ, ದೊಂದಿ ಸೇವೆ ತಂಡ, ಹಸಿರು ಹೊರೆ ಕಾಣಿಕೆ ಹೊತ್ತ ಸುಮಾರು 250 ಕ್ಕೂ ವಾಹನಗಳಿದ್ದವು. ಮೆರವಣಿಗೆಯಲ್ಲಿ ಮಹಿಳೆಯರೇ ಹೆಚ್ಚಾಗಿ ಕಂಡುಬAದರು.

ವರದಿ: ಅರುಣ ಭಟ್ ಕಾರ್ಕಳ

error: